– ಭಾರೀ ಚರ್ಚೆಗೆ ಗ್ರಾಸವಾದ ಕಂದಾಯ ಸಚಿವರ ಪೋಸ್ಟ್
– ರಾಹುಲ್ ಗಾಂಧಿ ಅವರೇ ಏನಿದು ಗ್ಯಾರಂಟಿ?
ಬೆಂಗಳೂರು: ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ಸಮಸ್ಯೆ ಬಗೆಹರಿಸಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ಬಿಬಿಎಂಪಿಗೆ (BBMP) ಮನವಿ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.
Advertisement
ಹೌದು. ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. ಬಿಬಿಎಂಪಿ ಅಥವಾ ಬಿಎಂಆರ್‌ಸಿಇಎಲ್ ಯಾರಾದ್ರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ: ಸಿಎಂ ಭರವಸೆ
Advertisement
ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. @bbmpcommr ಅಥವಾ @BMRCL MD ಯಾರಾದ್ರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ. pic.twitter.com/qRDqy5NEzZ
— Krishna Byre Gowda (@krishnabgowda) August 14, 2024
Advertisement
ರಸ್ತೆ ಇರುವ ಜಾಗ ಕೃಷ್ಣ ಬೈರೇಗೌಡರ ಕ್ಷೇತ್ರಕ್ಕೆ ಬರುತ್ತಿದೆ. ಹೀಗಿದ್ದರೂ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
Advertisement
ನರೇಂದ್ರ ಸಿಂಹ ಮೂರ್ತಿ ಎಂಬವರು, ಮಂತ್ರಿಗಳೇ ಇಷ್ಟು ಅಸಹಾಯಕರಾದರೆ ಹೇಗೆ? ಒಂದು ಫೋನ್ ಮಾಡಿದರೆ ಬಿಬಿಎಂಪಿ ಕಮಿಷನರ್ ನಿಮ್ಮ ಫೋನ್ ಸ್ವೀಕರಿಸುತ್ತಿದ್ದಾರೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದೇಶ ಮೊದಲು.. ಭಾರತವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ: ಪ್ರಧಾನಿ ಮೋದಿ ಪ್ರತಿಜ್ಞೆ
A minister’s state in the state of Karnataka
Instead of taking action, he is pleading.
— K S CHANDRASHEKAR (@chandra63shekar) August 15, 2024
ನೀವು ರಾಜ್ಯದ ಮಂತ್ರಿಗಳು. ರಾಹುಲ್ ಗಾಂಧಿ ಅವರೇ ಏನಿದು ಗ್ಯಾರಂಟಿ? ಕಂದಾಯ ಸಚಿವರು ಬೆಂಗಳೂರಿನಲ್ಲಿ ಗುಂಡಿ ಬಿದ್ದ ರಸ್ತೆಯನ್ನು ಸರಿ ಮಾಡುವಂತೆ ಅಧಿಕಾರಿಗಳನ್ನು ಟ್ವಿಟ್ಟರ್‌ನಲ್ಲಿ ಮನವಿ ಮಾಡುತ್ತಿದ್ದಾರೆ.
ತಮ್ಮದೇ ಸರ್ಕಾರದಲ್ಲಿ ತಾನೇ ಸಚಿವರಾಗಿದ್ದರು ಅಸಹಾಯಕತೆಯಿಂದ ಗುಂಡಿ ಮುಚ್ಚಿ ಎಂದು ಅಂಗಲಾಚುವ ದೈನಾಸಿ ಸ್ಥಿತಿ ಬಂದಿರುವುದು ಸರ್ಕಾರ ದುರಾವಸ್ಥೆ, ದುರಾಡಳಿತಕ್ಕೆ ಸಾಕ್ಷಿ ಆಗಿದೆ. ಗುಂಡಿ ಮುಚ್ಚಿ ಎಂದು ನೇರವಾಗಿ ಹೇಳಬೇಕಂದ್ರೆ ಹಣ ಇಲ್ಲ. ಅದಕ್ಕೆ ಜಾಲತಾಣದಲ್ಲಿ ಅಂಗಲಾಚುತ್ತಿದ್ದಾರೆ ಪಾಪ. ಸಚಿವರಿಗೆ ಹೀಗಾದ್ರೆ ಸಾಮಾನ್ಯರ ಕತೆ ಏನು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ತಮ್ಮದೇ ಸರ್ಕಾರದಲ್ಲಿ ತಾನೇ ಸಚಿವರಾಗಿದ್ದರು ಅಸಹಾಯಕತೆಯಿಂದ ಗುಂಡಿ ಮುಚ್ಚಿ ಎಂದು ಅಂಗಲಾಚುವ ದೈನಾಸಿ ಸ್ಥಿತಿ ಬಂದಿರುವುದು ಸರ್ಕಾರ ದುರಾವಸ್ಥೆ, ದುರಾಡಳಿತಕ್ಕೆ ಸಾಕ್ಷಿ ಆಗಿದೆ. ಗುಂಡಿ ಮುಚ್ಚಿ ಎಂದು ನೇರವಾಗಿ ಹೇಳಬೇಕಂದ್ರೆ ಹಣ ಇಲ್ಲ. ಅದಕ್ಕೆ ಜಾಲತಾಣದಲ್ಲಿ ಅಂಗಲಾಚುತ್ತಿದ್ದಾರೆ ಪಾಪ. ಸಚಿವರಿಗೆ ಹೀಗಾದ್ರೆ ಸಾಮಾನ್ಯರ ಕತೆ ಏನು?
— Mirchi Corner (@samva123) August 15, 2024