ಕಾರವಾರ: ಡೆತ್‍ನೋಟ್ ಬರೆದಿಟ್ಟು ಸರ್ಕಾರಿ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರವಾರ ನಗರದ ಪ್ರೀಮಿಯರ್ ಹೊಟೇಲ್‍ನಲ್ಲಿ ನಡೆದಿದೆ.
ಕಾರವಾರ ಉಪವಿಭಾಗ ಕಚೇರಿಯ ಕಂದಾಯ ಇಲಾಖೆಯಲ್ಲಿ ಲೆಕ್ಕಾಧಿಕಾರಿಯಾಗಿದ್ದ ಈಶ್ವರ್ ಭಟ್(38) ನೇಣಿಗೆ ಶರಣಾಗಿದ್ದು, ಇವರು ಮೂಲತಃ ಹೊನ್ನಾವರ ಮೂಲದವರಾಗಿದ್ದಾರೆ. ಈಶ್ವರ್ ಭಟ್ ಅವರು ಅನಾರೋಗ್ಯದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‍ನೋಟ್ ಬರೆದಿಟ್ಟಿದ್ದು, ಪತ್ನಿ ಮತ್ತು ಪೊಲೀಸರಿಗೆ ಪ್ರತ್ಯೇಕ ಡೆತ್‍ನೋಟ್ ಬರೆದಿದ್ದಾರೆ.
ಪತ್ನಿಗೆ ಬರೆದ ಡೆತ್‍ನೋಟ್‍ನಲ್ಲಿ, ನಾನು ನಿಮಗಾಗಿ ಆಸ್ತಿ ಮಾಡಿಲ್ಲ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬರೆದು ಪತ್ನಿಗೆ ಪತ್ರದಲ್ಲಿ ಕ್ಷಮೆಯಾಚನೆ ಕೇಳಿಕೊಂಡಿದ್ದಾನೆ. ಇದನ್ನೂ ಓದಿ: ಹೆಚ್‌ಐವಿ ಪೀಡಿತ ಮಹಿಳೆಯ ಕಿಡ್ನಿಯಿಂದ 10 ಕೆಜಿ ಗೆಡ್ಡೆ ತೆಗೆದ ದೆಹಲಿ ವೈದ್ಯರು
ಸ್ಥಳಕ್ಕೆ ಕಾರವಾರ ನಗರ ಠಾಣೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ಪ್ರಕರಣ ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.