ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಕಂದಾಯ ಇಲಾಖೆ ಸಿಬ್ಬಂದಿ

Public TV
1 Min Read
GADAG ACB

ಗದಗ: ಕಂದಾಯ ಇಲಾಖೆ ಕಂಪ್ಯೂಟರ್ ಆಪರೇಟರ್ ಓರ್ವ ಲಂಚ ಪಡೆಯುವ ವೇಳೆ ಎಸಿಬಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಜಿಲ್ಲೆಯ ಮುಂಡರಗಿಯಲ್ಲಿ ನಡೆದಿದೆ.

ಗದಗ ಎಸಿಬಿ, ಡಿವೈಎಸ್ಪಿ, ಎಮ್‍ವಿ ಮಲ್ಲಾಪೂರ ನೇತೃತ್ವದಲ್ಲಿ ಬುಧವಾರ ದಾಳಿ ನಡೆದಿದ್ದು, ಈ ವೇಳೆ ಮುಂಡರಗಿ ತಹಶಿಲ್ದಾರ್ ಕಚೇರಿಯ ಕಂದಾಯ ವಿಭಾಗದ ಕಂಪ್ಯೂಟರ್ ಆಪರೇಟರ್ ಎಮ್‍ಐ ಉಪ್ಪಾರಡ್ಡಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ಇಡಿಯಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅರೆಸ್ಟ್

GADAG ACB 1

ಆರ್‍ಟಿಸಿ ಕಲಂ 11ರ ಜಮೀನು ಉತಾರದಲ್ಲಿ ಹೆಸರು ಬದಲಾವಣೆಗಾಗಿ ಫಲಾನುಭವಿಯಿಂದ 11 ಸಾವಿರ ರೂ. ಲಂಚ ಬೇಡಿಕೆ ಇಟ್ಟಿದ್ದರು. ಕಳೆದ ವಾರ ಫಲಾನುಭವಿಯಿಂದ 5 ಸಾವಿರ ರೂ. ಪಡೆದಿದ್ದು, ಇಂದು ಇನ್ನುಳಿದ 6 ಸಾವಿರ ರೂ. ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ನಟ ಚೇತನ್ ಬೆನ್ನಿಗೆ ನಿಂತ ರಮ್ಯಾ

ಉಪ್ಪಾರಡ್ಡಿಯನ್ನು ಎಸಿಬಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಎಸಿಬಿ ಸಿಪಿಐ ದೇಸಾಯಿ ಹಾಗೂ ಸಿಬ್ಬಂದಿ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಗದಗ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *