ಬೆಂಗಳೂರು: ವಿಧಾನಸೌಧ (Vidhanasoudha) ದಲ್ಲಿ ನಡೆದ ಬ್ಲಾಕ್ ಅಂಡ್ ವೈಟ್ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್ ಆಗಿದೆ.
ಹೌದು. ಖಾಕಿ ಕಣ್ಗಾವಲಿನ ನಡುವೆಯೂ ಪೊಲೀಸ್ ಕಾನ್ಸ್‌ಟೇಬಲ್ ಮದ್ಯದ ಬಾಟ್ಲಿಯೊಂದಿಗೆ ವಿಧಾನಸೌಧದ ಒಳಗೆ ಹೋಗಿದ್ದಾನೆ. ಶಕ್ತಿಸೌಧದಲ್ಲಿದ್ದ ಪೊಲೀಸ್ ಅಧಿಕಾರಿಗೆ ಕೊಡಲು ಬ್ಲಾಕ್ ಅಂಡ್ ವೈಟ್ ದುಬಾರಿ ಬೆಲೆಯ ಎಣ್ಣೆ ತೆಗೆದುಕೊಂಡು ಹೋಳಿ ಹಬ್ಬದ ಪ್ರಯುಕ್ತ ಗಿಫ್ಟ್ ಮಾಡಲು ಹೋಗಿದ್ದಾನೆ. ಪೊಲೀಸ್ ಅಧಿಕಾರಿಗೆ ಅದೇನ್ ಅನ್ನಿಸಿತೋ ತನ್ನ ಶಿಷ್ಯನ ಬಳಿ ಎಣ್ಣೆ ಬಾಟ್ಲಿ ತೆಗೆದುಕೊಳ್ಳದೇ ವಾಪಸ್ ಕಳಿಸಿಕೊಟ್ಟಿದ್ದಾರೆ.
Advertisement
Advertisement
ಬಾಸ್ ಎಣ್ಣೆ ಬಾಟ್ಲಿ ನಿರಾಕರಿಸಿದ್ದರಿಂದ ಬಾಟ್ಲಿಯೊಂದಿಗೆ ವಿಧಾನಸೌಧ ವೆಸ್ಟ್ ಗೇಟ್‍ನಿಂದ ಹೊರಗಡೆ ಬರೋದಕ್ಕೆ ಕಾನ್ಸ್‌ಟೇಬಲ್ ಮುಂದಾಗಿದ್ರು. ಈ ವೇಳೆ ದುರಾದೃಷ್ಟವಶಾತ್ ಕೈ ಜಾರಿ ಎಣ್ಣೆ ಬಾಟ್ಲಿ ಕೆಳಗಡೆ ಬಿದ್ದು ಒಡೆದು ಹೋಗಿದೆ. ಮದ್ಯದ ಬಾಟ್ಲಿ ಪೀಸ್ ಪೀಸ್ ಆಗುತ್ತಿದ್ದಂತೆ ಕಾನ್ಸ್‌ಟೇಬಲ್ ಆತುರದಲ್ಲಿಯೇ ಬಾಟ್ಲಿ ಪೀಸ್‍ಗಳನ್ನ ಬಾಚಿಕೊಂಡು ಪರಾರಿಯಾಗಿದ್ದಾನೆ. ಭದ್ರತೆಯಲ್ಲಿದ್ದ ಪೊಲೀಸರು ಕೆಲ ಗಂಟೆಗಳ ಕಾಲ ದಂಗಾಗಿ ಹೋಗಿದ್ದಾರೆ.
Advertisement
Advertisement
ಬಾಟ್ಲಿ ತಂದ ವ್ಯಕ್ತಿ ಯಾರು, ಯಾಕಾಗಿ ತಂದ್ರು ಅನ್ನೋದು ಭದ್ರತೆಯಲ್ಲಿದ್ದ ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು. ಹೀಗಾಗಿ ಶಕ್ತಿಸೌಧದ ವೆಸ್ಟ್ ಗೇಟ್ ಹಾಗೂ ನಾರ್ಥ್ ಗೇಟ್ ಸಿಸಿಟಿವಿ ಸರ್ಚ್ ಮಾಡಿದ್ದಾರೆ. ಆಗ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಿದ್ದು, ಹೈಕೋರ್ಟ್ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ಅನ್ನೋದು ಖಾತ್ರಿಯಾಗಿದೆ. ಇದನ್ನೂ ಓದಿ: ಫಾಸ್ಟ್ ಟ್ಯಾಗ್‌ನಲ್ಲಿ ಹಣವಿಲ್ಲದೇ ಟೋಲ್ ಬಳಿಯೇ ನಿಂತ ಇವಿ ಬಸ್‌ಗಳು
ವಿಧಾನಸೌಧ ಪೊಲೀಸರಿಗೆ ಬಾಟ್ಲಿ ವೀರನ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕರೆದು ವಿಚಾರಣೆ ಮಾಡಿದಾಗ ಬ್ಲಾಕ್ ಅಂಡ್ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್ ಮಾಡಿದ್ದಾನೆ. ಸದ್ಯ ಕಾನ್ಸ್‌ಟೇಬಲ್ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದು ಇಲಾಖಾ ತನಿಖೆಗೆ ಆದೇಶ ಮಾಡಲಾಗಿದೆ.