ಮಂಡ್ಯ: ಇಷ್ಟು ದಿನಗಳ ಕಾಲ ಮಾತಿನ ಮೂಲಕ ಜೆಡಿಎಸ್‍ನಲ್ಲಿ (JDS) ಬಂಡಾಯ ಸೂಚಿಸುತ್ತಿದ್ದ ಕೆ.ಆರ್. ಪೇಟೆ (KR Pete) ನಾಯಕರು, ಇದೀಗ ಬಂಡಾಯ ಸಭೆ ನಡೆಸುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ನಿರ್ಧಾರದ ವಿರುದ್ಧ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ.
Advertisement
ಇಷ್ಟು ವರ್ಷಗಳ ಕಾಲ ಕೊನೆಯ ಹಂತದಲ್ಲಿ ಚುನಾವಣೆಗೆ (Election) ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದ ಕುಮಾರಸ್ವಾಮಿ ಈ ಬಾರಿ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಡಿಫರೆಂಟ್ ಸ್ಟ್ರ್ಯಾಟಜಿ ಮೂಲಕ ಎದುರಿಸಲು ಮುಂದಾಗಿದ್ರು. ಅದ್ರಲ್ಲೂ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಕೊನೆಯ ಹಂತದಲ್ಲಿ ಅಭ್ಯರ್ಥಿ ಆಯ್ಕೆಯನ್ನು ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ ಬಹುಬೇಗನೇ ಕುಮಾರಸ್ವಾಮಿ ತಮ್ಮ ಆಪ್ತರಾದ ಹೆಚ್.ಡಿ.ಮಂಜು ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಈ ಸ್ಟ್ರ್ಯಾಟಜಿ ನಡೆಗೆ ಕೆ.ಆರ್. ಪೇಟೆ ಜೆಡಿಎಸ್‍ನಲ್ಲಿ ಹೆಚ್.ಡಿ.ರೇವಣ್ಣ (HD Revanna) ಅವರ ಜೊತೆ ಗುರುತಿಸಿಕೊಂಡಿರುವ ನಾಯಕರು ಬಂಡಾಯ ಎದ್ದಿದ್ದಾರೆ.
Advertisement
Advertisement
ಕಳೆದ ಬಾರಿ ಕೆ.ಆರ್. ಪೇಟೆ ಉಪಚುನಾಣೆಯ ಜೆಡಿಎಸ್ ಅಭ್ಯರ್ಥಿಯಾಗಿದ್ದ ಬಿ.ಎಲ್.ದೇವರಾಜು ಅವರಿಗೆ ಈ ಬಾರಿ ಟಿಕೆಟ್ ತಪ್ಪಿಸಿ ಕುಮಾರಸ್ವಾಮಿ ಅವರು ತಮ್ಮ ಆಪ್ತರಾದ ಹೆಚ್.ಡಿ.ಮಂಜುಗೆ ಟಿಕೆಟ್ ನೀಡಿದ್ದಕ್ಕೆ ಬಿ.ಎಲ್.ದೇವರಾಜು & ಟೀಮ್ ಬಂಡಾಯ ಎದ್ದಿದೆ. ಇಷ್ಟು ದಿನ ಜೆಡಿಎಸ್ ವಿರುದ್ಧ ಅಸಮಾಧಾನದ ಕುರಿತು ಮಾತನಾಡುವ ಮೂಲಕ ಬಂಡಾಯದ ಸೂಚನೆ ನೀಡುತ್ತಿದ್ದ ಬಿ.ಎಲ್.ದೇವರಾಜು, ಕೃಷ್ಣೇಗೌಡ ಹಾಗೂ ಸಂತೋಷ್ ಅವರು ಕೆ.ಆರ್. ಪೇಟೆಯಲ್ಲಿ ಕುಮಾರಸ್ವಾಮಿ ನಿರ್ಧಾರವನ್ನು ವಿರೋಧಿಸಿ ಬಂಡಾಯ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಐದು ಸಾವಿರ ಮಂದಿಯನ್ನು ಸೇರಿಸಿ ಸಭೆಯ ಉದ್ದಕ್ಕೂ ಕುಮಾರಸ್ವಾಮಿ ಅಭ್ಯರ್ಥಿ ಆಯ್ಕೆ ವಿಚಾರ ತಪ್ಪು, ಬಿ.ಎಲ್.ದೇವರಾಜು ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಆಗ್ರಹಿಸುವುದರ ಜೊತೆಗೆ ಬಿ.ಎಲ್.ದೇವರಾಜುಗೆ ಟಿಕೆಟ್ ನೀಡದಿದ್ದಲ್ಲಿ ಮುಂದೆ ಈ ಬಗ್ಗೆ ಯೋಚಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Advertisement
ಸಭೆಯ ಉದ್ದಕ್ಕೂ ಬಂಡಾಯ ನಾಯರು ಬಿ.ಎಲ್.ದೇವರಾಜು ಪರ ಬ್ಯಾಟ್ ಬೀಸಿದ್ರೆ, ದೇವರಾಜು ತನಗೆ ಅನ್ಯಾಯವಾಗುತ್ತಿದೆ ಎಂದು ಜನರಿಗೆ ಹೇಳಿದ್ರು. ನನಗೆ ಎರಡು ಬಾರಿ ಉಪಚುನಾವಣೆಯಲ್ಲಿ ಟಿಕೆಟ್ ಕೊಡಲಾಗಿದೆ. ಆದ್ರೆ ಸಾರ್ವಜನಿಕ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಿಲ್ಲ. ಕಳೆದ ಉಪಚುನಾವಣೆಯಲ್ಲಿ ಕುಮಾರಸ್ವಾಮಿ ಒಂದು ದಿನ ಬಂದು ನನ್ನ ಪರ ಪ್ರಚಾರ ಮಾಡಿದ್ದರೆ ನಾನು ಗೆಲ್ಲುತ್ತಿದ್ದೆ. ಆದ್ರೆ ಕುಮಾರಸ್ವಾಮಿ ಒಂದು ದಿನವೂ ನನ್ನ ಪರ ಪ್ರಚಾರ ಮಾಡಲಿಲ್ಲ. ಯಡಿಯೂರಪ್ಪ ಹಾಗೂ ಅವರ ಮಗ ಇಲ್ಲೇ ಇದ್ದು ಚುನಾವಣೆ ಪ್ರಚಾರ ಮಾಡಿದ್ರು, ಆದ್ರೆ ಕುಮಾರಸ್ವಾಮಿ ಮಾತ್ರ ಬರಲಿಲ್ಲ. ಆಗಿದ್ರು ಸಹ ನಾನು 56 ಸಾವಿರ ಮತ ತೆಗೆದುಕೊಂಡಿದ್ದೇನೆ. ನನಗೆ ಟಿಕೆಟ್ ಕೊಡಲಿ, ಬಿಡಲಿ ನನಗೆ ಇದೇ ಚುನಾವಣೆ ಕೊನೆ ಎನ್ನುವ ಮೂಲಕ ಕೆ.ಆರ್. ಪೇಟೆ ಜೆಡಿಎಸ್‍ನಲ್ಲಿ ಬಂಡಾಯದ ಬಾವುಟವನ್ನು ದೇವರಾಜು ಹಾರಿಸಿದ್ದಾರೆ.
ಒಟ್ಟಾರೆ ಸದ್ಯ ಕಮಲ ಅರಳಿಸುವ ಪ್ಲ್ಯಾನ್‌ನಲ್ಲಿರುವ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಮತ್ತೆ ದಳಪತಿಗಳು ಲಗ್ಗೆ ಇಡಲು ಕುಮಾರಸ್ವಾಮಿ ಅವರು ಮಾಡಿದ್ದ ಸ್ಟ್ರ್ಯಾಟಜಿ ಬಂಡಾಯದ ಬೇಗುದಿಯ ಮೂಲಕ ರಿವರ್ಸ್ ಆಗಿದೆ. ಈ ಬಂಡಾಯವನ್ನು ಜೆಡಿಎಸ್ ನಾಯಕರು ಎಷ್ಟರ ಮಟ್ಟಿಗೆ ಶಮನ ಮಾಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k