DistrictsKarnatakaLatestLeading NewsMain PostMandya

ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ: ನಾರಾಯಣಗೌಡ

Advertisements

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ನಿಖಿಲ್ ಸೋಲುವುದಕ್ಕೆ ಅವರ ದೊಡ್ಡಪ್ಪ ರೇವಣ್ಣನೇ ಕಾರಣ ಎಂದು ಸಚಿವ ಕೆ.ಸಿ. ನಾರಾಯಣ ಹೇಳಿದ್ದಾರೆ.

ನಗರದ ಕೆ.ಆರ್.ಪೇಟೆಯ ಸಿಂಧಘಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ. ನಿಖಿಲ್ ಕುಮಾರಸ್ವಾಮಿ ಬಗ್ಗೆ ನನಗೆ ಗೌರವ ಇದೆ. ಅವರು ಸುಮ್ಮನೆ ಮಾತನಾಡುವುದು ತಪ್ಪು. ಕುಮಾರಸ್ವಾಮಿ ಸುಪುತ್ರ ನಿಖಿಲ್ ಇನ್ನೂ ಚಿಕ್ಕ ರಾಜಕಾರಣಿ. ಪ್ರತಿಯೊಂದರ ಬಗ್ಗೆ ಮಾಹಿತಿ ತಿಳಿದಕೊಂಡು ನಿಖಿಲ್ ಮಾತನಾಡಬೇಕು. ಒಂದೂವರೆ ವರ್ಷ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅವರ ದೊಡ್ಡಪ್ಪನೇ ಎನರ್ಜಿ ಮಿನಿಸ್ಟರ್ ಆಗಿದ್ದರು. ಸಾವಿರಾರು ಸಬ್ ಸ್ಟೇಷನ್ ಕೊಟ್ಟೆವು ಅಂತ ಹೇಳುತ್ತಾರೆ. ಆದರೆ ಕೆ.ಆರ್.ಪೇಟೆಗೆ ಒಂದೇ ಒಂದು ಕೊಟ್ಟಿದ್ದಾರಾ? ಒಂದೇ ಒಂದು ಬಾರಿ ಎನರ್ಜಿ ಮಿನಿಸ್ಟರ್ ಆಗಿ ತೋರಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದೆಹಲಿ ಡಿಸಿಪಿ ಕಾರಿಗೆ ಡಿಕ್ಕಿ ಹೊಡೆದಿದ್ದ Paytm ಸಿಇಒ – ಜಾಮೀನಿನ ಮೇಲೆ ಬಿಡುಗಡೆ

Revanna

ಚನ್ನರಾಯಪಟ್ಟಣ ತಾಲೂಕು – ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಕೊಟ್ಟುಕೊಂಡಿದ್ದಾರೆ. ನಮ್ಮ ತಾಲೂಕಿಗೆ ಎಷ್ಟು ಕೊಟ್ಟಿದ್ದಾರೆ ಎಂದು ನಿಖಿಲ್ ಕುಮಾರ ಸ್ವಾಮಿ ಅವರ ದೊಡ್ಡಪ್ಪನನ್ನೇ ಕೇಳಲಿ. ಮಾಹಿತಿ ನೀಡಿ ಎಂಬ ಹಕ್ಕಿನಲ್ಲಿ ಕೇಳಲಿ. ಅವರ ದೊಡ್ಡಪ್ಪ ಬಂದ ಅನುದಾನವನ್ನು ಹಾಸನಕ್ಕೆ ಹಾಕಿಕೊಂಡಿರುವ ಬಗ್ಗೆ ಪಾಪ ನಿಖಿಲ್‍ಗೆ ವಿಷಯ ಗೊತ್ತಿಲ್ಲ. ಮಂಡ್ಯವನ್ನು ಖಾಲಿ ಬಿಟ್ಟರು. ನಿಖಿಲ್ ಕುಮಾರಸ್ವಾಮಿ ಸೋಲಬೇಕಾದರೆ ಕೆಲಸಗಳು ಕಾರಣ. ಕುಮಾರಸ್ವಾಮಿ ಖಾಲಿ ಪೇಪರ್ ಹಿಡಿದುಕೊಂಡು ಇಷ್ಟು ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿಕೊಂಡು ಬಂದರು. ಆದರೆ ರೇವಣ್ಣ ಅವರು ಲೆಟರ್ ಹೆಡ್ ನಲ್ಲಿ ಹಣ ಹುಡುಕಿಕೊಂಡು ಹೋಗಿ ಅವರ ಜಿಲ್ಲೆ ಅಭಿವೃದ್ಧಿ ಮಾಡಿಕೊಂಡರು. ಅಲ್ಲಿ ಅವರ ಮಗನನ್ನು ಗೆಲ್ಲಿಸಿಕೊಂಡಿರು. ನಿಖಿಲ್‍ನ ಸೋಲಿಸಿದರು. ಅದಕ್ಕಿಂತ ನಮ್ಮ ನಿಖಿಲ್ ಕುಮಾರಣ್ಣಂಗೆ ಪಾಠ ಬೇಕಾ? ಈಗಲಾದರೂ ನಿಖಿಲ್ ಸ್ವಲ್ಪ ತಿಳಿದುಕೊಂಡು ಮಾತನಾಡಲಿ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್

Leave a Reply

Your email address will not be published.

Back to top button