ಬೆಂಗಳೂರು: ಇಂದು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶದಲ್ಲಿ ಹಾಸನ ಜಿಲ್ಲೆ ಮೊದಲ ಸ್ಥಾನ ಪಡೆದರೆ, ರಾಮನಗರ ಎರಡನೇ ಸ್ಥಾನ ಪಡೆದಿದೆ. ಆದರೆ ಹಾಸನ ಫಸ್ಟ್ ಬಂದಿದ್ದಕ್ಕೆ ಎಲ್ಲ ರೇವಣ್ಣ ನಿಂಬೆಹಣ್ಣು ಪ್ರಭಾವ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್ ಆಗುತ್ತಿದೆ. ಎಸ್‍ಎಸ್‍ಎಲ್‍ಸಿ ರಿಸಲ್ಟ್ ಹಾಸನ ಫಸ್ಟ್ ಎಂದು ನೆಟ್ಟಿಗರು ರೇವಣ್ಣ ಕಾಲೆಳೆದಿದ್ದಾರೆ. ಇನ್ನು ರಾಮನಗರ ದ್ವಿತೀಯ ಸ್ಥಾನ ಇದು ಸಿಎಂ ಕೈವಾಡ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಅಲ್ಲದೇ ಹಾಸನಕ್ಕೆ ಪ್ರಥಮ ಸ್ಥಾನ ಬಂದಿದ್ದು ರೇವಣ್ಣ ನಿಂಬೆಹಣ್ಣು ಪೂಜಾ ಪ್ರಭಾವದಿಂದ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ರೇವಣ್ಣ ನಿಂಬೆಹಣ್ಣು ಕೊಟ್ಟಿರಬೇಕು ಅನ್ಸುತ್ತೆ. ಇಲ್ಲಿ ಏನೋ ಸಮಸ್ಯೆ ಇದೆ ಖಂಡಿತವಾಗಿ ಎಂದು ಕಾಲೆಳೆದಿದ್ದಾರೆ.
ದೊಡ್ಡಗೌಡ್ರು ಕುಟುಂಬದ ಆಶೀರ್ವಾದ? ಸೈಲೆಂಟಾಗಿ ಕರಾವಳಿ ಕನ್ನಡಿಗರಿಗೆ ಟಾಂಗ್ ಅನ್ಸುತ್ತೆ? ಎಂತಾ ಪಂಚ್ ಮಾರ್ರಾಯ್ರೇ? ಎಂದು ಒಬ್ಬರು ಟ್ರೋಲ್ ಮಾಡಿದ್ದಾರೆ. ಮತ್ತೊಬ್ಬರು ಮಾಸ್ ಕಾಪಿ ಆಗಿರುವ ಶಂಕೆ ಇದೆ. ಎರಡನೇ ಸ್ಥಾನ ರಾಮನಗರ, ಮೂರನೇ ಸ್ಥಾನ ಬೆಂಗಳೂರು ಗ್ರಾಮಾಂತರ, ಹಾಸನ ಮೊದಲು ಎಲ್ಲಾ ಇವರ ಕ್ಷೇತ್ರ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಬಜೆಟ್‍ನಲ್ಲಿ ಸರ್ಕಾರ ಪ್ರಭಾವಿ ನಾಯಕರಾದ ರೇವಣ್ಣ, ಕುಮಾರಸ್ವಾಮಿ, ಶಿವಕುಮಾರ್ ಅವರ ಕ್ಷೇತ್ರವಾದ ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರಕ್ಕೆ ಹೆಚ್ಚಿನ ಅನುದಾನ ಸಿಕ್ಕಿತ್ತು. ಈಗ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲೂ ಈ ಮೂರು ಜಿಲ್ಲೆಗಳು ವಿಶೇಷ ಸಾಧನೆ ಮಾಡಿದ್ದು ಈ ಫಲಿತಾಂಶದಲ್ಲೂ ಸಮ್ಮಿಶ್ರ ಸರ್ಕಾರದ ಕೈವಾಡ ಇದ್ಯಾ ಎಂದು ಪ್ರಶ್ನಿಸಿ ನಾಯಕರನ್ನು ಕಾಲೆಳೆಯುತ್ತಿದ್ದಾರೆ.
ಇನ್ನು ಕೆಲವರು ಹಾಸನ, ರಾಮನಗರ ಪ್ರಥಮ ಮತ್ತು ದ್ವಿತೀಯ ಸ್ಥಾನ ಬರಬೇಕಾದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕಾಗಿ ಬಂತು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ. ನಮ್ಮ ಹಾಸನ ಜಿಲ್ಲೆ ಪ್ರಥಮ, ಭಕ್ತರು ಇದನ್ನು ಹಾಸನ, ರಾಮನಗರ ಮಂಡ್ಯ ಬಜೆಟ್ ರೀತಿ ಅನ್ನುವ ಸಂಭವ ಇದೆ ಎಂದು ಬರೆದು ಕಾಲೆಳೆಯುವ ಮಂದಿಗೆ ತಿರುಗೇಟು ನೀಡಿದ್ದಾರೆ.