ಹಾಸನ: ಮೋದಿಯವರು ಬಿಜೆಪಿಯಲ್ಲಿ 75 ವರ್ಷ ಆದವರು ಅಧಿಕಾರದಲ್ಲಿ ಇರೋ ಹಾಗಿಲ್ಲ ಎಂಬ ಕಾನೂನು ಮಾಡಿದ್ದಾರೆ. ಅದೇ ರೀತಿ ಕುಟುಂಬದಲ್ಲಿ ಒಬ್ಬರು ನಿಲ್ಲಬೇಕೆಂದು ಬಿಲ್ ತರಲಿ ಎಂದು ಶಾಸಕ ಎಚ್‌ಡಿ ರೇವಣ್ಣ ತಿಳಿಸಿದರು.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷದ ಅಭ್ಯರ್ಥಿಯನ್ನು ಕುಟುಂಬ ರಾಜಕಾರಣ ಎಂದು ಟೀಕಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಒಂದೇ ಕುಟುಂಬದ ನಾಲ್ಕು ಜನ ಎಂ.ಎಲ್.ಎ., ಎಂ.ಎಲ್.ಸಿ. ಹೀಗೆ ಬೇರೆ ಬೇರೆ ಹುದ್ದೆಗಳಲ್ಲಿ ಇದ್ದಾರೆ. ಕುಟುಂಬ ರಾಜಕಾರಣ ಎಂದು ಮಾತನಾಡಲು ಕಾಂಗ್ರೆಸ್‌ನವರಿಗೆ ಯಾವ ನೈತಿಕತೆ ಇದೆ. ಇವರು ಜೆಡಿಎಸ್ ಕುಟುಂಬ ರಾಜಕಾರಣ ಅನ್ನೋದು ಬಿಟ್ಟರೆ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಕಿಡಿಕಾರಿದರು.
Advertisement
Advertisement
ಸೂರಜ್ ರೇವಣ್ಣ ವಿರುದ್ಧ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡುವುದಿಲ್ಲ. ನ್ಯಾಯಾಲಯದ ತೀರ್ಮಾನಕ್ಕೆ ತಲೆ ಬಾಗುತ್ತೇವೆ. ಯಾರು ಅರ್ಜಿ ಹಾಕಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ನ್ಯಾಯಾಲಯದ ಬಗ್ಗೆ ನಮಗೆ ಗೌರವವಿದೆ. ನ್ಯಾಯಾಲಯ ಏನು ತೀರ್ಪು ನೀಡುತ್ತದೆಯೊ ಅದಕ್ಕೆ ಬದ್ಧರಾಗಿರುತ್ತೇವೆ ಎಂದರು. ಇದನ್ನೂ ಓದಿ: ಮದುವೆ ವಿಚಾರ ಮುಚ್ಚಿಟ್ಟಿದ್ದಾರೆ – ಸೂರಜ್ ರೇವಣ್ಣರ ನಾಮಪತ್ರ ತಿರಸ್ಕರಿಸಿ
Advertisement
ರಾಜ್ಯಲ್ಲಿ ಬಿ ಮತ್ತು ಸಿ ಟೀಂ: ರಾಜ್ಯದಲ್ಲಿ ಬಿ ಮತ್ತು ಸಿ ಎಂಬ ಎರಡು ಟೀಂ ಇದೆ. ಬಿ ಅಂದರೆ ಬಿಜೆಪಿ, ಸಿ ಅಂದರೆ ಕಾಂಗ್ರೆಸ್. ಇವೆರಡು ಟೀಂಗಳು ನಮಗೆ ಬೇಡ. ಇವರಿಂದ ರಾಜ್ಯದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ಇದರಿಂದಾಗಿ 2023ರಲ್ಲಿ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್‌ನ್ನು ನಾವ್ಯಾರು ತೆಗೆಯಬೇಕಿಲ್ಲ. 26 ರಾಜ್ಯಗಳಲ್ಲಿ ಜನತೆಯೆ ಮನೆಗೆ ಕಳುಹಿಸಿದ್ದಾರೆ. 27ನೇಯದು ಕರ್ನಾಟಕವಾಗಿದ್ದು, ಇಲ್ಲೂ ಅವರನ್ನು ಮನೆಗೆ ಕಳುಹಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಹಣದಿಂದ ರಾಜಕೀಯ ಮಾಡಲು ಆಗಲ್ಲ. ಜನತೆ, ದೇವರ ಆಶೀರ್ವಾದ ಇರುವವರೆಗೂ ರಾಜಕೀಯ ಮಾಡಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆ. ಕಾಂಗ್ರೆಸ್ ಮುಖಂಡರೆ ಕಾಂಗ್ರೆಸ್ ಪಕ್ಷ ಮುಗಿಸುತ್ತಾರೆ. ನೆಹರು ಕಾಲದ ಕಾಂಗ್ರೆಸ್ ಈಗ ಇಲ್ಲಾ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಡಬಲ್ ಇಂಜಿನ್ ಸರ್ಕಾರ ಇತ್ತು ಎಂದು ಟೀಕಿಸಿದರು. ಇದನ್ನೂ ಓದಿ: ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್