ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ತಾತ ಎಂದು ಪ್ರಜ್ವಲ್ ರಾಜೀನಾಮೆ ಕೊಡುವ ಮಾತಾಡಿದ್ದಾನೆ ಅಷ್ಟೇ. ಆದರೆ ಪ್ರಜ್ವಲ್ ರಾಜೀನಾಮೆ ಕೊಡಲ್ಲ ಎಂದು ಸಚಿವ ರೇವಣ್ಣ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾತನಿಗೆ ಸೋಲಾಯ್ತು ಎಂಬ ನೋವಿನದಲ್ಲಿ ಪ್ರಜ್ವಲ್ ರಾಜೀನಾಮೆ ಮಾತನಾಡಿದ್ದಾನೆ. ಆದರೆ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದು ತಿಳಿಸಿದರು.
Advertisement
ಇದಕ್ಕೂ ಮುನ್ನ ಎಚ್‍ಡಿಡಿ ನಿವಾಸಕ್ಕೆ ಭೇಟಿ ನೀಡಿದ್ದ ಪ್ರಜ್ವಲ್ ರೇವಣ್ಣ ಅವರು, ರಾಜ್ಯದ ಹಿತಾದೃಷ್ಠಿಯಿಂದ ನಾನು ರಾಜೀನಾಮೆ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದೇನೆ. ಈ ಬಗ್ಗೆ ದೇವೇಗೌಡರಿಗೆ ತಿಳಿಸಿದ್ದೇನೆ. ಅವರು ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಮಾಡೋಣ ಎಂಬ ಮಾತನಾಡಿದ್ದು, ಎಲ್ಲರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಮಾಡುತ್ತಾರೆ. ಆದರೆ ಇದು ಯಾವುದೇ ರಾಜಕೀಯ ಡ್ರಾಮಾ ಅಲ್ಲ ಅಥವಾ ಭಾವನಾತ್ಮವಾಗಿ ತೆಗೆದುಕೊಂಡಿರುವ ನಿರ್ಧಾರವೂ ಅಲ್ಲ. ರಾಜ್ಯಕ್ಕೆ ಯಾವುದೇ ಪ್ರಮುಖ ಯೋಜನೆಗಳನ್ನು ಸಂಸತ್ ಮಟ್ಟದಲ್ಲಿ ಮಾತನಾಡುವ ಧ್ವನಿಯಾಗುತ್ತಾರೆ. ಎಂದಿಗೂ ನಾನು ದೇವೇಗೌಡರ ಮಾತನ್ನು ಮೀರುವುದಿಲ್ಲ ಅವರ ಮಾತು ಅಂತಿಮ ಎಂದಿದ್ದರು.