ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಮೀನುಗಾರರು ಬಂಪರ್ ಹೊಡೆದಿದ್ದಾರೆ. ಇಲ್ಲಿನ ಮಡಿಕಲ್ ಬೀಚ್ ನಲ್ಲಿ ಭಾರೀ ಗಾತ್ರದ ಮೀನುಗಳು ಬಲೆಗೆ ಬಿದ್ದಿದೆ.
ಕಳೆದ ಒಂದು ವಾರದಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿತ್ತು. ಕಡಲು ಬುಡಮೇಲು ಆದಾಗ ಸಾಕಷ್ಟು ಮೀನುಗಳು ತೆರೆಯ ಜೊತೆ ದಡಕ್ಕೆ ಬರುತ್ತದೆ. ಈ ಸಂದರ್ಭದಲ್ಲಿ ಬಲೆ ಬೀಸಿರುವ ಮೀನುಗಾರರಿಗೆ ದೊಡ್ಡ ದೊಡ್ಡ ರೇವ್ ಫಿಶ್ ಗಳು ಸಿಕ್ಕಿದೆ. ಒಂದೊಂದು ಮೀನುಗಳು 30-40 ಕಿಲೋ ಭಾರವಿದೆ.
Advertisement
Advertisement
ಕಬ್ಬಿಣದ ಸಲಾಕೆಗಳನ್ನು ಉಪಯೋಗಿಸಿ ಮೀನನ್ನು ದಡಕ್ಕೆ ತರಲಾಗಿದೆ. ರೇವ್ ಫಿಶ್ ಗೆ ಸ್ಥಳೀಯವಾಗಿ ತೊರಕೆ ಅನ್ನುವ ಹೆಸರಿದೆ. ಚಪ್ಪಟೆಯಾಗಿರುವ ಈ ಮೀನುಗಳಿಗೆ ಬಾಲವಿರುತ್ತದೆ. ಇವುಗಳು ಮೊಟ್ಟೆಯಿಡಲು ದಡದ ಕಡೆ ಬರುತ್ತದೆ. ಚೂಪಾದ ಮುಳ್ಳುಗಳನ್ನು ಹೊಂದಿರುವ ಈ ಮೀನು ಮನುಷ್ಯ ಅದರ ಮೇಲೆ ಕಾಲಿಟ್ಟರೆ ಕಾಲನ್ನು ತಿವಿಯುತ್ತದೆ. ಹೀಗಾಗಿ ಇದನ್ನು ಡೇಂಜರ್ ಫಿಶ್ ಅಂತ ಮೀನುಗಾರರು ಕರೆಯುತ್ತಾರೆ.
Advertisement
ಮೊದಲ ಬಾರಿಗೆ ನೋಡುವವರಿಗೆ ಪ್ರಾಣಿಯಂತೆ ಕಾಣುವ ಈ ಮೀನು ಅಚ್ಚರಿ ತರುತ್ತದೆ. ಮಳೆಗಾಲ ಆರಂಭದಲ್ಲಿ ಈ ಮೀನುಗಳು ದಡದತ್ತ ಬರುತ್ತದೆ ಎಂದು ಮೀನುಗಾರರು ಹೇಳುತ್ತಾರೆ. ಮೀನಿನಲ್ಲಿರುವ ಮುಳ್ಳು ವಿಷಕಾರಿ. ಅದರಲ್ಲಿ ನಂಜಿನ ಅಂಶ ಬಹಳ ಇರುತ್ತದೆ. ಆ ಮುಳ್ಳು ಚುಚ್ಚಿದರೆ ಬಹಳ ರಕ್ತಸ್ರಾವ ಆಗುತ್ತದೆ. 24 ಗಂಟೆಗಳ ಕಾಲ ಅದರ ಉರಿ ಇರುತ್ತದೆ ಎಂದು ಹೇಳುತ್ತಾರೆ.
Advertisement