ವಿಚ್ಛೇದನ ಕೋರಿದ್ದ ಜೋಡಿಗಳ ಬಾಳಲ್ಲಿ ಮತ್ತೆ ಬಾಂಧವ್ಯದ ಬೆಸುಗೆ

Public TV
2 Min Read
Koppal Divorce

ಕೊಪ್ಪಳ: ವೈಹಿವಾಹಿಕ ಜೀವನದಲ್ಲಿ ವಿರಸಗೊಂಡು ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದ್ದ ಮೂರು ಜೋಡಿಗಳಿಗೆ ಗಂಗಾವತಿ (Gangavati) ನ್ಯಾಯಾಧೀಶರು ಪರಸ್ಪರ ಆಪ್ತ ಸಮಾಲೋಚನೆ ಮಾಡಿ ಮತ್ತೆ ಬೆಸುಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕವಲು ಹಾದಿಯಲ್ಲಿದ್ದ ದಾಂಪತ್ಯ ಜೀವನವನ್ನು ಸರಿದಾರಿಗೆ ತರುವಲ್ಲಿ ನ್ಯಾಯಾಧೀಶರು ಯಶಸ್ವಿಯಾಗಿದ್ದಾರೆ.

ಕೊಪ್ಪಳದ ಗಂಗಾವತಿ ನ್ಯಾಯಾಲಯದಲ್ಲಿ ಇಂದು ನಡೆದ ಲೋಕಾ ಅದಾಲತ್‌ನಲ್ಲಿ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಧೀಶರು, ಜೀವನಾಂಶ ಕೋರಿ ಬಂದಿದ್ದ ಅರ್ಜಿ, ರಸ್ತೆ ಅಪಘಾತ, ಚೆಕ್ ಬೌನ್ಸ್, ವಿಚ್ಛೇದನದಂತ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಮಾಡಿದರು. ನಾನಾ ಕಾರಣಕ್ಕೆ ವಿಚ್ಛೇದನ ಕೋರಿ ಕನಕಗಿರಿ ತಾಲೂಕಿನ ನವಲಿಯ ತಿರುಪತೆಪ್ಪ-ಲಕ್ಷ್ಮಿ ಅಲಿಯಾಸ್ ಬಸಮ್ಮ ನವಲಿ, ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳದ ಭೀಮೇಶ-ಮಂಜುಳಾ ಹಾಗೂ ಗಂಗಾವತಿ ತಾಲೂಕಿನ ವಿಠಲಾಪುರದ ರಾಮಪ್ಪ-ಸೌಭಾಗ್ಯ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಹುಡುಗಿಗೆ ಬೈಕ್‌ನಲ್ಲಿ ಡ್ರಾಪ್‌ ಕೊಟ್ಟ ದಲಿತ ಯುವಕನಿಗೆ ಶಾದಿಮಹಲ್‌ನಲ್ಲಿ ಹಲ್ಲೆ – ಪೋಕ್ಸೋ ಕೇಸ್‌ ದಾಖಲು

Koppal 1

ತಿರುಪತೆಪ್ಪ-ಲಕ್ಷ್ಮಿಗೆ 2020ರಲ್ಲಿ, ಭೀಮೇಶ-ಮಂಜುಳಾರಿಗೆ 2021ರಲ್ಲಿ ಹಾಗೂ ರಾಮಪ್ಪ-ಸೌಭಾಗ್ಯರಿಗೆ 2020ರಲ್ಲಿ ವಿವಾಹವಾಗಿತ್ತು. ಆದರೆ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲದ್ದರಿಂದ ಮೂರೂ ಜೋಡಿಗಳು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್, ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ರಮೇಶ ಗಾಣಿಗೇರ, ಪ್ರಧಾನ ಸಿವಿಲ್ ಜೆಎಂಎಫ್‌ಸಿ ನ್ಯಾಯಾಧೀಶೆ ಶ್ರೀದೇವಿ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಗೌರಮ್ಮ ಪಾಟೀಲ್, ದಂಪತಿಯೊಂದಿಗೆ ಆಪ್ತಸಮಾಲೋಚನೆ ನಡೆಸಿ ಒಂದು ಗೂಡಿಸುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಬಿಜೆಪಿಗೆ ಮತ ಹಾಕಿದ್ದಕ್ಕೆ ಹಲ್ಲೆ – ಮುಸ್ಲಿಂ ಮಹಿಳೆಯನ್ನು ಭೇಟಿಯಾಗಿ ಧೈರ್ಯ ತುಂಬಿದ ಚೌಹಾಣ್‌

 

ನಾನಾ ಕಾರಣಕ್ಕೆ ಸಂಸಾರಿಕ ಜೀವನದಿಂದ ದೂರವಿದ್ದ ಒಂದೇ ಕುಟುಂಬದ ಮೂರು ಮಹಿಳೆಯರು ಜೀವನಾಂಶ ಕೋರಿ ಪ್ರತ್ಯೇಕವಾಗಿ ದಾಖಲಿಸಿದ್ದ ಮೂರು ಪ್ರಕರಣಗಳನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು, ರಾಜಿ ಮಾಡಿಸುವ ಮೂಲಕ ವಿಚ್ಛೇದನ ಹಾದಿಯಲ್ಲಿದ್ದ ಜೋಡಿಗಳನ್ನು ಮತ್ತೆ ಒಂದುಗೂಡಿಸಿದ್ದಾರೆ. ಕಾರಟಗಿ ತಾಲೂಕಿನ ಸಿದ್ದಾಪುರ ಆಶಾ-ಚಂದ್ರಗೌಡ ಪಾಟೀಲ್, ಅಶ್ವಿನಿ-ಗಣೇಶಗೌಡ ಪಾಟೀಲ್ ಹಾಗೂ ಪ್ರಿಯಾಂಕ-ಮಂಜುನಾಥ ಗೌಡ ಪಾಟೀಲ್ ಸಿದ್ದಾಪುರ ಎಂಬ ಜೋಡಿಗಳ ಬಾಳಲ್ಲಿ ಮರು ಹೊಂದಾಣಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಫಕೀರರ ವೇಷ ತೊಟ್ಟು ಜನರಿಗೆ ವಂಚನೆ – ಇಬ್ಬರು ವಶ

2019ರಂದು ಕನಕಗಿರಿ-ಗಂಗಾವತಿ ರಸ್ತೆ ಮಧ್ಯೆ ಕೇಸರಹಟ್ಟಿಯಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಕೆಇಬಿ ನೌಕರ ಬಸವರಾಜ ಬಳಿಗೇರ ಕುಟುಂಬಕ್ಕೆ 84 ಲಕ್ಷ ರೂ. ಮೊತ್ತದ ವಿಮೆಯನ್ನು ಕೊಡಿಸುವಲ್ಲಿ ನ್ಯಾಯಾಧೀಶರು ಯಶಸ್ವಿಯಾಗಿದ್ದಾರೆ. ಮೃತ ವ್ಯಕ್ತಿ ವಿಮೆ ಮಾಡಿದ್ದು, 1.84 ಕೋಟಿ ಮೊತ್ತದ ಪರಿಹಾರ ನೀಡುವಂತೆ ಮೃತನ ಪತ್ನಿ ಬಿ. ರೇಣುಕಾ ಅರ್ಜಿ ಸಲ್ಲಿಸಿದ್ದರು. ಇಫ್ಕೋ ಟೋಕಿಯೋ ಕಂಪನಿ ಜನರಲ್ ವಿಮಾ ಕಂಪನಿಯು 84 ಲಕ್ಷ ಮೊತ್ತದ ವಿಮಾ ನೀಡುವಂತೆ ನ್ಯಾಯಾಧೀಶರು ನಿರ್ದೇಶನ ನೀಡಿ ಪ್ರಕರಣ ಅಂತ್ಯಗೊಳಿಸಿದರು. ಇದನ್ನೂ ಓದಿ: ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ರೈತನ ರುಂಡ ಕತ್ತರಿಸಿದ ದುಷ್ಕರ್ಮಿಗಳು

Share This Article