ಡೆಹ್ರಾಡೂನ್: ಮದುವೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವಾಹನ ಕಂದಕಕ್ಕೆ ಬಿದ್ದು 14 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಇಂದು ಮುಂಜಾನೆ ಅಪಘಾತ ಸಂಭವಿಸಿದೆ. ಜನರು ಪ್ರಯಾಣಿಸುತ್ತಿದ್ದ ವಾಹನವು ಸುಖಿಧಾಂಗ್ ರೀತಾ ಸಾಹಿಬ್ ರಸ್ತೆಯ ಬಳಿಯ ಕಂದಕ್ಕೆ ಬಿದ್ದಿದೆ ಎಂದು ಕುಮಾನ್ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ನೀಲೇಶ್ ಆನಂದ್ ಭರ್ನೆ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಐದು ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ ಸಿಗುವುದಿಲ್ಲ: ಪೃಥ್ವಿರಾಜ್ ಚವಾಣ್
Advertisement
Advertisement
ಜನರು ಮದುವೆ ಸಮಾರಂಭ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದರು. ಈ ವೇಳೆ ವಾಹನ ಕಂದಕಕ್ಕೆ ಬಿದ್ದಿದೆ. ಪರಿಣಾಮವಾಗಿ ವಾಹನದಲ್ಲಿದ್ದವರ ಪೈಕಿ 11 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಂಭೀರ ಗಾಯಗಳಾದವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಮತ್ತೆ ಮೂವರು ಮೃತಪಟ್ಟಿದ್ದಾರೆ.
Advertisement
Uttarakhand | 14 people died after the vehicle they were travelling fell into a gorge near Sukhidhang Reetha Sahib road. The accident occurred early morning today when they were returning from a wedding ceremony: Kumaon DIG Nilesh Anand Bharne pic.twitter.com/aGidTX7AGX
— ANI UP/Uttarakhand (@ANINewsUP) February 22, 2022
Advertisement
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಹಿಜಬ್‍ಧಾರಿಗೆ ಬ್ಯಾಂಕ್ ವಹಿವಾಟ ನಡೆಸದಂತೆ ನಿರ್ಬಂಧ