ಮುಂಬೈ: ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಬಳಿಕ ಅಂಪೈರ್‌ಗಳಿಂದ ನಾನು ಬಾಲನ್ನು ಪಡೆದಿದ್ದು ಯಾಕೆ ಎನ್ನುವುದಕ್ಕೆ ಮಾಜಿ ನಾಯಕ ಧೋನಿ ಸ್ಪಷ್ಟನೆ ಕೊಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯದ ಬಳಿಕ ಧೋನಿ ಚೆಂಡನ್ನು ಪಡೆದಿದ್ದರು. ಆ ಕುರಿತಾದ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಧೋನಿ ಏಕದಿನ ಕ್ರಿಕೆಟ್‍ನಿಂದ ನಿವೃತ್ತಿಯ ತೆಗೆದುಕೊಳ್ಳುತ್ತಿದ್ದಾರಾ ಎನ್ನುವ ಚರ್ಚೆಯಾಗಿತ್ತು.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಧೋನಿ, ಆಟದ ವೇಳೆ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿರಲಿಲ್ಲ. ಹೀಗಾಗಿ ಯಾಕೆ ಆಗುತ್ತಿಲ್ಲ ಎಂದು ಪರಿಶೀಲಿಸಲು ಬಾಲ್ ಪಡೆದೆ. ಮುಂದಿನ ವರ್ಷ ಇಂಗ್ಲೆಂಡ್ ನೆಲದಲ್ಲಿಯೇ ವಿಶ್ವಕಪ್ ಟೂರ್ನಿ ನಡೆಯುತ್ತದೆ. ಆಗ ಎದುರಾಳಿ ತಂಡವನ್ನು ರಿವರ್ಸ್ ಸ್ವಿಂಗ್ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ತಿಳಿಸಿದರು.
Advertisement
ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಗಳು ಚೆನ್ನಾಗಿ ರಿವರ್ಸ್ ಸ್ವಿಂಗ್ ಮಾಡಿದರು. ಆದರೆ ನಮ್ಮ ತಂಡದಿಂದ ಏಕೆ ಸಾಧ್ಯವಾಗಲಿಲ್ಲ ಎಂದು ಗೊಂದಲ ಉಂಟಾಗಿತ್ತು. ಹೀಗಾಗಿ ಸೂಕ್ತ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಬಾಲ್ ಪಡೆದು ನಮ್ಮ ತಂಡದ ಬೌಲಿಂಗ್ ಕೋಚ್‍ಗೆ ನೀಡಿ, ಚರ್ಚೆ ನಡೆಲು ಬಾಲನ್ನು ಪಡೆದೆ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿದಾಯದ ಮುನ್ಸೂಚನೆ ನೀಡಿದ್ರಾ ಧೋನಿ?
Advertisement
ಐಸಿಸಿ ನಿಯಮದ ಪ್ರಕಾರ 50 ಓವರ್ ಗಳ ಬಳಿಕ ಚೆಂಡು ಅನುಪಯುಕ್ತ. ಪಂದ್ಯದ ಪಳಿಕ ಚೆಂಡು ಪಡೆದು ಚರ್ಚೆ ಮಾಡುವ ಉದ್ದೇಶ ಇತ್ತು. 40 ಓವರ್ ಬಳಿಕ ರಿಸರ್ವ್ ಸ್ವಿಂಗ್ ಮಾಡುವಲ್ಲಿ ಯಶಸ್ವಿಯಾದರೆ, ಬೌಲರ್ ಗಳಿಗೆ ಯಾರ್ಕರ್ ಹಾಕಲು ಸಹ ಸುಲಭವಾಗಲಿದೆ. ಕೊನೆಯ 10 ಓವರ್‍ಗಳಲ್ಲಿ ಸಾಧ್ಯವಾದಷ್ಟು ರನ್ ನಿಯಂತ್ರಿಸಬೇಕು. ರಿವರ್ಸ್ ಸ್ವಿಂಗ್ ಗೆಲುವಿನ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿದೆ. ಹೀಗಾಗಿ ಅಂಪೈರ್ ಬಳಿ ಬೌಲಿಂಗ್ ಕೋಚ್ ಗೆ ನೀಡಲು ಈ ಬಾಲನ್ನು ನೀಡುತ್ತೀರಾ ಎಂದು ಕೇಳಿದೆ ಎಂದು ಧೋನಿ ತಿಳಿಸಿದರು.
Advertisement
ಕೊಹ್ಲಿಯನ್ನು ಹೊಗಳಿದ ಧೋನಿ:
ಕೊಹ್ಲಿ ಶ್ರೇಷ್ಠ ಆಟಗಾರ. ಕ್ರಿಕೆಟ್ ಜಗತ್ತಿನಲ್ಲಿ ಅನೇಕ ಮೈಲುಗಳನ್ನು ನಿರ್ಮಿಸಿದ್ದಾರೆ. ವಿವಿಧ ದೇಶಗಳಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಅವರ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ. ಕ್ರಿಕೆಟ್ ದಂತಕಥೆಯ ಸಮೀಪಕ್ಕೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತಂಡವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ನಾಯಕ ಕೊಹ್ಲಿ ಜವಾಬ್ದಾರಿಯುತವಾಗಿ ಆಟವಾಡುತ್ತಿದ್ದಾರೆ. ಜೊತೆಗೆ ತಂಡದ ಸದಸ್ಯರನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಾಯಕನಿಗೆ ಇಂತಹ ಗುಣಗಳು ಅಗತ್ಯ. ಕೊಹ್ಲಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಧೋನಿ ಹಾರೈಸಿದರು.