ಬೆಂಗಳೂರು: ನಾನು 15% ಕಮೀಷನ್ ಕೇಳಿದ್ದೇನೆ ಅಂತ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಬೊಮ್ಮಾಯಿ (Basavaraj Bommai) ಅಶೋಕ್ (R Ashok) ಅವರಿಗೆ ಒಂದು ಪ್ರಶ್ನೆ ಕೇಳ್ತೀನಿ. 5 ಸಾವಿರ ಕೋಟಿ 3 ಸಾವಿರ ಕೋಟಿ ಬಿಲ್ ಏಕೆ ಉಳಿಸಿಕೊಂಡ್ರಿ. ನಿಮ್ಮ ಅವಧಿಯಲ್ಲಿ ಏಕೆ ಬಿಲ್ ನಿಲ್ಲಿಸಿದ್ರಿ?. ಮುಖ್ಯಮಂತ್ರಿಗಳು ಕೆಂಪಣ್ಣ ನೈಜತೆ ನೋಡಿದ್ದಾರೆ. ಕೆಂಪಣ್ಣ ನಮ್ರತೆಯಿಂದ ಮನವಿ ಮಾಡಿಕೊಂಡ್ರು. ಐಎಎಸ್ ಆಫೀಸರ್ ನೇತೃತ್ವದಲ್ಲಿ ಕಮಿಟಿ ಏರ್ಪಡಿಸಲಾಗಿದೆ. ಈಗ ಯಾಕೆ ಅಜೆರ್ಂಟ್ ಮಾಡ್ತಿದ್ದಾರೆ?. ಯಾಕೆ ನೀವು ಬಿಲ್ ಕೊಡಲಿಲ್ಲಾ..? ಅವರು ಫಸ್ಟ್ ಉತ್ತರ ಕೊಡಬೇಕು. 10-15 ಪ್ರಶ್ನೆ ಕೇಳಿದ್ರು, ಮೊದಲು ಯಾರು ಕೇಳಿದ್ರು ಹೇಳಿ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ನನಗೆ ನನ್ನದೇ ಆದ ವ್ಯಕ್ತಿತ್ವ ಇದೆ. ತನಿಖೆ ಎಲ್ಲಾ ಕಡೆ ಮಾಡುತ್ತಾರೆ. ಕೆಲಸ ಮಾಡಿದ್ರೆ ಹಣ ಕೊಡುತ್ತಾರೆ. ಬಿಜೆಪಿ (BJP) ಅಧಿಕಾರದಲ್ಲಿ ಮೂರನಾಲ್ಕು ವರ್ಷ ತಡೆದುಕೊಂಡಿದ್ದಾರೆ. ಈಗ ಯಾಕೆ ಅರ್ಜೆಂಟ್. ಪ್ರಜಾಪ್ರಭುತ್ವದಲ್ಲಿ ಕೇಳುವ ಹಕ್ಕಿದೆ. ಯಾರು ಆ ದುಡ್ಡು ಕೇಳಿದ್ದು..? ನಮ್ಮ ಆಫೀಸರ್ ಗೆ ರಿಪೋರ್ಟ್ ಕೇಳಿದ್ದೀನಿ. ಯಾರು ಯಾರು ಮಾತಾಡ್ತಿದ್ದಾರೆ.. ಯಾರು ಯಾರ ಹಿಂದಿದ್ದಾರೆ ಎಲ್ಲಾ ಗೊತ್ತು. ಸಾಮ್ರಾಟ್ ಅಶೋಕ್ ಏನು ಮಾತನಾಡಿದರು, ಬೊಮ್ಮಾಯಿ ಏನು ಮಾತನಾಡಿದರು, ಕುಮಾರಣ್ಣ ಹೋ ಅಣ್ಣ ಅನ್ನೋ ಹಾಗಿಲ್ವಲ್ಲ. ಕುಮಾರಸ್ವಾಮಿ (HD Kumaraswamy) ಅವರು ಏನು ಮಾತಾಡಿದರು ಯಾಕೆ ಮಾತನಾಡಿದರು..? ಬೊಮ್ಮಾಯಿ, ಅಶೋಕ್ ಅವರ ಅವಧಿಯಲ್ಲಿ ಯಾಕೆ ಹಣ ಬಿಡುಗಡೆ ಮಾಡಲಿಲ್ಲ. ಕೆಂಪಣ್ಣ ಎಲ್ಲೂ ಅಧಿಕಾರಿಗಳು ಹಣ ಕೇಳಿದ್ದಾರೆ ಅಂತ ಹೇಳಿಲ್ಲ. ಹಾಗೇನಾದರು ಯಾರಾದರು ಕೇಳಿದರೆ ಆ ಅಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದರು.
Advertisement
Advertisement
ಅಜ್ಜಯ್ಯನ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂಬ ಗುತ್ತಿಗೆದಾರರ ಸವಾಲಿಗೆ ಪ್ರತಿಕ್ರಿಯಿಸಿದ ಡಿಸಿಎಂ, ರಸ್ತೆಯಲ್ಲಿ ಹೋಗುವವರ ಪ್ರಶ್ನೆಗೆಲ್ಲ ಉತ್ತರ ಕೊಡಲ್ಲ. ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ ಎಂದು ಆಕ್ರೋಶ ಹೊರಹಾಕಿದರು.
Web Stories