ಮುಂಬೈ: ಸುಪ್ರೀಂ ಕೋರ್ಟ್ (Supreme Court) ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ (High Court Judges) ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ಯೋಜನೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiran Rijiju) ಹೇಳಿದ್ದಾರೆ. ನ್ಯಾಯಾಧೀಶರ ನಿವೃತ್ತಿ ವಯಸ್ಸು ಮತ್ತು ನ್ಯಾಯಾಂಗದಲ್ಲಿ ಪ್ರಕರಣಗಳು ಬಾಕಿ ಉಳಿಯಲು ಕಾರಣವಲ್ಲ ಎಂದು ತಿಳಿಸಿದರು.
ಮುಂಬೈನಲ್ಲಿ ನಡೆದ ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನ್ಯಾಯಾಧೀಶರ ಅಧಿಕಾರವಧಿಯನ್ನು ಹೆಚ್ಚಿಸುತ್ತಿಲ್ಲ. ನಾವು ಸುಪ್ರೀಂ ಕೋರ್ಟ್‌ಗೆ 65 ವರ್ಷ ಮತ್ತು ಹೈಕೋರ್ಟ್‌ಗೆ 62 ವರ್ಷ ನಿವೃತ್ತಿ ವಯಸ್ಸು ಸರಿ ಎಂದು ಭಾವಿಸುತ್ತೇವೆ. ಮುಂದೆ ಇದು ಬದಲಾಗಬಹುದು. ಆದರೆ ಸದ್ಯ ಸರ್ಕಾರದ ಮುಂದೆ ಈ ಬಗ್ಗೆ ಪ್ರಸ್ತಾಪಗಳಿಲ್ಲ ಎಂದರು. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – BJPಗೆ ಗುಡ್ ಬೈ ಹೇಳಿದ ಹಿರಿಯ ನಾಯಕ
Advertisement
Advertisement
ನ್ಯಾಯಾಂಗದಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇರುವುದರಿಂದ ಪ್ರಕರಣಗಳ ಬಾಕಿ ಹೆಚ್ಚಿದೆ ಎಂಬ ತಪ್ಪು ಕಲ್ಪನೆ ಇದೆ. ಪ್ರಕರಣಗಳ ವಿಲೇವಾರಿಗೆ ನ್ಯಾಯಾಧೀಶರ ವಯಸ್ಸು ಅಥವಾ ಖಾಲಿ ಇರುವ ಹುದ್ದೆಗೆ ಯಾವುದೇ ಸಂಬಂಧವಿಲ್ಲ. ಜನರು ಈ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ದೊಡ್ಡ ಹುದ್ದೆಗಳ ಖಾಲಿ ಕಾರಣ ಪ್ರಕರಣಗಳು ಬಾಕಿ ಉಳಿದಿವೆ ಎನ್ನುವುದು ನಿಜವಲ್ಲ.
Advertisement
ಈ ನಡುವೆ ಅನರ್ಹ ಪ್ರಕರಣಗಳು ಸುಪ್ರೀಂ ಕೋರ್ಟ್‌ಗೆ ಹೋಗುತ್ತಿವೆ. ಇದು ನ್ಯಾಯಾಂಗದ ಹೊರೆಯನ್ನು ಹೆಚ್ಚಿಸುತ್ತವೆ. ಪ್ರಕರಣಗಳ ಸಂಖ್ಯೆಯನ್ನು ನೋಡಿದರೆ, ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ವಾಸ್ತವವಾಗಿ ವಿಚಾರಣೆಗೆ ಪಟ್ಟಿ ಮಾಡಲು ಅರ್ಹವಾಗಿಲ್ಲ. ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಗಳಲ್ಲಿ ತಮ್ಮನ್ನು ಏಕೆ ತೊಡಗಿಸಿಕೊಳ್ಳಬೇಕು? ಪ್ರತಿ ಜಾಮೀನು ಸುಪ್ರೀಂ ಕೋರ್ಟ್‌ಗೆ ಹೋಗುತ್ತಿದೆ. ಇದನ್ನೂ ಓದಿ: ಒಂದು ಲಕ್ಷ ಸರ್ಕಾರಿ ಉದ್ಯೋಗ, ಉಚಿತ ವಿದ್ಯುತ್ – ಹಿಮಾಚಲ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ
Advertisement
ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಗಳ ವಿಚಾರಣೆಗಾಗಿ ಮಾಡಿದೆಯೇ? ಜಾಮೀನು ಅರ್ಜಿಗಳನ್ನು ಕೆಳ ನ್ಯಾಯಾಲಯಗಳು ವ್ಯವಹರಿಸಬೇಕು, ಸೀಮಿತ ಪ್ರಕರಣಗಳು ಹೈಕೋರ್ಟ್‌ಗೆ ಬರಬೇಕು, ಸುಪ್ರೀಂ ಕೋರ್ಟ್‌ನಲ್ಲಿ ಗಂಭೀರ ಪ್ರಕರಣಗಳ ವಿಚಾರಣೆ ನಡೆಯಬೇಕು, ಮರಣದಂಡನೆ ಅಥವಾ ಕೆಲವು ಗಂಭೀರ ಪ್ರಕರಣಗಳ ಹೊರತು ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಗಳನ್ನು ಏಕೆ ನಿಭಾಯಿಸಬೇಕು ಎಂದು ಪ್ರಶ್ನಿಸಿದರು.