ಕೊಪ್ಪಳ: ಕಲಿಕೆಗೆ ವಯಸ್ಸಿನ ಹಂಗಿಲ್ಲ. ಹೀಗಾಗಿಯೇ ಅಕ್ಷರದ ಮೇಲಿನ ಪ್ರೀತಿಯುಳ್ಳವರು ನಿರಂತರವಾಗಿ ವಿದ್ಯಾರ್ಥಿಗಳಾಗಿರುತ್ತಾರೆ ಎಂಬುದಕ್ಕೆ ಇಲ್ಲೊಬ್ಬರು ವಯೋವೃದ್ಧ ನಿವೃತ್ತ ಶಿಕ್ಷಕರು ಉದಾಹರಣೆಯಾಗುತ್ತಾರೆ.
91 ರ ಇಳಿ ವಯಸ್ಸಿನಲ್ಲೂ ಅವರು ಪಿಎಚ್‍ಡಿ ಪದವಿಗೆ ಪ್ರವೇಶಕ್ಕೆ ಅರ್ಹತಾ ಪರೀಕ್ಷೆ ಬರೆದು ಬಂದು ಯುವಸಮೂಹ ನಾಚುವಂತೆ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಶರಣಬಸವರಾಜ ಬಿಸರಹಳ್ಳಿ ಅವರು ತಮ್ಮ 91 ನೇ ವಯಸ್ಸಿನಲ್ಲಿಯೂ ಹಂಪಿ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಪದವಿಗಾಗಿ ಅರ್ಜಿ ಸಲ್ಲಿಸಿದ್ದರು.
Advertisement
Advertisement
ಇದಕ್ಕೂ ಮುನ್ನ ಧಾರವಾಡದ ಕೆಯುಡಿಯಲ್ಲಿ ಎಂಎ ಪದವಿ ಪಡೆದು ಪಿಎಚ್‍ಡಿಗೆ ಅರ್ಜಿ ಸಲ್ಲಿಸಿದ್ದರು. ಪಿಎಚ್‍ಡಿ ಪದವಿ ಪ್ರವೇಶಕ್ಕೆ ಬೇಕಾದ ಶೇಕಡಾ 55 ರಷ್ಟು ಅಂಕ ಬಂದಿರಲಿಲ್ಲ. ಮತ್ತೆ ಕಳೆದ ವರ್ಷ ಹಂಪಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಶೇಕಡಾ 60 ರಷ್ಟು ಅಂಕ ಗಳಿಸಿ ಈ ಬಾರಿ ಪಿಎಚ್‍ಡಿ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದರು.
Advertisement
ಹಂಪಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ವಚನ ಸಾಹಿತ್ಯಕ್ಕೆ ಪಿಎಚ್‍ಡಿ ಎಂಟ್ರೆನ್ಸ್ ಎಕ್ಸಾಂ ಬರೆದಿದ್ದಾರೆ. ಪರೀಕ್ಷೆಯ ಫಲಿತಾಂಶ ಬಂದರೆ ಮುಂದೆ ಪಿಎಚ್‍ಡಿ ಮಾಡಲು ಶರಣಬಸವರಾಜ ಬಿಸರಹಳ್ಳಿ ಅವರು ಮುಂದಾಗಿದ್ದಾರೆ. ಬಿಸರಹಳ್ಳಿ ಅವರು 1991-92 ನೇ ಸಾಲಿನಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತವಾಗಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv