– ತಂದೆ ಸ್ಟ್ರಿಕ್ಟ್ ಅಂತ ಕೊಲೆಗೈದ ಹಂತಕ
ಬೆಂಗಳೂರು: ನಿವೃತ್ತ ಸೈನಿಕನನ್ನು (Retired Soldier ) ಪುತ್ರನೇ ಚಾಕು ಇರಿದು ಹತ್ಯೆಗೈದ ಘಟನೆ ವಿವೇಕನಗರ (Viveknagar) ಬಸ್ ನಿಲ್ದಾಣದ ಹಿಂಭಾಗದಲ್ಲಿ ನಡೆದಿದೆ.
ಹತ್ಯೆಗೀಡಾದ ನಿವೃತ್ತ ಸೈನಿಕನನ್ನು ಇಸ್ಲಾಂ ಅರಬ್ (47) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಪುತ್ರ ಬೋಲು ಅರಬ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪತ್ನಿ ಕಿರುಕುಳಕ್ಕೆ ಬೇಸತ್ತು, ವೀಡಿಯೋ ಮಾಡಿಟ್ಟು ಟೆಕ್ಕಿ ಆತ್ಮಹತ್ಯೆ
ಶನಿವಾರ ರಾತ್ರಿ 2:30ರ ಸುಮಾರಿಗೆ ಕೊಲೆ ನಡೆದಿದೆ. ಆರೋಪಿ ತನ್ನ ತಂದೆಗೆ ಕೈನಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ತಂದೆ ಸ್ಟ್ರಿಕ್ಟ್ ಅಂತ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ವಿವೇಕನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗುಂಡೇಟಿನಿಂದ ಆಸ್ಪತ್ರೆ ಸೇರಿರೋ ಮುತ್ತಪ್ಪ ರೈ ಮಗನ ಆರೋಗ್ಯ ವಿಚಾರಿಸಿದ ಡಿಕೆಶಿ