ನವದೆಹಲಿ: ನಿವೃತ್ತ ಶಿಕ್ಷಕರೊಬ್ಬರು ಕಿವಿಯಲ್ಲಿ (Ear) ಉದ್ದನೆಯ ಕೂದಲನ್ನು (Hair) ಬೆಳೆಸಿ ಗಿನ್ನಿಸ್ ವಿಶ್ವ ದಾಖಲೆಯನ್ನು (Guinness World Record) ಬರೆದಿದ್ದಾರೆ.
ನಿವೃತ್ತ ಶಿಕ್ಷಕರಾದ ಆಂಟೋನಿ ವಿಕ್ಟರ್ ಎನ್ನುವವರು ಈ ದಾಖಲೆಗೆ ಪಾತ್ರರಾದವರು. ಆಂಟೋನಿ ತನ್ನ ಹೊರಗಿನ ಕಿವಿಗಳ ಮಧ್ಯಭಾಗದಿಂದ ಕೂದಲನ್ನು 18.1 ಸೆ.ಮೀ (7.12 ಇಂಚು) ಅಳತೆಯ ಉದ್ದದಲ್ಲಿ ಬೆಳೆಸಿದ್ದಾರೆ. ಅವರು 2007ರಿಂದ ಕಿವಿಯಲ್ಲಿ ಕೂದಲನ್ನು ಬೆಳೆಸಲು ಪ್ರಾರಂಭಿಸಿದ್ದು, ಇದೀಗ ವಿಶ್ವದಾಖಲೆಯನ್ನು ಬರೆದಿದ್ದಾರೆ. ಈ ಬಗ್ಗೆ ದಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಇನ್‍ಸ್ಟಾಗ್ರಾಮ್ ಖಾತೆ ಈ ವಿಷಯವನ್ನು ಹಂಚಿಕೊಂಡಿದೆ.
ಇನ್‍ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಏನಿದೆ?: ಕಿವಿಯ ಕೂದಲಿನ ಶಿಕ್ಷಕರೆಂದು ಜನರು ಆಂಟೋನಿ ಅವರನ್ನು ಕರೆಯುತ್ತಾರೆ. ಆಂಟೋನಿ ಅವರ ಕಿವಿಯಲ್ಲಿರುವ ಉದ್ದನೆಯ ಕೂದಲು ದಾಖಲೆಯಾಗಿದೆ. ಭಾರತದ (India) ಆಂಟೋನಿ ವಿಕ್ಟರ್ ನಿವೃತ್ತ ಶಾಲಾ ಮುಖ್ಯೋಧ್ಯಾಯರು. (School Headmaster) ಇವರು 2007ರಿಂದ ತಮ್ಮ ಕಿವಿಯ ಮಧ್ಯಭಾಗದಿಂದ ಕೂದಲನ್ನು ಬಿಡಲು ಪ್ರಾರಂಭಿಸಿದ್ದಾರೆ. ಇದೀಗ ಈ ಕೂದಲು 18.1 ಸೆ.ಮೀ. (7.12) ಬೆಳೆದಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಸುನಂದಾ ಕೇಸ್‌ನಲ್ಲಿ ತರೂರ್‌ಗೆ ಕ್ಲೀನ್ ಚಿಟ್ – ಹೈಕೋರ್ಟ್ ಮೊರೆ ಹೋದ ದೆಹಲಿ ಪೊಲೀಸ್
View this post on Instagram
ದಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹಾಕಿರುವ ಈ ಪೋಸ್ಟ್‌ಗೆ ವಿಚಿತ್ರ ರೀತಿಯ ಕಾಮೆಂಟ್‍ಗಳು ಬಂದಿದ್ದು, ಬಳಕೆದಾರನೊಬ್ಬ ಇದು, ದಾಖಲೆಯಲ್ಲ, ಹೆಚ್ಚಿನ ಪುರುಷರಿಗೆ ಇದು ಕಾಮನ್ ಆಗಿದೆ ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದು, ಮೂಗಿನ ಉದ್ದನೆಯ ಕೂದಲಿನ ಬಗ್ಗೆ ಮುಂದಿನ ದಾಖಲೆ ಎಂದು ತಮಾಷೆ ಮಾಡಿದ್ದಾನೆ. ಇನ್ನೊಬ್ಬ ಕಾಮೆಂಟ್ ಮಾಡಿದ್ದು, ನನ್ನ ಹಳ್ಳಿಗರು ಈ ದಾಖಲೆಯನ್ನು ಮುರಿಯಲು ಬರುತ್ತಿದ್ದಾರೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಕರ್ತವ್ಯ ನಿರತ ಪೊಲೀಸ್ ಮುಖ್ಯಪೇದೆ ಹೃದಯಾಘಾತದಿಂದ ಸಾವು