ಕೋಲಾರ: ವಾಯು ವಿಹಾರಕ್ಕೆಂದು (Promenade) ತೆರಳಿದ್ದ ನಿವೃತ್ತ ಉಪನ್ಯಾಸಕರಿಗೆ ಬೈಕ್ (Bike) ಡಿಕ್ಕಿ ಹೊಡೆದ ಪರಿಣಾಮ ಚಿಕಿತ್ಸೆ ಫಲಿಸದೇ ಇಬ್ಬರು ಉಪನ್ಯಾಸಕರು ಮೃತಪಟ್ಟ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpet) ಪಟ್ಟಣದ ಜೂನಿಯರ್ ಕಾಲೇಜು ಬಳಿ ನಡೆದಿದೆ.
ನಿವೃತ್ತ ಕನ್ನಡ ಉಪನ್ಯಾಸಕ ಕೆ.ಬಿ.ಮೋಹನ್ (64), ನಿವೃತ್ತ ರಾಸಾಯನ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀ ನಾರಾಯಣ (62) ಮೃತ ದುರ್ದೈವಿಗಳು. ಭಾನುವಾರ ಸಂಜೆ ವಾಯು ವಿಹಾರ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ನಿವೃತ್ತ ಉಪನ್ಯಾಸಕರು ಗಂಭೀರ ಗಾಯಗೊಂಡಿದ್ದರು. ಇದನ್ನೂ ಓದಿ: ರಾಜೀನಾಮೆ ಕೊಡಬೇಕು ಅನ್ನೋ ನಿರ್ಧಾರ ಮಾಡಿದ್ದು ನಿಜ: ಬಸವರಾಜ್ ಹೊರಟ್ಟಿ
ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಉಪನ್ಯಾಸಕರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಡಿಕ್ಕಿ ಹೊಡೆದ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಕ್ಕಿ ಹೊಡೆದು ಬೈಕ್ ಸವಾರ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮಾಜಿ ಸ್ವರ್ಧಿಗಳಾದ ರಜತ್, ವಿನಯ್ ಗೌಡ ವಿರುದ್ಧ ಎಫ್‌ಐಆರ್