ಸರ್ಕಾರಿ ಗೌರವಗಳೊಂದಿಗೆ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅಂತ್ಯಕ್ರಿಯೆ

Public TV
1 Min Read
DGP Om Prakash

ಬೆಂಗಳೂರು: ಪತ್ನಿಯಿಂದಲೇ ಕೊಲೆಯಾದ ನಿವೃತ್ತ ಡಿಜಿಪಿ ಓಂ ಪ್ರಕಾಶ್ (68) (Om Prakash) ಅವರ ಅಂತ್ಯಕ್ರಿಯೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ.

ಮೂರು ಸುತ್ತು ಕುಶಲತೋಪು ಸಿಡಿಸುವ ಮೂಲಕ ಸರ್ಕಾರಿ ಗೌರವ ಸೂಚಿಸಲಾಗಿದೆ. ಅಂತ್ಯಕ್ರಿಯೆಗೂ ಮುನ್ನ ಹೆಚ್‍ಎಸ್‍ಆರ್ ಲೇಔಟ್‍ನ ಎಂಸಿಹೆಚ್‍ಎಸ್ ಕ್ಲಬ್‍ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಓಂ ಪ್ರಕಾಶ್ ಜೊತೆಗೆ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳು ಅಂತಿಮ ದರ್ಶನ ಪಡೆದರು. ಈ ವೇಳೆ ಅವರ ಜೊತೆಗಿನ ಒಡನಾಟ ನೆನೆದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ನಿವೃತ್ತ ಡಿಜಿಪಿ ಬರ್ಬರ ಹತ್ಯೆ – ತಂಗಿಯರಿಗೆ ಆಸ್ತಿ ಕೊಟ್ಟಿದ್ದಕ್ಕೆ ನಡೀತಾ ಕೊಲೆ?

ಅಂತ್ಯಸಂಸ್ಕಾರದ ವೇಳೆ ಓಂ ಪ್ರಕಾಶ್ ಸಹೋದರಿ ಮತ್ತು ಪುತ್ರ ಕಾರ್ತೀಕೇಶ್ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಏನಿದು ಪ್ರಕರಣ?
ಹೆಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ಓಂ ಪ್ರಕಾಶ್ ಅವರನ್ನು ಭಾನುವಾರ (ಏ.20) ಸಂಜೆ 4 ಗಂಟೆ ಸುಮಾರಿಗೆ ಪತ್ನಿ ಪಲ್ಲವಿಯವರೇ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ 8-10 ಬಾರಿ ಎದೆ, ಹೊಟ್ಟೆ ಭಾಗಕ್ಕೆ ಇರಿದು ಕೊಲೆಗೈದಿದ್ದರು.

ಈ ವೇಳೆ, ಸುಮಾರು 10-15 ನಿಮಿಷ ರಕ್ತದ ಮಡುವಿನಲ್ಲಿ ಓಂ ಪ್ರಕಾಶ್ ಒದ್ದಾಡಿ ಪ್ರಾಣ ಬಿಟ್ಟಿದ್ದರು. ಈ ವೇಳೆ ಗಂಡನ ನರಳಾಟ ನೋಡುತ್ತಾ ಪತ್ನಿ ನಿಂತಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ನಿವೃತ್ತ IPS ಅಧಿಕಾರಿಗೆ 10 ಬಾರಿ ಚಾಕುವಿನಿಂದ ಇರಿದು ಕೊಂದ ಪತ್ನಿ; 15 ನಿಮಿಷ ನರಳಿ ಪ್ರಾಣಬಿಟ್ಟ ಓಂ ಪ್ರಕಾಶ್‌

Share This Article