ಬೆಂಗಳೂರು: ಸೈಟ್ ಮಾರಾಟ ಮಾಡಿಕೊಡುವುದಾಗಿ ನಂಬಿಸಿ ನಿವೃತ್ತ ಎಸಿಪಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿ ಒಂದರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ನಿವೃತ್ತ ಎಸಿಪಿ ಲವಕುಮಾರ್ ಎಂಬುವರು ಜಿಗಣಿಯ ನವ್ಯ ಲೇಔಟ್‍ನಲ್ಲಿ 90 ಲಕ್ಷ ಮೌಲ್ಯದ ಮೂರು ನಿವೇಶನ ಹೊಂದಿದ್ದರು. ಕೆಲದಿನಗಳ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ನಿರ್ಮಾಣ್ ಶೆಲ್ಟರ್ಸ್ ಕಂಪೆನಿ ಸಂಪರ್ಕಿಸಿ ತಮ್ಮ ಬಳಿಯಿರುವ ನಿವೇಶನಗಳನ್ನು ಮಾರಾಟ ಮಾಡಿಕೊಡಿಕೊಡುವುದಾಗಿ ಹೇಳಿದ್ದು, ಇದರಂತೆ ಪವರ್ ಅಫ್ ಅರ್ಟಾನಿ ಮೂಲಕ ಮೂಲ ದಾಖಲಾತಿ ನೀಡಿದ್ದರು. ಇದನ್ನೂ ಓದಿ: ಮೆಣಸಿಕಾಯಿ ಹೊಲದಲ್ಲಿ ಗಾಂಜಾ ಬೆಳೆದಿದ್ದ ಮೂವರಿಗೆ ಜೈಲು
Advertisement
Advertisement
ಇದೀಗ ಕಂಪೆನಿಯೂ ಮೂರು ಸೈಟ್ ಮಾರಾಟ ಮಾಡಿ 85 ಲಕ್ಷ ರೂಪಾಯಿ ಮಾರಾಟ ಮಾಡಿ 30 ಲಕ್ಷ ಹಣ ನೀಡಿ ಉಳಿದ ಹಣ ಸ್ವಂತ ಬಳಕೆ ಉಪಯೋಗಿಸಿಕೊಂಡು ಹಣ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ನಿವೃತ್ತ ಎಸಿಪಿ ಉಲ್ಲೇಖಿಸಿದ್ದಾರೆ. ಲವಕುಮಾರ್ ನೀಡಿದ ದೂರಿನ ಮೇರೆಗೆ ನಿರ್ಮಾಣ್ ಶೆಲ್ಟರ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮೀನಾರಾಯಣ್, ಕಂಪೆನಿ ಸಿಬ್ಬಂದಿ ಶಶಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಲಕ್ಷ್ಮೀ ನಾರಾಯಣ್ ಇದೇ ರೀತಿ ಸಾಕಷ್ಟು ಜನರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಾರಕ್ಕೊಮ್ಮೆ ಕುಡಿತಿದ್ದೋರು ಇನ್ಮೇಲೆ ದಿನಾ ಕುಡಿಯಲು ಆರಂಭಿಸ್ತಾರೆ – ಮಹಿಳೆಯರ ಪ್ರತಿಭಟನೆ
Advertisement