ಅಮೃತಸರಿ ಕುಲ್ಚಾ ಎಂದು ಕರೆಯಲ್ಪಡುವ ಗರಿಗರಿಯಾದ ಮತ್ತು ಮೃದುವಾದ ಇಂಡಿಯನ್ ಬ್ರೆಡ್ ಬೇಯಿಸಿದ ಆಲೂಗಡ್ಡೆ ಮತ್ತು ಮಸಾಲೆಗಳನ್ನು ಸೇರಿಸಿ ಸ್ಟಫ್ ಮಾಡಿ ತಯಾರಿಸಲಾಗುತ್ತದೆ. ಅಮೃತಸರಿ ಕುಲ್ಚಾ ಅಮೃತಸರದ ಅಧಿಕೃತ ಮತ್ತು ಮೂಲ ಪಂಜಾಬಿ ಖಾದ್ಯ. ಇದನ್ನು ಚೋಲೆ ಅಥವಾ ದಾಲ್ ಮಖಾನಿಯೊಂದಿಗೆ ಬಡಿಸಿದರೆ ಸಖತ್ ರುಚಿಯಾಗಿರುತ್ತದೆ. ರೆಸ್ಟೋರೆಂಟ್ ಸ್ಟೈಲ್‌ನಲ್ಲಿ ಅಮೃತಸರಿ ಕುಲ್ಚಾ ಹೇಗೆ ಮಾಡೋದು ಎಂದು ನಾವಿಂದು ತಿಳಿಸಿಕೊಡುತ್ತೇವೆ. ನೀವೂ ಮನೆಯಲ್ಲಿ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಹಿಟ್ಟು – 1 ಕಪ್
ಆಲಿವ್ ಎಣ್ಣೆ – 1 ಟೀಸ್ಪೂನ್
ಸ್ಟಫಿಂಗ್ ತಯಾರಿಸಲು:
ಬೇಯಿಸಿದ ಆಲೂಗಡ್ಡೆ – 1
ಈರುಳ್ಳಿ – ಅರ್ಧ
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್
ಹಸಿರು ಮೆಣಸಿನಕಾಯಿ – ಅರ್ಧ
ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
ಚಾಟ್ ಮಸಾಲಾ – ಚಿಟಿಕೆ
ಹಿಟ್ಟು ತಯಾರಿಸಲು:
ಉಪ್ಪು ರುಚಿಗೆ ತಕ್ಕಷ್ಟು
ಬೇಕಿಂಗ್ ಪೌಡರ್ – ಅರ್ಧ ಟೀಸ್ಪೂನ್
ಸಕ್ಕರೆ – ಅರ್ಧ ಟೀಸ್ಪೂನ್
ಮೊಸರು – 2 ಟೀಸ್ಪೂನ್
ಅಡುಗೆ ಸೋಡಾ – ಕಾಲು ಟೀಸ್ಪೂನ್
ಎಣ್ಣೆ – 2 ಟೀಸ್ಪೂನ್
ಉಗುರು ಬೆಚ್ಚಗಿನ ಹಾಲು – 2 ಟೀಸ್ಪೂನ್ ಇದನ್ನೂ ಓದಿ: ಬಂಗಾಳದ ಫೇಮಸ್ ಬಸಂತಿ ಪಲಾವ್ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಬಟ್ಟಲನ್ನು ತೆಗೆದುಕೊಂಡು ಜರಡಿ ಹಿಡಿದು ಹಿಟ್ಟನ್ನು ಗಾಳಿಸಿಕೊಳ್ಳಿ.
* ಅದಕ್ಕೆ ಮೊಸರು, ಎಣ್ಣೆ, ಅಡುಗೆ ಸೋಡಾ, ಬೇಕಿಂಗ್ ಪೌಡರ್ ಸೇರಿಸಿ.
* ಸಕ್ಕರೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಸಂಯೋಜಿಸುವವರೆಗೆ ನಿಮ್ಮ ಕೈಗಳಿಂದ ಮಿಶ್ರಣ ಮಾಡಿ.
* ಬೆಚ್ಚಗಿನ ಹಾಲನ್ನು ಸೇರಿಸಿ, ಮೃದುವಾಗಿ ಬೆರೆಸಿಕೊಳ್ಳಿ.
* ಹಿಟ್ಟಿನ ಮೇಲೆ ಶುಭ್ರವಾದ ಒದ್ದೆ ಬಟ್ಟೆಯನ್ನು ಹಾಕಿ ವಿಶ್ರಾಂತಿ ನೀಡಿ.
* ಈ ನಡುವೆ ಸ್ಟಫಿಂಗ್ ತಯಾರಿಸಿ. ಇದಕ್ಕಾಗಿ ಆಲೂಗಡ್ಡೆಯನ್ನು ತೆಗೆದುಕೊಂಡು, ಅದನ್ನು ಬಟ್ಟಲಿನಲ್ಲಿ ಮ್ಯಾಶ್ ಮಾಡಿ.
* ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಈರುಳ್ಳಿ ಸೇರಿಸಿ.
* ಚಾಟ್ ಮಸಾಲಾ, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಉಪ್ಪು ಸೇರಿಸಿ ಮಿಶ್ರಣ ಮಾಡಿ.
* ಹಿಟ್ಟನ್ನು ತೆಗೆದುಕೊಂಡು ಅದನ್ನು 2 ಭಾಗಗಳಾಗಿ ವಿಂಗಡಿಸಿ. ಪ್ರತಿಯೊಂದು ಭಾಗವನ್ನು ಚೆಂಡಿನಂತೆ ಸುತ್ತಿಕೊಳ್ಳಿ. ನಂತರ ಅದನ್ನು ಲಟ್ಟಣಿಗೆ ಬಳಸಿ ಸ್ವಲ್ಪ ಲಟ್ಟಿಸಿಕೊಳ್ಳಿ.
* ಹಿಟ್ಟಿನ ಮಧ್ಯೆ ಆಲೂಗಡ್ಡೆ ಸ್ಟಫಿಂಗ್ ಅನ್ನು ಹಾಕಿ, ಹಿಟ್ಟಿನ ಬದಿಗಳನ್ನು ಮಧ್ಯಕ್ಕೆತಂದು ಮತ್ತೆ ಚೆಂಡಿನಂತೆ ಸುತ್ತಿಕೊಳ್ಳಿ.
* ಈಗ ಹಿಟ್ಟನ್ನು ಮತ್ತೆ ಲಟ್ಟಿಸಿಕೊಳ್ಳಿ.
* ಈಗ ನಾನ್ ಸ್ಟಿಕ್ ಪ್ಯಾನ್‌ಗೆ ಸ್ವಲ್ಪ ಆಲಿವ್ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಬಳಿಕ ಕುಲ್ಚಾವನ್ನು ಎಚ್ಚರಿಕೆಯಿಂದ ಬಾಣಲೆಯಲ್ಲಿ ಇರಿಸಿ.
* ಒಂದು ಬದಿಯನ್ನು ಒಂದು ನಿಮಿಷ ಬೇಯಿಸಿದ ನಂತರ ತಿರುವಿ ಹಾಕಿ ಮತ್ತೊಂದು ಬದಿಯೂ ಕಾಯಿಸಿಕೊಳ್ಳಿ.
* ಕುಲ್ಚಾದ ಎರಡೂ ಬದಿ ಗರಿಗರಿಯಾಗಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಗ್ರಿಲ್ ಮಾಡಿ.
* ಇದೀಗ ಅಮೃತಸರಿ ಕುಲ್ಚಾ ತಯಾರಾಗಿದ್ದು, ಚೋಲೆಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಪಾರ್ಟಿಗೆ ಮಾಡಿ ಚೀಸಿ ಪನೀರ್ ಸಿಗರ್ ರೋಲ್ !