ವಾಷಿಂಗ್ಟನ್: ಅಮೆರಿಕದ ವೀಸಾ (Visa) ನಿಯಮಗಳನ್ನು ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳಿಗೆ ಅಮೆರಿಕ (America) ಗಡೀಪಾರು ಎಚ್ಚರಿಕೆ ನೀಡಿದೆ.
ವೀಸಾ ಅವಧಿ ಮೀರಿ ಉಳಿಯುವುದು ಮತ್ತು ಉಲ್ಲಂಘಿಸುವುದು ವೀಸಾ ರದ್ಧತಿ ಹಾಗೂ ಗಡೀಪಾರು ಸೇರಿದಂತೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಭಾರತ ಸೇರಿದಂತೆ ಇತರೆ ದೇಶದ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೆಂಪು ಕೋಟೆಗೆ ಪ್ರವೇಶಿಸಲು ಯತ್ನ – ಐವರು ಬಾಂಗ್ಲಾ ಪ್ರಜೆಗಳು ಅರೆಸ್ಟ್
ಅಮೆರಿಕದ ಗೃಹ ಭದ್ರತಾ ಇಲಾಖೆಯು, ಭಾರತ ಸೇರಿದಂತೆ ವಿದೇಶಿ ರಾಷ್ಟ್ರಗಳಲ್ಲಿ ವೀಸಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತನ್ನ ದೇಶದಲ್ಲಿರುವ ವಿದೇಶಿ ನಾಗರಿಕರಿಗೆ ಸೂಚನೆ ನೀಡಿದೆ. ವೀಸಾ ಅವಧಿ ಮೀರಿದರೆ, ಅಂತಹ ವ್ಯಕ್ತಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಬಹುದು. ಇದರಲ್ಲಿ ಗಡೀಪಾರು, ದಂಡ ಮತ್ತು ಭವಿಷ್ಯದಲ್ಲಿ ಅಮೆರಿಕ ಪ್ರವೇಶ ನಿಷೇಧವೂ ಸೇರಿರಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕ – ಭಾರತ ಕೌಂಟರ್‌ಗೆ ಟ್ರಂಪ್ ಬಿಗ್ ವಾರ್ನಿಂಗ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಗೃಹ ಭದ್ರತಾ ಇಲಾಖೆಯ ವಕ್ತಾರರು, ವಿದೇಶದಲ್ಲಿ ವೀಸಾ ನಿಯಮಗಳನ್ನು ಉಲ್ಲಂಘಿಸಿದರೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಯಾವುದೇ ದೇಶದ ಕಾನೂನುಗಳನ್ನು ಗೌರವಿಸುವುದು ಮತ್ತು ವೀಸಾ ಅವಧಿಯೊಳಗೆ ಉಳಿಯುವುದು ಅತ್ಯಗತ್ಯ ಎಂದು ಹೇಳಿದ್ದಾರೆ.
ಭಾರತದಲ್ಲಿರುವ ಅಮೆರಿಕ ನಾಗರಿಕರಿಗೆ, ತಮ್ಮ ವೀಸಾ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸುವಂತೆ ಯುಎಸ್ ರಾಯಭಾರ ಕಚೇರಿಯು ಸಲಹೆ ನೀಡಿದೆ. ಈ ಎಚ್ಚರಿಕೆಯು ಯುಎಸ್ ನಾಗರಿಕರಿಗೆ ತಮ್ಮ ಪ್ರಯಾಣ ಮತ್ತು ವಾಸಸ್ಥಾನದ ಯೋಜನೆಗಳನ್ನು ಕಾನೂನು ಚೌಕಟ್ಟಿನೊಳಗೆ ಇರಿಸಿಕೊಳ್ಳುವಂತೆ ತಿಳಿಸಿದೆ.