ಹುಬ್ಬಳ್ಳಿ ಧಾರವಾಡ ಮೇಯರ್‌ ಚುನಾವಣೆ – ಗದ್ದುಗೆ ಹಿಡಿಯಲು ಕೈ ಕಸರತ್ತು, ಬೆಂಗಳೂರಿನಲ್ಲಿ ಸಭೆ

Public TV
1 Min Read
Resort politics now in Hubballi Dharwad Mayoral Elections Congresss meeting Bengaluru

ಹುಬ್ಬಳ್ಳಿ: ಇದೇ 20 ರಂದು ನಡೆಯಲಿರುವ ಹುಬ್ಬಳ್ಳಿ-ಧಾರವಾಡ ಮೇಯರ್ ಚುನಾವಣೆಯಲ್ಲಿ (Hubballi-Dharwad Mayoral Elections) ಈ ಬಾರಿ ಅಧಿಕಾರಕ್ಕೆ ಏರಲು ಕಾಂಗ್ರೆಸ್‌ (Congress) ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh Lad) ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ನೇತೃತ್ವದಲ್ಲಿ ರಣತಂತ್ರ ರೂಪಿಸುತ್ತಿದೆ.

ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಸಚಿವ ಸಂತೋಷ್ ಲಾಡ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ರಹಸ್ಯ ಸಭೆ ನಡೆಸಿದ್ದಾರೆ. ಆಪರೇಷನ್ ಹಸ್ತದ ಭೀತಿಯಿಂದ ಬಿಜೆಪಿ ಸದಸ್ಯರು ಈಗಾಗಲೇ ದಾಂಡೇಲಿ ರೆಸಾರ್ಟ್ ಸೇರಿದ್ದು, ಉಳಿದ ಪಕ್ಷಗಳ ಮತ್ತು ಪಕ್ಷೇತರರ ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ.

ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಒಟ್ಟು 82 ಸದಸ್ಯ ಬಲ ಮ್ಯಾಜಿಕ್ ನಂಬರ್ 45 ಆಗಿದೆ. 39 ಬಿಜೆಪಿ,33 ಕಾಂಗ್ರೆಸ್, ಎಐಎಂಐಎಂ 3, ಜೆಡಿಎಸ್ 01, ಪಕ್ಷೇತರ-6 ಸ್ಥಾನಗಳನ್ನು ಹೊಂದಿದೆ‌. ಇದನ್ನೂ ಓದಿ: ರಶ್ ಅಂತ ಡ್ರೈವರ್ ಸೀಟ್‌ನಲ್ಲಿ ಮಕ್ಕಳ ಜೊತೆ ಬಸ್‌ ಹತ್ತಿದ ಮಹಿಳೆ

ಶಾಸಕರು, ಸಂಸದರು, ಪರಿಷತ್ ಸದಸ್ಯರು ಮತಗಳನ್ನು ಪರಿಗಣಿಸಿ ಮತದಾನದ ವೇಳೆ ಒಟ್ಟು 89 ಸದಸ್ಯರು ಹಕ್ಕು ಚಲಾವಣೆ ಮಾಡಬಹುದು. ಇಬ್ಬರು ಶಾಸಕರು, ಓರ್ವ ಸಂಸದರು, ಇಬ್ಬರು ಪರಿಷತ್ ಸದಸ್ಯರ ಬಲ ಬಿಜೆಪಿಗಿದೆ.

 

ಕಾಂಗ್ರೆಸ್‌ಗೆ ಓರ್ವ ಶಾಸಕರ ಬಲ ಮಾತ್ರವಿದೆ. ಶಾಸಕ ವಿನಯ ಕುಲಕರ್ಣಿಗೆ ಮತದಾನದ ಹಕ್ಕಿದೆ. ಆದರೆ ಧಾರವಾಡ ಜಿಲ್ಲೆಗೆ ಪ್ರವೇಶ ನಿಷೇಧ ಹಿನ್ನೆಲೆ ಮತದಾನಕ್ಕೆ ಬರುವುದು ಅನುಮಾನ. ಪರಿಷತ್‌ ಸಭಾಪತಿ ಆಗಿರುವ ಕಾರಣ ಬಸವರಾಜ ಹೊರಟ್ಟಿ ಮತದಾನ ಬರುವುದಿಲ್ಲ. ಈ ಕಾರಣಕ್ಕೆ ಮ್ಯಾಜಿಕ್‌ ಸಂಖ್ಯೆ 44ಕ್ಕೆ ಇಳಿದಿದೆ.

Share This Article