ಪಣಜಿ: ಹಾರುವ ಶಾಸಕರು ಖ್ಯಾತಿಯ ಗೋವಾದಲ್ಲಿ ಫಲಿತಾಂಶಕ್ಕೆ ಮುನ್ನವೇ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಬಹುತೇಕ ಎಕ್ಸಿಟ್ ಪೋಲ್ (Exit Poll) ಗಳಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬರಲ್ಲ ಎಂದು ಹೇಳ್ತಿರುವ ಕಾರಣ, ಕಾಂಗ್ರೆಸ್ ಪಕ್ಷ ಎಚ್ಚೆತ್ತಿದೆ. ತಮ್ಮ ಅಭ್ಯರ್ಥಿಗಳು ಬಿಜೆಪಿ ಗಾಳಕ್ಕೆ ಸಿಲುಕಬಾರದು ಎಂಬ ಮುಂದಾಲೋಚನೆಯಿಂದ ಎಲ್ಲರನ್ನು ರೆಸಾರ್ಟ್ ಒಂದಕ್ಕೆ ಶಿಫ್ಟ್ ಮಾಡಿದೆ.
Advertisement
ಪಿ ಚಿದಂಬರಂ, ಡಿ.ಕೆ ಶಿವಕುಮಾರ್, ದಿನೇಶ್ ಗುಂಡೂರಾವ್ ಈ ರಣತಂತ್ರದ ಮುಂದಾಳತ್ವ ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯತಂತ್ರವನ್ನೇ ಎಎಪಿಯೂ ಅನುಸರಿಸ್ತಿದೆ. ತಮ್ಮ ಅಭ್ಯರ್ಥಿಗಳನ್ನು ರಹಸ್ಯ ಸ್ಥಳಕ್ಕೆ ಶಿಫ್ಟ್ ಮಾಡಿದೆ. ಇತ್ತ ಬಿಜೆಪಿ ಟೆನ್ಶನ್‍ನಲ್ಲಿದೆ. ನಿನ್ನೆ ಪ್ರಧಾನಿ ಭೇಟಿ ಮಾಡಿದ್ದ ಸಿಎಂ ಪ್ರಮೋದ್ ಸಾವಂತ್, ಇಂದು ದೇವೇಂದ್ರ ಫಡ್ನಾವೀಸ್ ಭೇಟಿ ಮಾಡಿದ್ದಾರೆ. ಕಾಂಗ್ರೆಸ್‍ನ ರೆಸಾರ್ಟ್ ಪಾಲಿಟಿಕ್ಸ್‍ನ್ನು ಗಿಮಿಕ್ ಎಂದು ಟೀಕಿಸಿದ್ದಾರೆ. ಸರ್ಕಾರ ನಾವೇ ರಚಿಸೋದು ಎಂದಿದ್ದಾರೆ. ಇಲ್ಲಿ ಸಣ್ಣ ಪುಟ್ಟ ಪಕ್ಷಗಳು, ಪಕ್ಷೇತರರು ನಿರ್ಣಾಯಕವಾಗುವ ಸಂಭವ ಇದೆ. ಇದನ್ನೂ ಓದಿ: ಗೋವಾದಲ್ಲಿ ಮತ್ತೆ ಬಿಜೆಪಿ ಗೆಲ್ಲಲಿದೆ: ಪ್ರಮೋದ್ ಸಾವಂತ್
Advertisement
Advertisement
Exit Poll- ಗೋವಾದಲ್ಲಿ ಅತಂತ್ರ ಫಲಿತಾಂಶ
ಪೋಲ್ ಆಫ್ ದಿ ಪೋಲ್ಸ್ ಪ್ರಕಾರ ಅತಂತ್ರ ವಿಧಾನಸಭೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್ 16+, ಬಿಜೆಪಿ 16+ ಸ್ಥಾನ ಸಿಗಲಿದೆ. ಎಎಪಿ, ಟಿಎಂಸಿ+ಎಂಜಿಪಿ, ಪಕ್ಷೇತರರಿಗೆ 4-8 ಸ್ಥಾನ ಸಿಗಲಿದ್ದು ಇವರೇ ನಿರ್ಣಾಯಕರಾಗಲಿದ್ದಾರೆ. ಟಿಎಂಸಿ, ಎಎಪಿ ಬೆಂಬಲದ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಆಪರೇಷನ್ ಹಸ್ತಕ್ಕೆ ಚಿದು-ಡಿಕೆ ಟೀಂ ಪ್ರಯತ್ನ ಮಾಡುತ್ತಿದೆ. ಎಂಜಿಪಿ, ಪಕ್ಷೇತರರ ಬೆಂಬಲದ ನಿರೀಕ್ಷೆಯಲ್ಲಿ ಬಿಜೆಪಿ ಇದ್ದು, ಆಪರೇಷನ್ ಕಮಲಕ್ಕಾಗಿ ಫಡ್ನಾವೀಸ್. ಸಿ.ಟಿ.ರವಿ ರೆಡಿಯಾಗಿದ್ದಾರೆ. ಇದನ್ನೂ ಓದಿ: ಗುರುವಾರ ಪಂಚರಾಜ್ಯ ಚುನಾವಣಾ ಫಲಿತಾಂಶ- ಯುಪಿಯಲ್ಲಿ ಯಾರಿಗೆ ಒಲಿಯುತ್ತೆ ಅದೃಷ್ಟ..?
Advertisement
ಒಟ್ಟು ಸ್ಥಾನಗಳು 40, ಬಹುಮತಕ್ಕೆ 21
ಇಂಡಿಯಾ ಟುಡೇ
ಬಿಜೆಪಿ 14-18, ಕಾಂಗ್ರೆಸ್+ 15-20, ಆಪ್ – 0, ಟಿಎಂಸಿ 2-5, ಇತರರು 0-4
ರಿಪಬ್ಲಿಕ್
ಬಿಜೆಪಿ 13-17, ಕಾಂಗ್ರೆಸ್+ 13-17, ಆಪ್ 2-6, ಟಿಎಂಸಿ 2-4, ಇತರರು 0-4
ಟೈಮ್ಸ್ ನೌ
ಬಿಜೆಪಿ 14, ಕಾಂಗ್ರೆಸ್+ 16, ಆಪ್ 0, ಟಿಎಂಸಿ 0, ಇತರರು 10 ಇದನ್ನೂ ಓದಿ: ಪಂಜಾಬ್‍ನಲ್ಲಿ ಆಪ್‍ಗೆ ಸಿಗುತ್ತಾ ಅಧಿಕಾರ..?- ಉತ್ತರಾಖಂಡ್, ಮಣಿಪುರ ಕತೆಯೇನು..?
ಜನ್ ಕೀ ಬಾತ್
ಬಿಜೆಪಿ 14-19, ಕಾಂಗ್ರೆಸ್+ 13-19, ಆಪ್ 2-1, ಟಿಎಂಸಿ 5-2 ಇತರರು 1-3
2017 ಫಲಿತಾಂಶ
ಕಾಂಗ್ರೆಸ್ 17, ಬಿಜೆಪಿ 13, ಆಪ್ 0, ಇತರರು 10