– `ಐ ಸ್ಟಾಂಡ್ ವಿಥ್ ಯತ್ನಾಳ್’ ರಾಜೀನಾಮೆ ಪತ್ರ ರವಾನೆ
ವಿಜಯಪುರ: ಬಿಜಿಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಉಚ್ಚಾಟನೆ ಬೆನ್ನಲ್ಲೇ ವಿಜಯಪುರ (Vijayapura) ಜಿಲ್ಲಾ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಜಿಲ್ಲಾ ಬಿಜೆಪಿ ನಗರ ಮಂಡಲ ಅಧ್ಯಕ್ಷ ಸೇರಿದಂತೆ ಅನೇಕ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.
ಶಾಸಕ ಯತ್ನಾಳ್ ಅಭಿವೃದ್ಧಿ ಹರಿಕಾರ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಿದ್ದು ತಪ್ಪಾ? ಯತ್ನಾಳ್ ಉಚ್ಚಾಟನೆ ಈ ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ನಾಳೆ ಅನೇಕರು ಸೇರಿ ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂದು ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ್ ‘ಪಬ್ಲಿಕ್ ಟಿವಿ’ಗೆ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಾತಿ ಕೇಳಿ, ಮತ ಬ್ಯಾಂಕಿನಡಿ ಮಣೆ ಹಾಕುವುದು ಕಾಂಗ್ರೆಸ್ಸಿನ ನೀತಿ, ಮೋದಿ ನೀತಿಯಲ್ಲ: ಈದ್ ಕಿಟ್ ಟೀಕೆಗೆ ಸಿ.ಟಿ.ರವಿ ಟಕ್ಕರ್
ಜಿಲ್ಲಾ ಬಿಜೆಪಿ ನಗರ ಒಬಿಸಿ ಮೋರ್ಚಾ ಉಪಾಧ್ಯಕ್ಷ ಭೀಮು ಮಾಶ್ಯಾಳ್ ಹಾಗೂ ನಗರ ಮಂಡಳ ಅಧ್ಯಕ್ಷ ಶಂಕರ್ ಹೂಗಾರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಬಿಜೆಪಿ ನಗರ ಮಂಡಲ ರೈತ ಮೋರ್ಚಾ ಅಧ್ಯಕ್ಷ ರಾಚು ಬಿರಾದಾರ್ ಕೂಡ ರಾಜೀನಾಮೆ ನೀಡಿದ್ದು, `ಐ ಸ್ಟಾಂಡ್ ವಿಥ್ ಯತ್ನಾಳ್’ ಎಂದು ರಾಜೀನಾಮೆ ಪತ್ರ ಬರೆದು ವಾಟ್ಸಪ್‌ನಲ್ಲಿ ರವಾನಿಸಿದ್ದರು. ಇದನ್ನೂ ಓದಿ: ಬಿಜೆಪಿ ಬಣ ಬಡಿದಾಟಕ್ಕೆ ಹೈಕಮಾಂಡ್ ಬ್ರೇಕ್ – ಯತ್ನಾಳ್ ಉಚ್ಛಾಟನೆ, ಮುಂದೇನು?