ಬೆಂಗಳೂರು: : ಬೆಂಗಳೂರು ಬಸವನಗುಡಿ (Basavana Gudi) ಕಡ್ಲೆಕಾಯಿ ಪರಿಷೆ ಅಂದ್ರೆ ಸಿಕ್ಕಾಪಟ್ಟೆ ಫೇಮಸ್. ಪರಿಷೆಯಷ್ಟೇ ಫೇಮಸ್ ಜಾತ್ರೆಯ ತುತ್ತೂರಿ ಸೌಂಡ್. ಆದರೆ ಈ ವರ್ಷದ ಕಡ್ಲೆಕಾಯಿ ಪರಿಷೆಯ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹೌದು. ಸಿಲಿಕಾನ್ ಸಿಟಿಯ ಬಸವನಗುಡಿ ಪಾರಂಪರಿಕ ಕಡ್ಲೆಕಾಯಿ ಪರಿಷೆ (Kadale Kai Parishe) ಅಂದ್ರೆ ಬೆಂಗಳೂರಿಗೆ ಸಂಭ್ರಮ. ಪರಿಷೆಯಲ್ಲಿ ಕಡ್ಲೆಕಾಯಿ ಸಂಭ್ರಮದ ಜೊತೆಗೆ ಇಡಿ ಜಾತ್ರೆಯಲ್ಲಿ ಸಕತ್ ಸೌಂಡ್ ಮಾಡೋದು ಅಂದರೆ ತುತ್ತೂರಿ ಸೌಂಡ್. ಅದರಲ್ಲೂ ಕಾಲೇಜ್ ಹುಡುಗರಿಗಂತೂ ತುತ್ತೂರಿ ಹಾಟ್ ಫೇವರಿಟ್. ಅದರೆ ಈ ವರ್ಷ ಪರಿಷೆಯ ತುತ್ತೂರಿ ಸೌಂಡ್ ವಿರುದ್ಧ ಬಸವನಗುಡಿ ನಿವಾಸಿಗಳ ಹಿತರಕ್ಷಣಾ ವೇದಿಕೆ ಠಾಣೆಯ ಮೆಟ್ಟಿಲೇರಿದೆ. ತುತ್ತೂರಿ ಬಳಕೆಯಿಂದಾಗಿ ಶಬ್ಧಮಾಲಿನ್ಯವಾಗುತ್ತಿದೆ. ಈ ತುತ್ತೂರಿಯ ಸೌಂಡ್‍ನಿಂದ ಹೃದ್ರೋಗಿಗಳಿಗೆ ಬಿಪಿ ಸಮಸ್ಯೆ ಇರೋರಿಗೆ ತೊಂದರೆಯಾಗುತ್ತೆ ಅನ್ನೋದು ನಿವಾಸಿಗಳ ವಾದ.
ಇನ್ನು ಈ ವರ್ಷ ತುತ್ತೂರಿ ಬಳಕೆಗೆ ಬ್ರೇಕ್ ಹಾಕೋದಾಗಿ ಪೊಲೀಸರು ಕೂಡ ಭರವಸೆ ನೀಡಿದ್ದಾರಂತೆ. ಒಂದು ವೇಳೆ ಈ ವರ್ಷವೂ ತುತ್ತೂರಿ ಸೌಂಡ್ ಕೇಳಿಸಿದ್ರೇ, ನ್ಯಾಯಲಯದ ಮೆಟ್ಟಿಲೇರೋದಾಗಿ ಸ್ಥಳೀಯರು ಹೇಳಿದ್ದಾರೆ. ಇದನ್ನೂ ಓದಿ: ತುಳುವನ್ನು ಹೆಚ್ಚುವರಿ ಭಾಷೆಯಾಗಿ ಮಾಡೋದಕ್ಕೆ ಪ್ರಯತ್ನಿಸುತ್ತೇವೆ: ಸಿಎಂ
ಪರಿಷೆಗೆ ಮುಂಚಿತವಾಗಿ ತುತ್ತೂರಿ ಮಾರಾಟಕ್ಕೆ ಸಂಪೂರ್ಣ ನಿಷೇಧ ಹಾಕಬೇಕು ಅನ್ನೋದು ಸ್ಥಳೀಯರ ಒತ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ತುತ್ತೂರಿ ಬಗ್ಗೆ ಈ ಬಾರಿ ಏನಾಗಲಿದೆ ಅಂತಾ ಕಾದುನೋಡಬೇಕು.