ಬೆಂಗಳೂರು : 2026ನೇ ಸಾಲಿಗೆ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಹತ್ತಿರದ ವಸತಿ ಶಾಲೆ/ಕಾಲೇಜುಗಳ ಮೂಲಕ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಫೆ.7ರವರೆಗೆ ಅವಕಾಶವನ್ನು ವಿಸ್ತರಿಸಲಾಗಿದೆ ಎಂದು ಕೆಇಎ (KEA) ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದವರು ಒಳಮೀಸಲಾತಿ ವಿವರಗಳನ್ನು ಹಾಗೂ ಜಾತಿ ಪ್ರಮಾಣ ಪತ್ರದಲ್ಲಿ ಮುದ್ರಿತಗೊಂಡಿರುವ ಆರ್ .ಡಿ. ಸಂಖ್ಯೆಯನ್ನು ಆನ್ ಲೈನ್ ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಅವರು ತಿಳಿಸಿದ್ದಾರೆ.

