ಬೆಂಗಳೂರು: ಸರ್ಕಾರ ಎರಡೂವರೆ ವರ್ಷದ ಹೊಸ್ತಿಲಿನಲ್ಲಿರುವಾಗ ಸಂಪುಟ ಪುನಾರಚನೆ (Cabinet Reshuffle) ವಿಚಾರ ಪುಷ್ಟಿ ಪಡೆದುಕೊಳ್ಳುತ್ತಿದೆ. ಬಿಹಾರ ಫಲಿತಾಂಶ ಬಳಿಕ ಪುನಾರಚನೆ ಖಚಿತ ಎಂದು ಖುದ್ದು ಸಿಎಂ ಸಿದ್ದರಾಮಯ್ಯ (Siddaramaiah) ಸುಳಿವು ನೀಡಿದ್ದಾರೆ. ಆದರೆ ಪುನಾರಚನೆ ಕಸರತ್ತಿಗೆ ಪವರ್ ಶೇರ್ ಪಾಲಿಟಿಕ್ಸ್ ಮೂಲಕ ತಡೆ ಹಾಕುವ ಪ್ರಯತ್ನಗಳೂ ಸದ್ದಿಲ್ಲದೇ ನಡೆಯುತ್ತಿದೆ.
ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಸಂಪುಟ ಪುನಾರಚನೆ ಜಪ ಶುರುವಾಗಿದೆ. ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿದೆ ಎನ್ನಲಾದ ಕುರ್ಚಿ ಕಚ್ಚಾಟಕ್ಕೆ ಸಿಎಂ ಸಿದ್ದರಾಮಯ್ಯ ಪುನಾರಚನೆ ದಾಳ ಮೂಲಕ ಸೆಡ್ಡು ಹೊಡೆದಿದ್ದಾರೆ. ಶನಿವಾರ ಮಾತಾಡಿದ ಸಿಎಂ ಸಿದ್ದರಾಮಯ್ಯ, ಬಿಹಾರ ಫಲಿತಾಂಶ ಬಳಿಕ ಸಂಪುಟ ಪುನಾರಚನೆ ಖಚಿತ ಎಂಬ ಸಂದೇಶ ನೀಡಿದ್ದಾರೆ. ಮೂರ್ನಾಲ್ಕು ತಿಂಗಳ ಮೊದಲೇ ಹೈಕಮಾಂಡ್ ಪುನಾರಚನೆಗೆ ಸೂಚಿಸಿತ್ತು. ಎರಡೂವರೆ ವರ್ಷ ಆಗಲಿ ಎಂದು ನಾನೇ ಹೇಳಿದ್ದೆ ಎಂದು ಸಿಎಂ ಹೇಳಿದ್ದು, ಈ ವರ್ಷಾಂತ್ಯಕ್ಕೆ ಪುನಾರಚನೆ ಪಕ್ಕಾ ಎಂಬ ಸುಳಿವು ಕೊಟ್ಟಿದ್ದಾರೆ. ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಭಟ್ ಆಗ್ಲಿ, ಅವರಪ್ಪ ಆಗ್ಲಿ ಕಾನೂನು ಒಂದೇ: ಪ್ರಿಯಾಂಕ್ ಖರ್ಗೆ
ಇನ್ನು ಈಗಾಗಲೇ ಕೆಲ ಹಿರಿಯರಿಂದ ತ್ಯಾಗದ ಮಾತು ಕೇಳಿಬರುತ್ತಿದೆ. ಬದಲಾಗುವ ಪರಿಸ್ಥಿತಿ ಎದುರಿಸಲು ಮಾನಸಿಕವಾಗಿ ಕೆಲ ಹಿರಿಯರು ತಯಾರಾಗುತ್ತಿದ್ದಾರೆ. ಪುನಾರಚನೆಯಾದರೆ, 12ಕ್ಕೂ ಹೆಚ್ಚು ಸೀನಿಯರ್‌ಗಳಿಗೆ ಗೇಟ್‌ಪಾಸ್ ಕೊಡುವ ಸಾಧ್ಯತೆಯಿದೆ. ಇದಕ್ಕೆ ಪೂರಕವಾಗಿ ಹಿರಿಯ ಸಚಿವ ಕೃಷ್ಣಬೈರೇಗೌಡ ಕೂಡಾ ಪುನಾರಚನೆ ಖಚಿತ ಅಂದಿದ್ದಾರೆ. ಸರ್ಕಾರ ರಚನೆ ವೇಳೆಯೇ ಎರಡೂವರೆ ವರ್ಷದ ಬಳಿಕ ಹೊರಗಿರುವ ಶಾಸಕರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಹೈಕಮಾಂಡ್ ತಿಳಿಸಿತ್ತು ಅಂದಿದ್ದಾರೆ. ಹೈಕಮಾಂಡ್ ಹೇಳಿದರೆ ತ್ಯಾಗಕ್ಕೂ ಸಿದ್ಧ ಅಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸಂಪುಟ ಪುನಾರಚನೆ ಮಾಡಿದ್ರೆ ಅವ್ರೇ 5 ವರ್ಷ ಸಿಎಂ – ಕೆ.ಎನ್ ರಾಜಣ್ಣ ಬಾಂಬ್
ಈ ಮಧ್ಯೆ ತುಮಕೂರಲ್ಲಿ ಮಾತಾಡಿದ ಮಾಜಿ ಸಚಿವ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಸಿಎಂ ಬದಲಾವಣೆ ವಿಷ್ಯ ಸಂಪುಟ ಪುನಾರಚನೆ ಮೇಲೆ ನಿಂತಿದೆ. ಪುನಾರಚನೆ ಅಧಿಕಾರ ಯಾರಿಗೆ ಸಿಗುತ್ತೋ ಅವರೇ ಸಿಎಂ ಆಗಲಿದ್ದಾರೆ. ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಸಂಪುಟ ಪುನಾರಚನೆ ಅಧಿಕಾರ ಕೊಟ್ಟರೆ, ಅವರೇ 5 ವರ್ಷ ಸಿಎಂ. ಇಲ್ಲದಿದ್ದರೆ ರಾಜಕೀಯ ಸ್ಥಿತ್ಯಂತರ ಗ್ಯಾರಂಟಿ ಎಂದು ರಾಜಣ್ಣ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: Bihar Election 2025 | ಪಂಚಾಯತ್ ಪ್ರತಿನಿಧಿಗಳಿಗೆ ಪಿಂಚಣಿ, 50 ಲಕ್ಷ ವಿಮೆ, 5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ತೇಜಸ್ವಿ ಭರವಸೆ
ಆದರೆ ಸಂಪುಟ ಕಸರತ್ತು ಅಷ್ಟು ಸುಲಭವಿಲ್ಲ. ಎರಡೂವರೆ ವರ್ಷದ ಬಳಿಕ ಕುರ್ಚಿ ಬದಲಾವಣೆಗೆ ಡಿಕೆಶಿ (DK Shivakumar) ವೇಯ್ಟ್ ಅಂಡ್ ವಾಚ್ ಮಾಡ್ತಿದ್ದು, ಹೈಕಮಾಂಡ್ ನಾಮ ಜಪದ ದಾಳ ಪ್ರಯೋಗಿಸುತ್ತಿದ್ದಾರೆ. ಆದರೆ ಪುನಾರಚನೆ ಮೂಲಕ ಪವರ್ ಶೇರ್‌ಗೆ ಬ್ರೇಕ್ ಹಾಕೋದು ಸಿಎಂ ಪ್ಲ್ಯಾನ್. ಬಿಹಾರ ಫಲಿತಾಂಶ ಬಳಿಕ ದೆಹಲಿ ಭೇಟಿಗೆ ಸಿಎಂ ಮುಂದಾಗಿದ್ದಾರೆ. ಆದ್ರೆ ಹೈಕಮಾಂಡ್ ಸೂತ್ರ ಏನು ಅನ್ನೋದು ಸದ್ಯಕ್ಕೆ ಬಿಗ್ ಸೀಕ್ರೆಟ್. ರೀಶಫಲ್ ವರ್ಸಸ್ ಪವರ್ ಶೇರ್ ವ್ಯಾಜ್ಯ ಹೈಕಮಾಂಡ್ ಮೆಟ್ಟಿಲೇರಲಿದೆ. ಬಿಹಾರ ರಿಸಲ್ಟ್ ಬಳಿಕ ದೆಹಲಿ ದಂಗಲ್ ಜೋರಾಗೋದು ಫಿಕ್ಸ್. ಇದನ್ನೂ ಓದಿ: ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ತುಂಡುಗಳ ಕಳ್ಳಸಾಗಣೆ – 18 ಮೂಟೆಗಳಲ್ಲಿ 750 ಕೆಜಿ ಶ್ರೀಗಂಧ ವಶಕ್ಕೆ

