ಧಾರವಾಡ: ಮೀಸಲು ಪಡೆಯ ಹೆಡ್‌ಕಾನ್‌ಸ್ಟೇಬಲ್ (Headconstable) ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಶಹರ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್‌ಸ್ಟೇಬಲ್ ಭೀಮಣ್ಣ ಸತ್ಯಪ್ಪನವರ (56) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ. ರಾತ್ರಿ ಧಾರವಾಡ (Dharawada) ಜಿಲ್ಲಾಡಳಿತದ ಎಲೆಕ್ಷನ್ ಸೆಲ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಭೀಮಣ್ಣ ಬೆಳಗ್ಗೆ ಮನೆಗೆ ಹೋದಾಗ ಹೃದಯಾಘಾತವಾಗಿದೆ. ಇದನ್ನೂ ಓದಿ: ಬುಧವಾರ ಜಮೀರ್ ಜೊತೆ ತೆರಳಿ ನಾಮಪತ್ರ ವಾಪಸ್ ಪಡೆಯುತ್ತೇನೆ: ಅಜ್ಜಂಪೀರ್ ಖಾದ್ರಿ
ಮಾಜಿ ಯೋಧರಾಗಿದ್ದ ಭೀಮಣ್ಣ ಸೇನೆಯ ಸೇವೆಯ ಬಳಿಕ ಪೊಲೀಸ್ ಇಲಾಖೆ ಸೇರಿದ್ದರು. ಇವರು 2016ರಲ್ಲಿ ಪೊಲೀಸ್ ಸೇವೆಗೆ ಭರ್ತಿಯಾಗಿದ್ದರು. ಇದನ್ನೂ ಓದಿ: ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣ ಪರಿಚಯಿಸಿದ್ದೇ ಕಾಂಗ್ರೆಸ್: ಬೊಮ್ಮಾಯಿ