ನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಬಳಿಕ 1 ಸಾವಿರ ಮುಖಬೆಲೆಯ ನೋಟನ್ನು ಚಲಾವಣೆ ಮಾಡಲು ಸಿದ್ಧತೆ ನಡೆಸುತ್ತಿರುವ ಆರ್‍ಬಿಐ ಈಗ 100 ರೂ. ಮುಖಬೆಲೆಯ ಹೊಸ ನೋಟುಗಳನ್ನೂ ಬಿಡುಗಡೆ ಮಾಡಲು ಮುಂದಾಗುತ್ತಿದೆ.
ಈಗ ಇರುವ ಮಹಾತ್ಮಗಾಂಧಿ ಸರಣಿಯ 2005ರ ನೋಟುಗಳ ವಿನ್ಯಾಸದಲ್ಲೇ ಹೊಸ ನೋಟುಗಳು ಇರಲಿದ್ದು, ನೋಟಿನ ಹಿಂಭಾಗದಲ್ಲಿ ಮುದ್ರಣ ವರ್ಷ 2017 ಎಂದು ಮುದ್ರಣವಾಗಲಿದೆ. ನೋಟಿನ ನಂಬರ್‍ನಲ್ಲಿ ಇಂಗ್ಲಿಷಿನ ‘ಆರ್’ ಅಕ್ಷರ ಇರಲಿದ್ದು, ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯೊಂದಿಗೆ ಬರಲಿದೆ.
Advertisement
ಹಳೆ ನೋಟಿನ ಕತೆ ಏನು?
ಹೊಸ ನೋಟು ಚಲಾವಣೆ ಬಂದಾಗ ಹಳೆ ನೋಟು ನಿಷೇಧವಾಗುತ್ತಾ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಈ ಪ್ರಶ್ನೆಗೆ ಆರ್‍ಬಿಐ ಉತ್ತರ ನೀಡಿದ್ದು ಹಳೆ ನೋಟುಗಳು ಈಗ ಇರುವಂತೆ ಚಲಾವಣೆಯಲ್ಲಿ ಮುಂದುವರಿಯಲಿದೆ. ಇವುಗಳ ಜೊತೆಗೆ ಹೊಸ ನೋಟುಗಳು ಚಲಾವಣೆಯಾಗಲಿದೆ ಎಂದು ತಿಳಿಸಿದೆ.