ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸದ್ಯದಲ್ಲಿಯೇ 20 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ.
2016ರ ಮಾರ್ಚ್ 31ರ ವೇಳೆ ಸುಮಾರು 492 ಕೋಟಿ 20 ರೂ. ನೋಟುಗಳ ಚಲಾವಣೆಯಲ್ಲಿದ್ದರೆ, ಇದು 2018ರ ಮಾರ್ಚ್ ವೇಳೆ ದ್ವಿಗುಣಕ್ಕೂ ಅಧಿವಾಗಿದ್ದು, 1 ಸಾವಿರ ಕೋಟಿ ನೋಟುಗಳು ಚಲಾವಣೆಯಲ್ಲಿದೆ. ಈ ಮೂಲಕ ಒಟ್ಟಾರೆ ನೋಟುಗಳ ಪೈಕಿ ಶೇ 9.8ರಷ್ಟು 20 ರೂ. ನೋಟುಗಳು ಚಲಾವಣೆಯಲ್ಲಿದೆ.
Advertisement
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2016ರಲ್ಲಿ 500 ರೂ. ಹಾಗೂ 1 ಸಾವಿರ ರೂ. ನೋಟುಗಳನ್ನು ನಿಷೇಧಿಸಿತ್ತು. ಇದರ ಬೆನ್ನಲ್ಲೇ 500 ಹಾಗೂ 2,000 ರೂ. ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು.
Advertisement
Advertisement
ನಂತರದ ದಿನಗಳಲ್ಲಿ ಆರ್‌ಬಿಐ ಹೊಸ ಮಾದರಿಯಲ್ಲಿ 10 ರೂ, 50 ರೂ, 100 ನೋಟುಗಳ ವಿನ್ಯಾಸವನ್ನು ಬದಲಿಸಿತು. ಅಷ್ಟೇ ಅಲ್ಲದೆ 200 ರೂ. ನೋಟನ್ನು ಮುದ್ರಿಸಿ ಚಾಲನೆಗೆ ತಂದಿತ್ತು. 2016ರ ನವೆಂಬರ್‌ನಿಂದ ಈ ಹೊಸ ರೂಪದ ನೋಟುಗಳು ಚಾಲ್ತಿಯಲ್ಲಿ ಬಂದಿವೆ.
Advertisement
ಹಳೇ ನೋಟುಗಳಿಗಿಂತ ಹೊಸ ನೋಟುಗಳು ಚಿಕ್ಕದಾಗಿವೆ. ಬಣ್ಣ, ವಿನ್ಯಾಸದಲ್ಲಿ ವಿಭಿನ್ನವಾಗಿರುವ ಹೊಸ ನೋಟುಗಳು ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದವು. 500, 1 ಸಾವಿರ ರೂ. ಬೆಲೆಯ ನೋಟು ಹೊರತು ಪಡಿಸಿ ಉಳಿದ ಎಲ್ಲ ಮೌಲ್ಯದ ಹಳೆಯ ನೋಟುಗಳು ಈಗಲೂ ಚಲಾವಣೆಯಲ್ಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv