ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.
ಮೂಡಿಗೆರೆ ತಾಲೂಕಿನ ನೇರಂಕಿ ಗ್ರಾಮದ ರಾಮದಾಸ್ ಗೌಡರವರ ತೋಟದಲ್ಲಿ ಕಾಳಿಂಗವೊಂದು ಎರಡು ದಿನಗಳಿಂದ ಬೀಡು ಬಿಟ್ಟಿತ್ತು. ತೋಟದ ಕೂಲಿ ಕಾರ್ಮಿಕರು ನೋಡಿ ಸುಮ್ಮನಾಗಿದ್ದರು. ಆದರೆ ತೋಟದಲ್ಲೆಲ್ಲಾ ಓಡಾಡುತ್ತಿದ್ದ ಕಾಳಿಂಗ ಕೂಲಿ ಕಾರ್ಮಿಕರಲ್ಲಿ ಭಯ ಮೂಡಿಸಿತ್ತು.
ಕೂಲಿಯಾಳುಗಳು ಕಾಳಿಂಗ ಸರ್ಪ ದೊಡ್ಡದಾದ ಬಿಲ ಸೇರಿಕೊಂಡಿದ್ದನ್ನ ಗಮನಿಸಿದ್ದಾರೆ. ಬಳಿಕ ಅವರು ತೋಟದ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ತೋಟದ ಮಾಲೀಕ ಉರಗ ತಜ್ಞ ಆರೀಫ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಉರಗ ತಜ್ಞ ಆರೀಫ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಹರಸಾಹಸಪಟ್ಟು ಬಿಲದೊಳಗಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ಬೂದು ಬಣ್ಣದಿಂದ ಕೂಡಿರುವ ಈ ಸರ್ಪ ಹೆಣ್ಣು ಕಾಳಿಂಗವಾಗಿದೆ. ಗಂಡು ಜಾತಿಗೆ ಸೇರಿದ ಕಾಳಿಂಗಗಳು ಕಪ್ಪನೆ ಬಣ್ಣದಿಂದ ಕೂಡಿರುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv