ಅಮರಾವತಿ: ಮೋಜಿಗಾಗಿ ಗೆಳೆಯರೆಲ್ಲ ಸೇರಿ ಪಿಕ್ ನಿಕ್ ಗೆ ತೆರಳಿದ್ದ ವೇಳೆ ಪವಿತ್ರ ಸಂಗಮದಲ್ಲಿ ನೀರುಪಾಲಾಗಿದ್ದ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮೃತ ದೇಹಗಳನ್ನು ಹೊರತೆಗೆಯಲಾಗಿದೆ.
ಭಾರತೀಯ ನೇವಿ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ತಂಡಗಳು ಕಾರ್ಯಾಚರಣೆ ನಡೆಸಿ, ಮೃತ ದೇಹಳನ್ನು ಹೊರತೆಗೆದಿದ್ದಾರೆ ಎಂದು ಆಂಧ್ರಪ್ರದೇಶ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
Advertisement
ಈ ವಿದ್ಯಾರ್ಥಿಗಳು ಕೃಷ್ಣಾ ಜಿಲ್ಲೆಯ ಕಂಚಿಕಚರ್ಲಾದ ಖಾಸಗಿ ಎಂಜಿನೀಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಒದುತ್ತಿದ್ದರು. ರಂಗಾರೆಡ್ಡಿ ಜಿಲ್ಲೆಗೆ ಪಟ್ನಮಸ್‍ಸ ಪವಿತ್ರ ಸಂಗಮಕ್ಕೆ 5 ಮಂದಿ ಸ್ನೇಹಿತರು ಪಿಕ್‍ನಿಕ್ ಗೆ ಅಂತಾ ನದಿಗೆ ಬಂದಿದ್ದರು. ಅಲ್ಲಿ ಗೆಳೆಯರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಈ ವೇಳೆ ಒಬ್ಬ ವಿದ್ಯಾರ್ಥಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ಯಾರಿಕೇಡ್ ದಾಟುವ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾನೆ.
Advertisement
ಇದನ್ನು ನೋಡಿ ಆತನ ಮೂವರು ಸ್ನೇಹಿತರು ತಮ್ಮ ಸ್ನೇಹಿತನ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಪರಿಸ್ಥಿತಿ ಪ್ರತಿಕೂಲವಾಗಿದ್ದು ಆತನ ಜೊತೆಗೆ ಮೂವರೂ ನೀರಿನಲ್ಲಿ ಮುಳುಗಿ ಹೋಗಿದ್ದಾರೆ. ಆದರೆ ಒಬ್ಬ ವಿದ್ಯಾರ್ಥಿ ಮಾತ್ರ ನೀರಿಗೆ ಹಾರದೇ ಅಲ್ಲಿಯೇ ಉಳಿದುಕೊಂಡಿದ್ದ.
Advertisement
ತನ್ನ ಸ್ನೇಹಿತರೆಲ್ಲ ಈ ರೀತಿ ನೀರಿನಲ್ಲಿ ಮುಳುಗಿಹೋದ ಸುದ್ದಿಯನ್ನು ಪೊಲೀಸರಿಗೆ ಮುಟ್ಟಿಸಿದ್ದ. ಆಗ ಸ್ಥಳಕ್ಕೆ ಎನ್‍ಡಿಆರ್‍ಎಫ್ ತಂಡದೊಂದಿಗೆ ಆಗಮಿಸಿದ ಪೊಲೀಸರು ಸುಮಾರು 100 ಜನ ಮುಳುಗು ತಜ್ಞರನ್ನು ಒಳಗೊಂಡು ಮುಳುಗಿ ಹೋದವರ ಪತ್ತೆಗೆ ತೀವೃ ಶೋಧ ನಡೆಸಿದ್ದರು.