ಬೆಂಗಳೂರು: ಕೃಷ್ಣಾ ನದಿಯಿಂದ ಜಲಾವೃತಗೊಂಡ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿದ್ದ ಸಂಕಷ್ಟದಲ್ಲಿದ್ದ ಗ್ರಾಮಸ್ಥರನ್ನು ಹೆಲಿಕಾಪ್ಟರ್ ಬಳಸಿ ರಕ್ಷಣೆ ಮಾಡಲಾಗಿದೆ.
ಕೃಷ್ಣಾ ತೀರ ಪ್ರದೇಶಗಳಲ್ಲಿ ವರುಣನ ಅಬ್ಬರ ಕಡಿಮೆಯಾಗಿದೆ. ಆದ್ರೆ ಮಳೆಯಿಂದ ಉಂಟಾಗಿರುವ ನೆರೆ ಮಾತ್ರ ಕಡಿಮೆಯಾಗುತ್ತಿಲ್ಲ. ಹಲವು ಗ್ರಾಮಗಳು ಇನ್ನೂ ಜಲಾವೃತವಾಗಿದ್ದು, ನಡುಗಡ್ಡೆಗಳಾಗಿ ಪರಿಣಮಿಸಿದೆ.
Advertisement
Advertisement
ಗೋಕಾಕ್‍ನ ಅಂಕಲಗಿ ಗ್ರಾಮ ಕೂಡ ಮುಳುಗಡೆಯಾಗಿದ್ದು, ವಯಸ್ಕರು, ಮಹಿಳೆಯರು ಸೇರಿದಂತೆ ಹಲವು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಈ ವಿಚಾರವನ್ನು ತಿಳಿದು ಎನ್‌ಡಿಆರ್‌ಎಫ್ ತಂಡ ಹೆಲಿಕಾಪ್ಟರ್ ಮೂಲಕ ಅವರೆಲ್ಲರನ್ನು ರಕ್ಷಣೆ ಮಾಡಿದೆ. ಹೆಲಿಕಾಪ್ಟರ್ ಮೂಲಕ ಹಗ್ಗ ಇಳಿಬಿಟ್ಟು ಸಂತ್ರಸ್ಥರನ್ನು ಕಾಪಾಡಿದ್ದಾರೆ.
Advertisement
ಯಾದಗಿರಿಯ ಹುಣಸಿಗಿ ತಾಲೂಕಿನ ಗೆದ್ದಲಮರಿ ಗ್ರಾಮದ ಹಳ್ಳೆಪ್ಪ ಕುಟುಂಬ ಕಳೆದೆರೆಡು ದಿನಗಳಿಂದ ನಡುಗಡೆಯಲ್ಲಿ ಸಿಲುಕಿ ಪರದಾಡ್ತಿತ್ತು. ಇವರನ್ನು ಸಹ ಹೆಲಿಕಾಪ್ಟರ್ ಮೂಲಕ ಕುಟುಂಬವನ್ನ ರಕ್ಷಣೆ ಮಾಡಲಾಗಿದೆ.
Advertisement
ವಿಜಯಪುರದಲ್ಲಿ ಹೆಲಿಕಾಪ್ಟರ್ ಮೂಲಕ ಸಂತ್ರಸ್ತರಿಗೆ ಆಹಾರ, ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು. ಒಟ್ಟಾರೆ ಮನೆ ಮಠ ಕಳೆದುಕಂಡು ನಲುಗಿ ಹೋಗಿದ್ದ ಸಂತ್ರಸ್ತರಿಗೆ ಹೆಲಿಕಾಪ್ಟರ್ ಜೀವ ನೀಡಿದೆ.