ಕಾರವಾರ: ಭಕ್ಷಣೆಗಾಗಿ ಗೋವಾಗೆ (Goa) ಬಸ್‌ನಲ್ಲಿ ಸಾಗಾಟ ಮಾಡುತ್ತಿದ್ದ 41 ಬುಲ್ ಫ್ರಾಗ್ ಕಪ್ಪೆಗಳನ್ನು ಕಾರವಾರದ (Karwar) ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಗೋವಾ ಮೂಲದ ಇಬ್ಬರನ್ನು ಬಂಧಿಸಿ ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಆಧಾರದಲ್ಲಿ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಕಾಳಿ ಬ್ರಿಡ್ಜ್ ಬಳಿ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ಗೋವಾ ಮೂಲದ ಕಾಣಕೋಣ್ ನಿವಾಸಿ ಚಾಲಕ ಸಿದ್ದೇಶ್ ದೇಸಾಯಿ ಹಾಗೂ ನಿರ್ವಾಹಕ ಜಾನು ಲೂಲಿಮ್ ಎಂಬವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೇವರಂಥ ಮನುಷ್ಯ, ನಾಯಿಯಂತ ಬುದ್ಧಿ- ದರ್ಶನ್‌ಗೆ ತಿವಿದ ಉಮಾಪತಿ
ಕಪ್ಪೆ ರಕ್ಷಣೆ ಏಕೆ? ಏನಿದರ ಗುಟ್ಟು?
ಗೋವಾದಲ್ಲಿ ಜಂಪಿಂಗ್ ಚಿಕನ್ ಎಂದೇ ಹೆಸರು ಪಡೆದಿರುವ ಕಪ್ಪೆಗಳ ಖಾದ್ಯ ಪ್ರಖ್ಯಾತಿ ಗಳಿಸಿದೆ. ಬುಲ್ ಫ್ರಾಗ್ ಜಾತಿಯ ಕಪ್ಪೆಗಳು ಅತೀ ದೊಡ್ಡದಾಗಿರುತ್ತದೆ. ಇದನ್ನು ಜೀವಂತವಾಗಿ ಹಿಡಿದು ಗೋವಾದಲ್ಲಿ ಇವುಗಳ ಕಾಲುಗಳನ್ನು ಕಡಿದು ಫ್ರೈ ಮಾಡಿ ಭಕ್ಷಿಸುತ್ತಾರೆ. ಇದಲ್ಲದೇ ಜೀವಂತವಾಗಿಯೇ ಇವುಗಳ ಚರ್ಮ ತೆಗೆದು ಫ್ರೈ ಮಾಡಿ ತಿನ್ನುತ್ತಾರೆ. ಗೋವಾ ಭಾಗದಲ್ಲಿ ಈ ಕಪ್ಪೆಗಳ ಭಕ್ಷವನ್ನು ಜಂಪಿಂಗ್ ಚಿಕನ್ ಎನ್ನುತ್ತಾರೆ. ಇದನ್ನೂ ಓದಿ: ದರ್ಶನ್ ಫಾರ್ಮ್ ಹೌಸ್ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಆತ್ಮಹತ್ಯೆ
ಗೋವಾ ಜನರು ಸೇರಿ, ವಿದೇಶಿಗರಿಗೂ ಈ ಕಪ್ಪೆ ಖಾದ್ಯ ಬಲು ಪ್ರೀತಿ. ಒಂದು ಕಪ್ಪೆ ಖಾಧ್ಯಕ್ಕೆ 1,500ಕ್ಕೂ ಹೆಚ್ಚು ದರ ವಿಧಿಸಲಾಗುತ್ತದೆ. ಇನ್ನು ಈ ಕಪ್ಪೆಗಳು ಗೋವಾ ಭಾಗದಲ್ಲಿ ಸಿಗುವುದಿಲ್ಲ. ಹೀಗಾಗಿ ಪಶ್ಚಿಮ ಘಟ್ಟ ಪ್ರದೇಶವಾದ ಕಾರವಾರ, ಅಂಕೋಲ ಸೇರಿದಂತೆ ಇತರೆ ಭಾಗದಿಂದ ಇವುಗಳನ್ನು ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಒಂದು ದೊಡ್ಡ ಕಪ್ಪೆಗೆ ಕನಿಷ್ಟ 500 ರೂ.ಗಳ ದರ ನೀಡಲಾಗುತ್ತದೆ. ಹೀಗಾಗಿ ಇವುಗಳ ಬೇಟೆ ಕಾರವಾರ, ಅಂಕೋಲ ಭಾಗದಲ್ಲಿ ಅತೀ ಹೆಚ್ಚಿದ್ದು ಜೀವಂತವಾಗಿ ಹಿಡಿದು ಗೋವಾಕ್ಕೆ ಸಾಗಿಸಲಾಗುತ್ತದೆ. ಇದನ್ನೂ ಓದಿ: ಮೂವರು ಮಕ್ಕಳನ್ನ ಬಿಟ್ಟು ವ್ಯಕ್ತಿ ಜೊತೆ ಓಡಿ ಹೋದ ತಾಯಿ – ಪೊಲೀಸ್ ಠಾಣೆ ಮೆಟ್ಟಿಲೇರಿದ ಮಕ್ಕಳು
ಕರ್ನಾಟಕ ರಾಜ್ಯ ಸರ್ಕಾರವು ಅರಣ್ಯ ಕಾಯ್ದೆ ಷಟ್ಯಲ್ 1 ರಂತೆ ಈ ಕಪ್ಪೆಗಳ ಬೇಟೆ, ರಕ್ಷಣೆಯನ್ನು ನಿಷೇಧಿಸಿದೆ. ಆದರೂ ಗೋವಾದಲ್ಲಿ ಅತೀ ಹೆಚ್ಚು ಬೇಡಿಕೆ ಇರುವುದರಿಂದ ಮಳಡಗಾಲದ ಆರಂಭದಲ್ಲಿ ಇವುಗಳ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತವೆ. ಆದರೆ ಇದೀಗ ಕಾರವಾರದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಲವು ದಿನದ ಕಾರ್ಯಾಚರಣೆ ಬಳಿಕ ದೊಡ್ಡ ಮಟ್ಟದ ಕಪ್ಪೆಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ನಟ ದರ್ಶನ್ ಬಿಡುಗಡೆಗಾಗಿ ಅಭಿಮಾನಿಗಳಿಂದ ಪಾದಯಾತ್ರೆ: ದೇವಸ್ಥಾನದಲ್ಲಿ ವಿಶೇಷ ಪೂಜೆ