ನವದೆಹಲಿ: ಮೀನುಗಾರಿಕೆಂದು (Fishing) ತೆರಳಿ ಬಂಗಾಳಕೊಲ್ಲಿಯಲ್ಲಿ (Bay Of Bengal) ಸಿಲುಕಿಕೊ0ಡಿದ್ದ 36 ಭಾರತೀಯ ಮೀನುಗಾರರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಭಾರತೀಯ ನೌಕಾ ಹಡಗು (INS) ಖಂಜಾರ್ ಮೂಲಕ ತಮಿಳುನಾಡು ಕರಾವಳಿಯಿಂದ 130 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್ ತಿಳಿಸಿದ್ದಾರೆ. ಇದನ್ನೂ ಓದಿ: ಪಟಾಕಿ ಗೋದಾಮಿನಲ್ಲಿ ಸ್ಫೋಟ – ಒಂದೇ ಕುಟುಂಬದ ನಾಲ್ವರು ಸೇರಿ 9 ಮಂದಿ ಸಾವು
Advertisement
Advertisement
ಮೀನುಗಾರರು 3 ಮೀನುಗಾರಿಕಾ ಹಡಗುಗಳಲ್ಲಿ ತೆರಳಿದ್ದು, 30 ಗಂಟೆಗಳ ಕಾರ್ಯಾಚರಣೆಯ ಮೂಲಕ ಮೀನುಗಾರರನ್ನು ಅಪಾಯದಿಂದ ಪಾರು ಮಾಡಲಾಗಿದೆ. ಖಂಜಾರ್ ನೌಕೆ ಸಮುದ್ರದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ತಮಿಳುನಾಡು (Tamil Nadu) ಕರಾವಳಿಯಿಂದ ಸರಿಸುಮಾರು 130 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮೂರು ಮೀನುಗಾರಿಕಾ ಹಡಗುಗಳಾದ ಶಬರನಾಥನ್, ಕಲೈವಾಣಿ ಮತ್ತು ಮಿಸಾಮಿ ಪತ್ತೆಯಾಗಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್ – ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ CBI
Advertisement
36 ಮೀನುಗಾರರು ಮೂರು ಹಡಗುಗಳಲ್ಲಿ ತಮಿಳುನಾಡಿನ ನಾಗಪಟ್ಟಣದಿಂದ ತೆರಳಿದ್ದ ವೇಳೆ ಹಡಗಿನ ಇಂಧನ ಖಾಲಿಯಾಗಿದ್ದಲ್ಲದೇ ಪ್ರತಿಕೂಲ ಹವಾಮಾನ ಹಾಗೂ ಎಂಜಿನ್ ಸ್ಥಗಿತಗೊಂಡ ಕಾರಣ ಎರಡು ದಿನಗಳಿಂದ ಸಮುದ್ರದಲ್ಲಿ ಸಿಲುಕಿಕೊಂಡಿದ್ದರು ಎಂದು ಕಮಾಂಡರ್ ಮಧ್ವಲ್ ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರಿ ಉದ್ಯೋಗಕ್ಕೆ ತರಬೇತಿ ನಡೆಸಿದ್ದ ಯುವತಿ - ಕೊಲೆಗೆ 3 ದಿನಗಳ ಹಿಂದೆಯೇ ಸ್ಕೆಚ್ ಹಾಕಿದ್ದ ಪಾಪಿ ಪ್ರೇಮಿ!
Advertisement
ಪ್ರತಿಕೂಲ ಹವಾಮಾನದ ನಡುವೆಯೂ 30 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮೀನುಗಾರರನ್ನು ಸುರಕ್ಷಿತವಾಗಿ ಚೆನ್ನೈ ಬಂದರಿಗೆ ಕರೆತರಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮರನಾಥ ಯಾತ್ರೆ ಮುಗಿಸಿ ವಾಪಸ್ ಆಗ್ತಿದ್ದ ಬಸ್ ಅಪಘಾತ – ಐವರ ಸಾವು
Web Stories