ಹೈದರಾಬಾದ್: ತೆಲಂಗಾಣದ ನಾಗರ್‌ಕರ್ನೂಲ್ (Nagarkurnool) ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (Srisailam Left Bank Canal) ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ದೋಮಲಪೆಂಟಾ ಬಳಿಯ ಶ್ರೀಶೈಲಂ ಅಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದ್ದು, ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿತ್ತು. ಈ ವೇಳೆ ಕುಸಿತದಲ್ಲಿ 8 ಮಂದಿ ಕಾರ್ಮಿಕರು ಸಿಲುಕಿದ್ದು, ಈಗಾಗಲೇ 48 ಕಾರ್ಮಿಕರನ್ನು ರಕ್ಷಿಸಲಾಗಿದೆ.ಇದನ್ನೂ ಓದಿ: ತಲೆ ಬುರುಡೆ ಛಿದ್ರ, ಕಿವಿ ಕಟ್ – 56 ಕಡೆ ಕೊಚ್ಚಿ ಕಾಂಗ್ರೆಸ್ ಮುಖಂಡನ ಭೀಕರ ಹತ್ಯೆ
Advertisement
Advertisement
ಈ ಕುರಿತು ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಕುಸಿತದಿಂದಾಗಿ ಸುರಂಗದ ಪ್ರವೇಶದ್ವಾರ ಮುಚ್ಚಿಕೊಂಡಿದ್ದು, ಪರ್ಯಾಯ ಸುರಂಗ ಮಾರ್ಗದ ಮೂಲಕ ಕಾರ್ಮಿಕರನ್ನು ರಕ್ಷಿಸಲು ಚಿಂತಿಸಲಾಗಿದೆ. ಸದ್ಯ ಸ್ಥಳಕ್ಕೆ ಸುರಂಗ ಕೊರೆಯುವ ಯಂತ್ರಗಳನ್ನು ಕರೆತರಲಾಗಿದ್ದು, ಇನ್ನಷ್ಟು ಯಂತ್ರಗಳನ್ನು ತರಲು ಸಿದ್ಧತೆ ನಡೆಸಿದೆ ಅಧಿಕಾರಿಯೊಬ್ಬರು ಮಾಹಿತಿ ನಿಡಿದ್ದಾರೆ.
Advertisement
ರಕ್ಷಣಾ ತಂಡವು ಭಾನುವಾರ ರಾತ್ರಿ ಲೋಕೋಮೋಟಿವ್‌ನ ಸಹಾಯದಿಂದ 11 ಕಿ.ಮೀ ಹಾಗೂ ಕನ್ವೇಯರ್ ಬೆಲ್ಟ್ನ ನೆರವಿನಿಂದ 2 ಕಿ.ಮೀ ಕ್ರಮಿಸಿದ್ದೇವೆ. ಈ ವೇಳೆ ಕಾರ್ಮಿಕರ ಹೆಸರಿನಿಂದ ಕೂಗಿದ್ದು, ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಇನ್ನೂ ಸುರಂಗದ ಕೊನೆಯ 2 ಕಿ.ಮೀ ಪ್ರದೇಶವು ನೀರಿನಿಂದ ತುಂಬಿದ್ದು, ಅದನ್ನು ಸ್ವಚ್ಛಗೊಳಿಸಿದ ಬಳಿಕ ಮುಂದೆ ಸಾಗಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.
Advertisement
ಸದ್ಯ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವ ಉದ್ದೇಶದೊಂದಿಗೆ ವಿಪತ್ತು ನಿರ್ವಹಣಾ ಪಡೆಗಳು ಕಾರ್ಯನಿರ್ವಹಿಸುತ್ತಿದ್ದು, ಸುರಂಗದೊಳಗೆ ಸಿಲುಕಿರುವವರನ್ನು ಹೊರತರುವುದು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳಿಗೆ ಸವಾಲಾಗಿ ಪರಿಣಮಿಸಿದೆ.
ಸುರಂಗದ ಒಳಗಿನ ಸ್ಥಳಕ್ಕೆ ಹೋಗಲು ಯಾವುದೇ ಅವಕಾಶವಿಲ್ಲ. ಅದು ಸಂಪೂರ್ಣವಾಗಿ ಕುಸಿದಿದ್ದು, ಮಣ್ಣು ತುಂಬಿಕೊಂಡಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಇತರ ರಕ್ಷಣಾ ತಂಡಗಳು, ಸಿಂಗರೇಣಿ ಕಾಲಿಯರೀಸ್‌ನ ಅಧಿಕಾರಿಗಳು ಕುಸಿದು ಬಿದ್ದ ಭಾಗದ ಸುರಂಗವನ್ನು ಪರಿಶೀಲಿಸಿದ್ದು, ಮುಂದಿನ ಕಾರ್ಯಾಚರಣೆಗೆ ಯೋಜನೆ ರೂಪಿಸುವತ್ತ ಗಮನ ಹರಿಸಿದ್ದಾರೆ.
ಘಟನೆ ಏನು?
ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದು 8 ಮಂದಿ ಕಾರ್ಮಿಕರು ಸಿಲುಕಿದ್ದು, ಘಟನೆಯಲ್ಲಿ 48 ಕಾರ್ಮಿಕರನ್ನು ರಕ್ಷಿಸಿದ್ದಾರೆ. ಸುರಂಗ ನಿರ್ಮಾಣ ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಸುರಂಗದಲ್ಲಿ 12-13 ಕಿಮೀ ಒಳಗೆ ಸೋರಿಕೆ ಉಂಟಾಗಿತ್ತು. ಅದನ್ನು ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಎಡಭಾಗದಲ್ಲಿರುವ ಸುರಂಗದ ಮೇಲ್ಛಾವಣಿ ಮೂರು ಮೀಟರ್‌ಗಳಷ್ಟು ಕುಸಿದಿತ್ತು.ಇದನ್ನೂ ಓದಿ: ಕಲಬುರಗಿ | ಜಿಮ್ಸ್ ಆಸ್ಪತ್ರೆಯ ವೈದ್ಯರ ಎಡವಟ್ಟು – ಬಾಣಂತಿ ಹೊಟ್ಟೆಯಲ್ಲೇ ಬಟ್ಟೆ ಉಂಡೆ, ಹತ್ತಿ ಬಿಟ್ಟು ಹೊಲಿಗೆ