ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ನಿರ್ಮಾಣ ಆಗುತ್ತಿರುವ ಸ್ಟೀಲ್ ಬ್ರಿಡ್ಜ್ ಫ್ಲೈ ಓವರ್ (Steel Bridge) ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಹೆಸರು ಇಡಬೇಕು ಎಂದು ಬಿಬಿಎಂಪಿಗೆ ಮನವಿ ಮಾಡಲಾಗಿದೆ. ಶಿವಾನಂದ ಸರ್ಕಲ್ (Shivananda Circle) ಬಳಿಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಇರುವುದರಿಂದ ಪುನೀತ್ ಅವರ ಹೆಸರನ್ನು ಈ ಬ್ರಿಡ್ಜ್ ಗೆ ಇಡಬೇಕು ಎಂದು ಡಾ.ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯೂ ಆಗಿರುವ ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ (Ramesh) ಮನವಿ ಮಾಡಿದ್ದಾರೆ.
Advertisement
ಪುನೀತ್ ರಾಜ್ ಕುಮಾರ್ ಕೇವಲ ಸಿನಿಮಾ ರಂಗಕ್ಕೆ ಮಾತ್ರವಲ್ಲ, ಸಮಾಜಕ್ಕೂ ಅದ್ಭುತ ಸಂದೇಶವನ್ನು ಸಾರಿದ್ದಾರೆ. ಸಮಾಜಮುಖಿ ಕೆಲಸಗಳಲ್ಲೂ ಭಾಗಿಯಾಗಿದ್ದಾರೆ. ಬೆಂಗಳೂರಿಗೂ ಅವರ ಕೊಡುಗೆ ಸಾಕಷ್ಟಿದೆ. ಅವರ ನೆನಪು ನಮ್ಮೊಂದಿಗೆ ಶಾಶ್ವತವಾಗಿ ಇರಬೇಕು. ಹಾಗಾಗಿ ಮಹಾನಗರ ಪಾಲಿಕೆಗೆ ಮನವಿ ಮಾಡಿರುವೆ. ಶಿವಾನಂದ ಸರ್ಕಲ್ ಬಳಿ ಇರುವ ಸ್ಟಿಲ್ ಬ್ರಿಡ್ಜ್ ಗೆ ಅಪ್ಪು ಹೆಸರು ಇಡುತ್ತಾರೆ ಎನ್ನುವ ವಿಶ್ವಾಸ ನನ್ನದು ಅಂದಿದ್ದಾರೆ. ಇದನ್ನೂ ಓದಿ:`ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ
Advertisement
Advertisement
ಈ ಬ್ರಿಡ್ಜ್ ಗೆ ಶಿವಾನಂದ ಸ್ಟೋರ್ ನವರ ಹೆಸರು ಇಡಲು ಮಾತುಕತೆ ನಡೆದಿತ್ತು. ಇದನ್ನು ವಿರೋಧಿಸಿರುವ ರಮೇಶ್, ಇವತ್ತು ಸ್ಟಿಲ್ ಬ್ರಿಡ್ಜ್ ತಡವಾಗುವುದಕ್ಕೆ ಕಾರಣ, ಶಿವಾನಂದ ಸ್ಟೋರ್ ನವರು. ಹಾಗಾಗಿ ಅವರು ಹೆಸರನ್ನು ಇಡಬಾರದು. ಎಲ್ಲರ ಒಳಿತಿಗಾಗಿ ಬದುಕಿದ್ದ ಪುನೀತ್ ರಾಜ್ ಕುಮಾರ್ ಹೆಸರನ್ನೇ ಅಂತಿಮಗೊಳಿಸಬೇಕು ಎಂದು ರಮೇಶ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (BBMP) ಮನವಿ ಮಾಡಿದ್ದಾರೆ.