ಕಾರವಾರ: ಶೈಕ್ಷಣಿಕ ವರ್ಷದ ಆರಂಭದಲ್ಲೇ ಉತ್ತರ ಕನ್ನಡದ (Uttara Kannada) ಶಿರಸಿಯ (Sirsi) 94 ಹಾಗೂ ಕಾರವಾರದ (Karwar) 80 ಶಾಲೆಗಳಲ್ಲಿ (School) ಬಿಸಿಯೂಟಕ್ಕೆ (Mid Day Meal) ನೀರಿನ ಸಮಸ್ಯೆ (Water Scarcity) ಎದುರಾಗಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮಳೆಯಾಗುತಿತ್ತು. ಇದರಿಂದ ಬಿಸಿಲಿದ್ದರೂ ನೀರಿನ ಕೊರತೆ ಆಗುತ್ತಿರಲಿಲ್ಲ. ಆದರೇ ಈ ವರ್ಷ ಜಿಲ್ಲೆಯಲ್ಲಿ ಮಳೆಯಾಗದ ಕಾರಣ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಇದನ್ನೂ ಓದಿ: ಮೋದಿಯನ್ನು ದೇವರೊಂದಿಗೆ ಚರ್ಚೆಗೆ ಬಿಟ್ಟರೆ, ನಾನೇನು ಸೃಷ್ಟಿ ಮಾಡಿದೆ ಅಂತ ದೇವರಿಗೇ ಕನ್ಫ್ಯೂಸ್ ಆಗುತ್ತೆ – ರಾಗಾ
Advertisement
Advertisement
ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲೆಗಳ ಕುಡಿಯುವ ನೀರಿನ ಸ್ಥಿತಿಗತಿಯ ಬಗ್ಗೆ ಶಿಕ್ಷಣ ಇಲಾಖೆ (Department of School Education and Literacy) ಅಧ್ಯಯನ ನಡೆಸಿದೆ. ಇದರ ಅನ್ವಯ 94 ಶಾಲೆಗಳ ಬಾವಿ ಸಂಪೂರ್ಣ ಬರಿದಾಗಿದೆ. ಉಳಿದ ಹಲವು ಶಾಲೆಗಳ ಬಾವಿಯಲ್ಲಿ ಅಲ್ಪ ಸ್ವಲ್ಪ ನೀರಿದ್ದು, ಮಳೆ ಆರಂಭವಾಗದಿದ್ದರೆ ಕೊರತೆ ಉಂಟಾಗಲಿದೆ. ಶಿರಸಿ 23 ಶಾಲೆಗಳು, ಸಿದ್ದಾಪುರ 25, ಯಲ್ಲಾಪುರ 6, ಮುಂಡಗೋಡ 5, ಹಳಿಯಾಳ ತಾಲೂಕಿನ 17 ಹಾಗೂ ಜೊಯಿಡಾ ತಾಲೂಕಿನಲ್ಲಿ 18 ಶಾಲೆಗಳಲ್ಲಿ ನೀರು ಸಂಪೂರ್ಣ ಬರಿದಾಗಿದೆ.
Advertisement
Advertisement
ಶಿರಸಿಯ ಬನವಾಸಿ ಭಾಗದಲ್ಲಿ 7, ಬಂಡಲ ಭಾಗದಲ್ಲಿ 8 ಶಾಲೆಗಳಲ್ಲಿ ನೀರಿಲ್ಲ. ಉಳಿದ ಪಂಚಾಯ್ತಿಗಳಲ್ಲಿ ತಲಾ ಒಂದೆರಡು ಶಾಲೆಗಳ ಬಾವಿಗಳು ಬತ್ತಿವೆ. ಯಲ್ಲಾಪುರದ ಮಾವಿನಮನೆ, ವಜ್ರಳ್ಳಿ ಭಾಗದ ಶಾಲೆಗಳು, ಮುಂಡಗೋಡದ ಚೌಡಳ್ಳಿ ಭಾಗದ ಶಾಲೆಗಳು, ಜೊಯಿಡಾದ ಅಣಶಿ, ಕುಂಬಾರವಾಡಾ, ಪ್ರಧಾನಿ ಭಾಗದ ಶಾಲೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಇನ್ನು ಕಾರವಾರದ 80 ಶಾಲೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕುಮಟಾದಲ್ಲಿ 32 ಶಾಲೆಗಳ ಬಾವಿಗಳು ಸಂಪೂರ್ಣ ನೀರು ಬತ್ತಿಹೋಗಿದ್ದು ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಅರ್ಧ ದಿನ ಮಾಡಿ:
ಜಿಲ್ಲೆಯ ಗ್ರಾಮೀಣ ಭಾಗದ 174 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಇದರಿಂದ ಶಾಲೆಗಳ ಬಿಸಿಯೂಟ ಹಾಗೂ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲು ಸಹ ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಶಾಲೆಗಳನ್ನು ಮುಂಗಾರು ಮಳೆ ಪ್ರಾರಂಭವಾಗುವ ವರೆಗೂ ಅರ್ಧ ದಿನಕ್ಕೆ ಮೊಟಕು ಗೊಳಿಸಬೇಕು ಎಂದು ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ್ ಶಟ್ಟಿಯವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಗಾ ಭಾಷಣದ ಮಧ್ಯೆ ಮೊಳಗಿತು ಖಲಿಸ್ತಾನ್ ಜಿಂದಾಬಾದ್ ಘೋಷಣೆ