ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ರಿಪಬ್ಲಿಕನ್ ಪಕ್ಷದ ನಾಯಕ ಹಿಂದೂ (Hindu) ಧರ್ಮ ಮತ್ತು ಹನುಮಂತನ ಮೂರ್ತಿಯ ಬಗ್ಗೆ ಪೋಸ್ಟ್ ಮಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ
ಟೆಕ್ಸಾಸ್‌ನಲ್ಲಿ ತಲೆ ಎತ್ತಿರುವ 90 ಅಡಿ ಎತ್ತರದ ಹನುಮಂತನ ಪ್ರತಿಮೆಯ (Hanuman Statue) ಬಗ್ಗೆ ಟೆಕ್ಸಾಸ್‌ನ ರಿಪಬ್ಲಿಕನ್ ಪಕ್ಷದ ಸಂಸದ ಅಲೆಕ್ಸಾಂಡರ್ ಡಂಕನ್ (Alexander Duncan) ಪೋಸ್ಟ್ ಹಾಕಿ ಟೀಕಿಸಿದ್ದಾರೆ.
Why are we allowing a false statue of a false Hindu God to be here in Texas? We are a CHRISTIAN nation!pic.twitter.com/uAPJegLie0
— Alexander Duncan (@AlexDuncanTX) September 20, 2025
“ಟೆಕ್ಸಾಸ್‌ನಲ್ಲಿ ಸುಳ್ಳು ಹಿಂದೂ ದೇವರ ಸುಳ್ಳು ಪ್ರತಿಮೆಯನ್ನು ನಾವು ಏಕೆ ಅನುಮತಿಸುತ್ತಿದ್ದೇವೆ? ನಮ್ಮದು ಕ್ರಿಶ್ಚಿಯನ್ ರಾಷ್ಟ್ರ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೊಂದು ಪೋಸ್ಟ್‌ನಲ್ಲಿ ನಾವು ದೇವರ ಅಡಿಯಲ್ಲಿ ಒಂದೇ ರಾಷ್ಟ್ರ ಎಂಬುದನ್ನು ಮರೆಯಬಾರದು ಮತ್ತು ದೇವರು ಒಬ್ಬನೇ ಅದು ಯೇಸು ಕ್ರಿಸ್ತನು. ಆತ ರಾಜಾಧಿರಾಜ ಮತ್ತು ಪ್ರಭುಗಳ ಪ್ರಭು ಎಂಬುದನ್ನು ಎಂದಿಗೂ ಮರೆಯಬಾರದು ಎಂದು ಮತ್ತೊಂದು ಪೋಸ್ಟ್ ಹಾಕಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
Let us never forget that we are one nation under God, and that God is the one true living God, Jesus Christ, the King of Kings and Lord of Lords.
— Alexander Duncan (@AlexDuncanTX) September 23, 2025