ಬೆಂಗಳೂರು: ಭಾನುವಾರ ಜನವರಿ 26ರಂದು 71ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಇಡೀ ದೇಶವೇ ಸಿದ್ಧವಾಗುತ್ತಿದೆ.
ಗಣರಾಜ್ಯೋತ್ಸವದ ಪ್ರಯುಕ್ತ ನಗರದಲ್ಲಿ ರಂಗೋಲಿ ಸ್ಪರ್ಧೆ ಕೂಡ ನಡೆದಿದೆ. ಒಂದೇ ರಂಗೋಲಿಯನ್ನ 300 ವಿದ್ಯಾರ್ಥಿಗಳು ಸೇರಿ ಮೂಡಿಸಿದ್ದಾರೆ. ನಮ್ಮ ರಾಷ್ಟ್ರ ಧ್ವಜವನ್ನ ರಂಗೋಲಿ ಮೂಲಕ ವಿದ್ಯಾರ್ಥಿಗಳು ಬಿಡಿಸಿದ್ದಾರೆ.
Advertisement
Advertisement
3000 ಸ್ಕ್ವಯರ್ ಫೀಟ್‍ನಲ್ಲಿ ಕೇಸರಿ ಬಿಳಿ ಹಸಿರು ಬಣ್ಣದ ತ್ರಿವರ್ಣ ಧ್ವಜದ ರಂಗೋಲಿ ಇದು. ಬೆಂಗಳೂರಿನ ಜಯನಗರದ ಕಿತ್ತೂರುರಾಣಿ ಚೆನ್ನಮ್ಮ ಆಟದ ಮೈದಾನದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಈ ವಿಶೇಷ ರಂಗೋಲಿಯನ್ನ 300 ಜನ ವಿದ್ಯಾರ್ಥಿಗಳು ಶಿಕ್ಷಕರು ಸೇರಿಕೊಂಡು ರಚಿಸಿದ್ದಾರೆ.
Advertisement
ಭಾನುವಾರ ನಡೆಯುವ ಗಣರಾಜ್ಯೋತ್ಸವದ ಮುಖ್ಯ ಆಕರ್ಷಣೆಯಾಗಿ ನಮ್ಮ ತ್ರಿವರ್ಣ ಧ್ವಜದ ರಂಗೋಲಿ ಕಂಗೋಳಿಸಲಿದೆ.