ವಿರಾಟ್‍ನನ್ನು ಬೀಳ್ಕೊಟ್ಟ ಪ್ರಧಾನಿ, ರಾಷ್ಟ್ರಪತಿ

Public TV
2 Min Read
virat horse

ನವದೆಹಲಿ: ರಾಷ್ಟ್ರಪತಿ ಅವರ ಅಂಗರಕ್ಷಕ ತಂಡದಲ್ಲಿದ್ದ ವಿರಾಟ್‍ಗೆ ಇದೇ ಕೊನೆಯ ಗಣರಾಜ್ಯೋತ್ಸವವಾಗಿದ್ದು, ನಿವೃತ್ತಿ ಹೊಂದಿದೆ. ಈ ಕುದುರೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೀಳ್ಕೊಟ್ಟಿದ್ದಾರೆ.

virat horse 2

73ನೇ ಗಣರಾಜ್ಯೋತ್ಸವ ಪರೇಡ್ ಮುಕ್ತಾಯವಾದ ಬಳಿಕ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರ ಅಂಗರಕ್ಷಕರು ಅವರನ್ನು ಮತ್ತೆ ರಾಷ್ಟ್ರಪತಿ ಭವನಕ್ಕೆ ಕರೆದೊಯ್ದರು. ಆದರೆ, ಎಲ್ಲರ ಗಮನ ಸೆಳೆದಿದ್ದು ಅಂಗರಕ್ಷಕ ತಂಡದಲ್ಲಿದ್ದ ವಿರಾಟ್ ಎಂಬ ವಿಶೇಷ ಕುದುರೆ.

virat horse 1

ಗಣರಾಜ್ಯೋತ್ಸವ ಪರೇಡ್‍ಗಳಲ್ಲಿ ಈ ಕುದುರೆ 13 ಬಾರಿ ಭಾಗವಹಿಸಿದೆ. ಜನವರಿ 15 ರಂದು ಸೇನಾ ದಿನದ ಹಿಂದಿನ ದಿನದಂದು ವಿರಾಟ್‍ಗೆ ಸೇನಾ ಮುಖ್ಯಸ್ಥರಿಂದ ಶ್ಲಾಘನೆ ದೊರೆತಿತ್ತು. ವಿರಾಟ್ ಅಸಾಧಾರಣ ಸೇವೆ ಮತ್ತು ಸಾಮಥ್ರ್ಯಗಳಿಗಾಗಿ ಪ್ರಶಂಸೆಯನ್ನು ಪಡೆದ ಮೊದಲ ಕುದುರೆಯಾಗಿದೆ.

ಹ್ಯಾನೋವೇರಿಯನ್ ತಳಿಯ ಈ ಕುದುರೆಯನ್ನು 2003ರಲ್ಲಿ ಅಂಗರಕ್ಷಕ ತಂಡಕ್ಕೆ ಸೇರಿಸಲಾಯಿತು. ಇದನ್ನು ರಾಷ್ಟ್ರಪತಿಗಳ ಅಂಗರಕ್ಷಕನ ಚಾರ್ಜರ್ ಎಂದೂ ಕರೆಯುತ್ತಾರೆ. ಗಣರಾಜ್ಯೋತ್ಸವದ ಪರೇಡ್ ಮತ್ತು ಕಳೆದ ವರ್ಷದ ಬೀಟಿಂಗ್ ದಿ ರಿಟ್ರೀಟ್ ಸಮಾರಂಭದಲ್ಲಿ ಈ ಕುದುರೆಗೆ ವಯಸ್ಸಾಗಿದ್ದರೂ, ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಇದನ್ನೂ ಓದಿ: ಗಣರಾಜ್ಯೋತ್ಸವ ಸಂಭ್ರಮ: ಮೋದಿ ಟೋಪಿ, ಶಾಲು ವಿಶೇಷತೆ ಏನು?

ಪ್ರತಿವರ್ಷ ಗಣರಾಜ್ಯೋತ್ಸವದಂದು, ಕುದುರೆ ಸವಾರರು ಉತ್ತಮವಾದ ಕೆಂಪು ಕೋಟುಗಳು, ಚಿನ್ನದ ಬಣ್ಣದ ಕವಚಗಳು ಮತ್ತು ಹೊಳಪಿನ ಪೇಟಗಳನ್ನು ಧರಿಸುತ್ತಾರೆ. ನಂತರ ರಾಷ್ಟ್ರಪತಿಗಳನ್ನು ವೇದಿಕೆಗೆ ಕರೆದೊಯ್ಯುತ್ತಾರೆ. ಆ ನಂತರದಲ್ಲಿ ರಾಷ್ಟ್ರಗೀತೆ ಪ್ರಾರಂಭವಾಗುತ್ತದೆ. ಇದನ್ನೂ ಓದಿ:  ರಾಜಪಥದಲ್ಲಿ ಭಾರತದ ವೈಭವ ಅನಾವರಣ

Share This Article
Leave a Comment

Leave a Reply

Your email address will not be published. Required fields are marked *