ನವದೆಹಲಿ: ಗಣರಾಜ್ಯೋತ್ಸವಕ್ಕೆ ಇನ್ನು ಒಂದೇ ವಾರ ಬಾಕಿ ಇದೆ. ದೆಹಲಿಯ ರಾಜಪಥ್‍ನಲ್ಲಿ ನಡೆಯುತ್ತಿದೆ ಪರೇಡ್ ಪೂರ್ವಾಭ್ಯಾಸ ನಡೆಯುತ್ತಿದೆ.
ಗಣರಾಜ್ಯೋತ್ಸವ ಕಾರ್ಯಕ್ರಮ, ಪರೇಡ್, ಸ್ಥಬ್ಧ ಚಿತ್ರಗಳ ಮೆರವಣಿಗೆ ಇಡೀ ದೇಶದ ಕೇಂದ್ರಬಿಂದು. ದೆಹಲಿಯ ಗಣರಾಜ್ಯೋತ್ಸವ ಪರೇಡ್ ಭಾರತದಲ್ಲಿ ಗಣರಾಜ್ಯೋತ್ಸವವನ್ನು ಗುರುತಿಸುವ ಪರೇಡ್‍ಗಳಲ್ಲಿ ಅತಿ ದೊಡ್ಡದು. ಮೂರು ದಿನಗಳ ಕಾಲ ನಡೆಯುವ ಭಾರತದ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿದೆ.
Advertisement
For first time in 75 yrs, Republic day parade to start 30 minutes late than scheduled time
Read @ANI Story | https://t.co/PTuiLwefCy#RepublicDay2022 pic.twitter.com/hO0V0crEa4
— ANI Digital (@ani_digital) January 18, 2022
Advertisement
ಇಂದು ದೆಹಲಿಯ ರಾಜಪಥ್‌ನಲ್ಲಿ ಕೊರೆಯುವ ಚಳಿ, ಹಿಮಪಾತದ ನಡುವೆ ಸೇನಾಪಡೆ ಯೋಧರು ಪರೇಡ್‍ಗೆ ಪೂರ್ವ ತಯಾರಿ ನಡೆಸುತ್ತಿರುವ ದೃಶ್ಯ ಮನಮೋಹಕವಾಗಿದೆ. ಸೇನೆಯಲ್ಲಿ ಶಿಸ್ತು, ಸಂಯಮ ಎಷ್ಟು ಇರುತ್ತದೆ, ಇರಬೇಕಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಪ್ರತಿವರ್ಷ ಹೊರದೇಶಗಳ ಗಣ್ಯರನ್ನು ಅತಿಥಿಗಳಾಗಿ ಆಹ್ವಾನಿಸಲಾಗುತ್ತದೆ. ಆದರೆ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿ ಸಾಂಕೇತಿಕವಾಗಿ ಸರಳವಾಗಿ ಕೊರೊನಾ ಮಾರ್ಗಸೂಚಿಗಳೊಂದಿಗೆ ಆಚರಿಸಲಾಗುತ್ತಿದೆ.
Advertisement
Delhi: Multi-layer security cover with facial recognition systems in place for R-Day celebration
Read @ANI Story | https://t.co/5x3K2wwwv0#RepublicDay2022 pic.twitter.com/8aYAJRnODr
— ANI Digital (@ani_digital) January 18, 2022
Advertisement
ಮೆರವಣಿಗೆಯು ರಾಷ್ಟ್ರಪತಿ ಭವನದಿಂದ ರಾಜಪಥದ ಉದ್ದಕ್ಕೂ, ಇಂಡಿಯಾ ಗೇಟ್‍ಗೆ ಮತ್ತು ಅಲ್ಲಿಂದ ಕೆಂಪು ಕೋಟೆಗೆ ಮೆರವಣಿಗೆ ಸಾಗುತ್ತದೆ. ಭಾರತದ ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುವುದರೊಂದಿಗೆ ಆರಂಭವಾಗುತ್ತದೆ. ಇದರ ನಂತರ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಹಲವಾರು ರೆಜಿಮೆಂಟ್‍ಗಳಿಂದ ಬ್ಯಾಂಡ್‍ಗಳೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ವಿವಿಧ ರಾಜ್ಯಗಳು ಅಲ್ಲಿನ ಸಂಸ್ಕೃತಿಗಳನ್ನು ಸೂಚಿಸುವ ಸ್ಥಬ್ಧ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಬೀಟಿಂಗ್ ರಿಟ್ರೀಟ್ ಸಮಾರಂಭದೊಂದಿಗೆ ಮೆರವಣಿಗೆ ಕೊನೆಗೊಳ್ಳುತ್ತದೆ.