ನವದೆಹಲಿ: ಇತ್ತೀಚೆಗಷ್ಟೇ ವಿಶ್ವದ ಗಮನ ಸೆಳೆದಿದ್ದ ಬಾಲಕ ರಾಮ, ದೆಹಲಿಯ ಕರ್ತವ್ಯ ಪಥದ (Kartavya Path) ಗಣರಾಜ್ಯೋತ್ಸವ (Republic Day) ಪರೇಡ್‍ನಲ್ಲೂ ದೇಶದ ಗಮನ ಸೆಳೆದಿದ್ದಾರೆ.
ಉತ್ತರ ಪ್ರದೇಶದದಿಂದ ಬಾಲಕ ರಾಮನ (Balak Ram) ಮೂರ್ತಿಯ ಸ್ತಬ್ಧಚಿತ್ರ ಕರ್ತವ್ಯ ಪಥದಲ್ಲಿ ಸೇರಿದ್ದ ಜನರ ಗಮನ ಸೆಳೆದಿದೆ. ಕೈಯಲ್ಲಿ ಬಿಲ್ಲು ಬಾಣ ಹಿಡಿದ ಬಾಲಕ ರಾಮ, ಸ್ತಬ್ಧಚಿತ್ರ ನೋಡಲು ಸೇರಿದ್ದ ಜನರನ್ನು ಮಂತ್ರಮುಗ್ಧಗೊಳಿಸಿದ್ದ. ಈ ಮೂಲಕ ಜನ ರಾಮನ ಮೇಲಿರಿಸಿದ ಭಕ್ತಿ ಕರ್ತವ್ಯ ಪಥದಲ್ಲೂ ಅನಾವರಣಗೊಂಡಿದೆ. ಇದನ್ನೂ ಓದಿ: 75th Republic Day: ಗಮನಸೆಳೆದ ಪ್ರಧಾನಿ ಮೋದಿ ಪೇಟ
ಬಾಲಕ ರಾಮನೊಂದಿಗೆ ಉತ್ತರ ಪ್ರದೇಶದ ಮೆಟ್ರೋ ಕಾಮಗಾರಿ ಕುರಿತಾಗಿಯೂ ಅದೇ ಸ್ತಬ್ಧಚಿತ್ರದಲ್ಲಿ ತೋರಿಸಲಾಗಿದೆ. ಅಲ್ಲದೇ ಸೇನೆಯ ವಿಮಾನವನ್ನೂ ಸಹ ಇರಿಸಲಾಗಿದೆ. ಸ್ತಬ್ಧಚಿತ್ರದ ಸುತ್ತ ಕಲಾವಿದರ ಆಕರ್ಷಕ ನೃತ್ಯ ಪ್ರದರ್ಶನ ಸಹ ಮನಮೋಹಕವಾಗಿತ್ತು.
ಇನ್ನೂ ಪರೇಡ್‍ನಲ್ಲಿ ಡಿಆರ್‍ಡಿಓ ಸ್ತಬ್ಧಚಿತ್ರ ಸೇರಿದಂತೆ ಚಂದ್ರಯಾನ-3, ಲಡಾಕ್‍ನಲ್ಲಿ ಭಾರತೀಯ ಸೇನೆ, ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಬಾಲ್ಯದ ಸ್ತಬ್ಧಚಿತ್ರ, ರಾಜಸ್ಥಾನದ ಮಹಿಳೆಯ ಕಲಾತ್ಮಕ ನೃತ್ಯ, ಛತ್ತೀಸ್‍ಗಢದ ಬಸ್ತಾರ್ ಮುರಿಯಾ ದರ್ಬಾರ್, ಒಡಿಶಾದ ವಿಕಾಸ್ ಭಾರತದ ಅಡಿ ಮಹಿಳಾ ಸಬಲೀಕರಣದ ಸ್ತಬ್ಧಚಿತ್ರ, ಹರಿಯಾಣದ ಬಾಲಕಿಯರ ಶಿಕ್ಷಣಕ್ಕೆ ಬೆಂಬಲ ಸೂಚಿಸುವ ಸ್ತಬ್ಧಚಿತ್ರ, ಸೇರಿದಂತೆ ಆಕರ್ಷಕ ಪಥಸಂಚಲನದಲ್ಲಿ ಭಾರತೀಯ ಸೇನಾಪಡೆಯ ಮೂರು ದಳಗಳ ಶಕ್ತಿ ಸಾಮಥ್ರ್ಯ ಪ್ರದರ್ಶಿಸುವ ಕೆಲಸ ನಡೆಯಿತು.
ಪಥ ಸಂಚಲನದಲ್ಲಿ ಪಿನಾಕಾ ರಾಕೆಟ್ ಲಾಂಚರ್, ಶಸ್ತ್ರಾಸ್ತ್ರ ಪತ್ತೆಹಚ್ಚುವ ರಾಡರ್ ಸಿಸ್ಟಮ್, ಸರ್ವತ್ರ ಮೊಬೈಲ್ ಬ್ರಿಡ್ಜಿಂಗ್ ಸಿಸ್ಟಮ್, ಡ್ರೋನ್ ಜಾಮರ್ ಸಿಸ್ಟಮ್, ಪ್ರಚಂಡ, ರುದ್ರ ಹೆಲಿಕಾಪ್ಟರ್, ಸ್ವದೇಶಿ ನಿರ್ಮಿತ ಸೇನಾ ಶಸ್ತ್ರಾಸ್ತ್ರಗಳ ಪ್ರದರ್ಶನ, ಸಿಆರ್‍ಪಿಎಫ್ ಬ್ಯಾಂಡ್ ಪಥಸಂಚಲನ, ಬಿಎಸ್‍ಎಫ್ ಒಂಟೆ ರೆಜಿಮೆಂಟ್ ಪರೇಡ್ ನಡೆಸಿಕೊಡಲಾಯಿತು. ಜೊತೆಗೆ ಭಾರತೀಯ ವಾಯುಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಸಶಸ್ತ್ರ ಪೆÇಲೀಸ್ ಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಪರೇಡ್‍ನಲ್ಲಿ ಸೇನಾ ಸಾಮಥ್ರ್ಯ ಪ್ರದರ್ಶಿಸಿ ಗಮನ ಸೆಳೆದವು. ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ – ಮೇಳೈಸಿದ ಸಾಂಸ್ಕೃತಿಕ ವೈಭವ, ಸೇನಾ ಶಕ್ತಿಪ್ರದರ್ಶನವೇ ರೋಚಕ!