ಆತ್ಮನಿರ್ಭರ್ ಭಾರತಕ್ಕೆ ಹೊಸ ರೂಪ ನೀಡಿದ ದೆಹಲಿ ಮೆಟ್ರೋ

Public TV
1 Min Read
delhi metro

ನವದೆಹಲಿ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆತ್ಮನಿರ್ಭರ್ ಮಹತ್ವವನ್ನು ಸಾರಲು ವಿಶೇಷವಾಗಿ ಅಲಂಕರಿಸಿದ ಮೆಟ್ರೋವನ್ನು, ದೆಹಲಿ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಮಂಗುಸಿಂಗ್ ಯಮುನಾ ಬ್ಯಾಂಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಾರಂಭಿಸಿದರು.

ಈ ವಿಶೇಷ ರೈಲು ಆಜಾದಿ ಕಾ ಅಮೃತ ಮಹೋತ್ಸವದ ಸ್ಮರಣಾರ್ಥ ಪ್ರಾರಂಭಿಸಲಾಗಿದ್ದು, ಗಣರಾಜ್ಯೋತ್ಸವದ ನಿಮಿತ್ತ ಸಾಂಕೇತಿಕವಾಗಿ ಈ ರೈಲನ್ನು ಆರಂಭಿಸಲಾಗಿದೆ. ಇದು ಜನರ ಸೇವೆಯಲ್ಲಿ ಮುಂದುವರಿಯುತ್ತದೆ.

ಮೆಟ್ರೋದ ವಿಶೇಷತೆ: ತ್ರಿವರ್ಣ ಧ್ವಜದ ಬಣ್ಣಗಳಿಂದ ಕೂಡಿದ ಮೆಟ್ರೋದ ಹೊರಭಾಗವೂ ನೋಡಲು ಆಕರ್ಷಣೀಯವಾಗಿದೆ. ಈ ಮೇಟ್ರೋ ಒಟ್ಟಾರೆ 8 ಬೋಗಿಗಳನ್ನು ಹೊಂದಿದೆ. ಈ ಮೆಟ್ರೋದ ಹೊರಭಾಗದಲ್ಲಿ ಭಾರತೀಯರು, ಇಲ್ಲಿನ ಜನರ ಸಂಸ್ಕೃತಿ ಮತ್ತು ಕಳೆದ 75 ವರ್ಷಗಳಲ್ಲಿನ ಸಾಧನೆಗಳ ಇತಿಹಾಸವನ್ನು ಚಿತ್ರಿಸುವ ಮೂಲಕ ಆತ್ಮನಿರ್ಭರ್ ಭಾರತದ ಹೊಸ ಚೈತನ್ಯವನ್ನು ಮೂಡಿಸಿದ್ದಾರೆ. ಕೊರೊನಾ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು – ರಿಪೋರ್ಟ್ ಕಾರ್ಡ್ ತರಿಸಿಕೊಂಡ ಹೈಕಮಾಂಡ್!

delhi metro 1

ಡಿಎಂಆರ್‌ಸಿಯು ಕಳೆದ ವರ್ಷದಿಂದ ಆಜಾದಿ ಕಾ ಅಮೃತ ಮಹೋತ್ಸವ ಹಾಗೂ 75ನೇ ಭಾರತದ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥವಾಗಿ ಹಲವಾರು ಚಟುವಟಿಕೆಗಳನ್ನು ಆಯೋಜಿಸಿದ್ದು, ಅದರಲ್ಲಿ ಇದು ಒಂದಾಗಿದೆ. ದೆಹಲಿ ಪೊಲೀಸರ ಪ್ರಕಣೆಯ ಪ್ರಕಾರ ಭದ್ರತಾ ವ್ಯವಸ್ಥೆಗಳ ಭಾಗವಾಗಿ ಗಣರಾಜ್ಯೋತ್ಸವದಂದು ದೆಹಲಿ ಮೆಟ್ರೋದ ಸೇವೆಗಳನ್ನು ನಿಲ್ಲಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಬದಲಿಗೆ ಅಂಬೇಡ್ಕರ್‌, ಭಗತ್‌ ಸಿಂಗ್‌ರ ಫೋಟೋ ಅಳವಡಿಕೆ: ಕೇಜ್ರಿವಾಲ್‌

Share This Article
Leave a Comment

Leave a Reply

Your email address will not be published. Required fields are marked *