ನವದೆಹಲಿ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಟ್ಯಾಬ್ಲೋಗಳು ಯಾವುದು ಇರಬೇಕು? ಯಾವುದು ಇರಬಾರದು ಎನ್ನುವುದನ್ನು ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ನಿರ್ಧರಿಸುವುದಿಲ್ಲ. ಆದರೆ ರಾಜ್ಯಗಳು ವರ್ಷದಿಂದ ವರ್ಷಕ್ಕೆ ತಪ್ಪು ಮಾಹಿತಿಯನ್ನು ಬಳಸಿಕೊಂಡು ಕೇಂದ್ರದಿಂದ ಅವಮಾನವಾಗಿದೆ ಎಂಬ ಅದೇ ಹಳೆಯ ತಂತ್ರವನ್ನು ಮುಂದುವರಿಸಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಶ್ಚಿಮ, ಬಂಗಾಳ, ಕೇರಳ ಟ್ಯಾಬ್ಲೋಗಳಿಗೆ ಅನುಮತಿ ನೀಡದೇ ಅನ್ಯಾಯ ಮಾಡಲಾಗಿದೆ ಎಂಬ ಅರೋಪಕ್ಕೆ ಶೋಭಾ ಕರಂದ್ಲಾಜೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಹೇಳಿಕೆಯಲ್ಲಿ ಏನಿದೆ?
ಗಣರಾಜ್ಯೋತ್ಸವ ಪರೇಡ್‌ನಲ್ಲಿ ತಮ್ಮ ರಾಜ್ಯದ ಟ್ಯಾಬ್ಲೋಗಳನ್ನು ಹೊರಗಿಟ್ಟ ಬಗ್ಗೆ ರಾಜ್ಯದ ಸಿಎಂಗಳು ಇತ್ತೀಚೆಗೆ ಪತ್ರಗಳನ್ನು ಬರೆಯುತ್ತಿರುವುದನ್ನು ನಾವು ನೋಡಿದ್ದೇವೆ. ಇದು ಪ್ರಾದೇಶಿಕ ಅಭಿಮಾನದೊಂದಿಗೆ ತಪ್ಪಾಗಿ ತಳುಕು ಹಾಕಿಕೊಂಡಿದ್ದು, ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ಬಿಂಬಿಸಲಾಗುತ್ತಿದೆ. ಇದನ್ನೂ ಓದಿ: ಟ್ಯಾಬ್ಲೊ ವಿಚಾರದಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ – ಸಿಡಿದೆದ್ದ ರಾಜ್ಯಗಳು
Advertisement
ಬಹುಶಃ ಸಿಎಂಗಳಿಗೆ ತಮ್ಮದೇ ಆದ ಸಕಾರಾತ್ಮಕ ಅಜೆಂಡಾ ಇಲ್ಲ, ಅವರು ವರ್ಷದಿಂದ ವರ್ಷಕ್ಕೆ ತಪ್ಪು ಮಾಹಿತಿಯನ್ನು ಬಳಸಿಕೊಂಡು ಅದೇ ಹಳೆಯ ತಂತ್ರವನ್ನು ಮುಂದುವರಿಸಿ ಕೇಂದ್ರದಿಂದ ಅವಮಾನ ಆಗಿದೆ ಎಂಬಂತೆ ಬಿಂಬಿಸುತ್ತಿದ್ದಾರೆ. ಟ್ಯಾಬ್ಲೋಗಳನ್ನು ಮೋದಿ ಸರ್ಕಾರ ನಿರ್ಧಾರ ಮಾಡುತ್ತಿಲ್ಲ. ಕಲೆ, ಸಂಸ್ಕೃತಿ, ಶಿಲ್ಪಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ ಸಂಯೋಜನೆ ಇತ್ಯಾದಿ ಕ್ಷೇತ್ರದ ಗಣ್ಯರನ್ನು ಒಳಗೊಂಡ ತಜ್ಞರ ಸಮಿತಿ ಸರಣಿ ಸಭೆ ನಡೆಸಿ ವಿವಿಧ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳಿಂದ ಸ್ವೀಕರಿಸಲಾದ ಟ್ಯಾಬ್ಲೋಗಳ ಪ್ರಸ್ತಾಪಗಳನ್ನು ಪರಿಶೀಲಿಸುತ್ತದೆ. ಥೀಮ್, ಪರಿಕಲ್ಪನೆ, ವಿನ್ಯಾಸ ಮತ್ತು ದೃಶ್ಯ ಈ ಮಾನದಂಡಗಳ ಆಧಾರದ ಮೇಲೆ ಶಿಫಾರಸು ಮಾಡಲಾಗುತ್ತದೆ.
Advertisement
ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ಗಾಗಿ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳಿಂದ ಒಟ್ಟು 56 ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿತ್ತು. ಈ 56 ರಲ್ಲಿ ಅಂತಿಮವಾಗಿ 21 ಪ್ರಸ್ತಾವನೆಗಳನ್ನು ಆಯ್ಕೆ ಮಾಡಲಾಗಿದೆ. ಸಮಯದ ಕೊರತೆಯಿಂದ ಕೆಲ ಪ್ರಸ್ತಾವನೆಗಳನ್ನು ತಿರಸ್ಕರಿಸುವುದು ಸಹಜ. ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಪ್ರಸ್ತಾವನೆಗಳನ್ನು ವಿಷಯ ತಜ್ಞರ ಸಮಿತಿಯು ಸರಿಯಾದ ಪ್ರಕ್ರಿಯೆ ಮತ್ತು ಸೂಕ್ತ ಚರ್ಚೆಯ ನಂತರ ತಿರಸ್ಕರಿಸಿದೆ. ಇದನ್ನೂ ಓದಿ: ಕೇರಳವನ್ನು ಪ್ರಶ್ನಿಸಬೇಕೇ ಹೊರತು ಕೇಂದ್ರವನ್ನಲ್ಲ: ಸಿದ್ದುಗೆ ಬಿಜೆಪಿ ತಿರುಗೇಟು
2018 ಮತ್ತು 2021 ರಲ್ಲಿ ಅದೇ ಮೋದಿ ಸರ್ಕಾರದ ಅಡಿಯಲ್ಲಿ ಅದೇ ಪ್ರಕ್ರಿಯೆ ಮತ್ತು ವ್ಯವಸ್ಥೆಯ ಮೂಲಕ ಕೇರಳದ ಪ್ರಸ್ತಾಪಗಳನ್ನು ಅಂಗೀಕರಿಸಲಾಗಿದೆ. ಅದೇ ರೀತಿ 2016, 2017, 2019, 2020 ಮತ್ತು 2021 ರಲ್ಲಿ ಅದೇ ಮೋದಿ ಸರ್ಕಾರ ಇದ್ದಾಗ ತಮಿಳುನಾಡಿನ ಟ್ಯಾಬ್ಲೋ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿತ್ತು.
2016, 2017, 2019 ಮತ್ತು 2021 ರಲ್ಲಿ ಮೋದಿ ಸರ್ಕಾರ ಆಡಳಿತದಲ್ಲಿದ್ದಾಗ ಪಶ್ಚಿಮ ಬಂಗಾಳದ ಪ್ರಸ್ತಾಪಗಳಿಗೆ ಅನುಮತಿ ನೀಡಲಾಗಿತ್ತು ಎಂಬುದನ್ನು ಸಹ ಗಮನಿಸಬೇಕು. ಈ ಬಾರಿಯ ಪರೇಡ್‌ನಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆಯ ಟ್ಯಾಬ್ಲೋ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರನ್ನು ಒಳಗೊಂಡಿದೆ. ಅದ್ದರಿಂದ ನೇತಾಜಿ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ.