ನವದೆಹಲಿ: 70ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ದೆಹಲಿಯ ರಾಜ್‍ಪಥ್‍ನಲ್ಲಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಬಾರಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಆಫ್ರೀಕಾದ ಅಧ್ಯಕ್ಷ ಸಿರಿಲ್ ರಾಮಪೋಸಾ ಅವರು ಆಗಮಿಸಿದ್ದಾರೆ. ಹಾಗೆಯೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಮರ್ ಜವಾನ್ ಜ್ಯೋತಿ ಬಳಿ ಭಾರತದ ಹೆಮ್ಮೆಯಾಗಿರುವ ಮೂರು ಸೇನಾ ಪಡೆಗಳ ಮುಖ್ಯಸ್ಥರ ಉಪಸ್ಥಿತಿ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ ಬಳಿ ಇರುವ “ಅಮರ್ ಜವಾನ್ ಜ್ಯೋತಿ” ಬಳಿ ದೇಶಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟ ಯೋಧರಿಗೆ ಪುಷ್ಪ ನಮನ ಸಲ್ಲಿಸಿ, ಎರಡು ನಿಮಿಷ ಹುತಾತ್ಮರಾಗಿರುವರ ಆತ್ಮಕ್ಕೆ ಶಾಂತಿ ದೊರಕಲೆಂದು ಮೌನಾಚರಣೆ ಮಾಡಿದರು. ಹಾಗೆಯೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಅಮರರಾದ ಭಾರತದ ಯೋಧರಿಗೆ ನಮನ ಸಲ್ಲಿಸಿದರು.
Advertisement
Advertisement
ಮಹಾತ್ಮ ಗಾಂಧಿ ಅವರ 150ನೇ ವರ್ಷದ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಕೇಂದ್ರ ಸರ್ಕಾರ ವಿಶೇಷವಾಗಿ ಮಹಾತ್ಮ ಗಾಂಧಿ ಅವರ ಪರಿಕಲ್ಪನೆ ಕುರಿತಾದ ಸ್ತಬ್ಧಚಿತ್ರಗಳನ್ನು ರಚಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿತ್ತು. ಹಾಗಾಗಿ ಎಲ್ಲಾ ರಾಜ್ಯಗಳು ಕೂಡ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಸಂಬಂಧಪಟ್ಟಂತಹ ವಿವಿಧ ಸ್ತಬ್ಧ ಚಿತ್ರಗಳನ್ನು ಇಂದು ಪ್ರದರ್ಶಿಸಲಿದೆ.
Advertisement
Advertisement
ರಾಜ್‍ಪಥ್‍ಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಮುಖ್ಯ ಅತಿಥಿ ದಕ್ಷಿಣ ಆಫ್ರೀಕಾದ ಅಧ್ಯಕ್ಷ ರಾಮಪೋಸಾ ಅವರನ್ನು ಮಾನ್ಯ ಪ್ರಧಾನ ಮಂತ್ರಿಯವರು ಸ್ವಾಗತಿಸಿದರು. ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೇರವೇರಿಸಿದರು. ಈ ವೇಳೆ 21 ಕುಶಾಲತೋಪು ಸಿಡಿಸಿ ರಾಷ್ಟ್ರ ಧ್ವಜಕ್ಕೆ ಹಾಗೂ ಭಾರತಾಂಭೆಗೆ ಸೇನಾ ಗೌರವ ಸಲ್ಲಿಸಲಾಯಿತು. ಬಳಿಕ ಭಾರತ ಸೇನೆಯಲ್ಲಿ ಸಾಧನೆ ಮಾಡಿದ ಯೋಧರಿಗೆ ಅತ್ಯುನ್ನತ ಸೇನಾ ಗೌರವ ಅಶೋಕ ಚಕ್ರವನ್ನು ರಾಷ್ಟ್ರಪತಿ ಅವರು ನೀಡಿ ಗೌರವಿಸಿದರು.
ಲ್ಯಾನ್ಸ್ ನಾಯಕ್ ನಾಜೀರ್ ಅಹಮದ್ ವಾನಿ ಅವರಿಗೆ ಮರಣೋತ್ತರ ಅಶೋಕ ಚಕ್ರ ಪ್ರದಾನ ಮಾಡಲಾಯಿತು. ಈ ಗೌರವವನ್ನು ನಾಜೀರ್ ಅಹಮದ್ ವಾನಿ ಅವರ ಪತ್ನಿ ಹಾಗೂ ತಾಯಿ ಅವರ ಪರವಾಗಿ ಪಡೆದರು. ಬಳಿಕ ಲೆ. ಜನರಲ್ ಅಸಿತ್ ಮಿಸ್ತ್ರಿ ಅವರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ಈ ಪಥಸಂಚಲದಲ್ಲಿ ಸೇನಾ ಚಕ್ರ ಪಡೆದಿರುವ ಯೋಧರ ಶಿಸ್ತಿನ ಪರೇಡ್ ಹಾಗೂ ಇದೇ ಮೊದಲ ಬಾರಿಗೆ ರಾಜ್‍ಪಥ್ ಮಾರ್ಗದಲ್ಲಿ ಲೆಫ್ಟಿನೆಂಟ್ ಭಾವನಾ ಕಸ್ತೂರಿ ಅವರ ನೇತೃತ್ವದ 144 ಯೋಧರ ಪರೇಡ್ ಎಲ್ಲರ ಗಮನ ಸೆಳೆಯಿತು. ಅದರಲ್ಲೂ ಸುಭಾಷ್‍ಚಂದ್ರ ಬೋಸ್ ಅವರು ಸ್ಥಾಪಿಸಿದ ರಾಷ್ಟ್ರೀಯ ಭಾರತೀಯ ಸೇನೆಯ ನಾಲ್ವರು ಭಾಗವಹಿಸಿದ್ದು ವಿಶೇಷವಾಗಿತ್ತು. ಬಳಿಕ ಅಶ್ವದಳ ಪಥಸಂಚಲನ ನಡೆಯಿತು. ನಂತರ ಅರ್ಜುನ್ ಟಿ-90 ಭೀಷ್ಮ ಟ್ಯಾಂಕ್, ಗಡಿಪ್ರತಿರೋಧಿ ವಾಹನ ಪ್ರದರ್ಶಿಸಲಾಯಿತು. ಹಾಗೆಯೇ ಭೂ ಮೇಲ್ಮೈ ಗಣಿ ಸ್ವಚ್ಛತಾ ವ್ಯವಸ್ಥೆಯ ತಂತ್ರಜ್ಞಾನ, ಕೆ-9 ವಜ್ರ ಟ್ಯಾಂಕ್, ಅಲ್ಟ್ರಾ ಲೈಟ್ ಹೌಟ್ಜ್, ಟಿಎಸ್‍ಟಿ ತಂತ್ರಜ್ಞಾನ ಹಾಗೂ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಭಾರತೀಯ ಸೇನೆ ಪ್ರದರ್ಶಿಸಿತು.
https://www.youtube.com/watch?v=QmK1zbMMIv4
https://www.youtube.com/watch?v=QxzTqdy-KS4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv