ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಆಚರಣೆ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ.
ಗಣರಾಜ್ಯೋತ್ಸವನ್ನು ಭಾರತದಲ್ಲಿ ಪ್ರತಿ ವರ್ಷ ಜನವರಿ 26 ರಂದು ಆಚರಿಸಲಾಗುತ್ತದೆ. ಆದರೆ ಈಗ ನೇತಾಜಿ ಹುಟ್ಟುಹಬ್ಬವಾದ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಆಚರಣೆ ಪ್ರಾರಂಭವಾಗಲಿದೆ ಎಂದು ಸರ್ಕಾರದ ಮೂಲಗಳು ಮಾಧ್ಯಮಗಳಿಗೆ ತಿಳಿಸಿದೆ. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ
Advertisement
Advertisement
ನರೇಂದ್ರ ಮೋದಿ ಸರ್ಕಾರವು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಪ್ರಮುಖ ಅಂಶಗಳನ್ನು ಆಚರಿಸಲು ಮತ್ತು ಸ್ಮರಿಸಲು ಯಾವಾಗಲೂ ಗಮನಕೊಡುತ್ತಾರೆ. ಅದಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿದೆ.
Advertisement
ಭಾರತದ ನೇತಾಜಿ ಎಂದೇ ಪ್ರಸಿದ್ಧಿ ಹೊಂದಿದ ಸುಭಾಷ್ ಚಂದ್ರ ಬೋಸ್ 23 ಜನವರಿ 1897 ರಂದು ಜನಿಸಿದರು. ಈ ಹಿಂದೆ ಸರ್ಕಾರವು ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸಲು ಪ್ರಾರಂಭಿಸಿತ್ತು. ಆದರೆ ಈಗ ಅವರ ಹುಟ್ಟಿದ ದಿನದಿಂದಲೇ ಗಣರಾಜ್ಯೋತ್ಸವ ಪ್ರಾರಂಭಿಸಲು ನಿರ್ಧರಿಸಿದೆ.
Advertisement
Republic Day Celebrations will now begin every year from January 23 instead of January 24 to include the birth anniversary of Subash Chandra Bose
Here's all you need to know: https://t.co/0bBqdRuNnH
— Mint (@livemint) January 15, 2022
ಅದೇ ರೀತಿ ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತಾ ದಿನ(ಸರ್ದಾರ್ ಪಟೇಲ್ ಅವರ ಜನ್ಮದಿನ), ನವೆಂಬರ್ 15 ಜನಜಾತಿಯ ಗೌರವ್ ದಿವಸ್(ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವ), ನವೆಂಬರ್ 26 ಅನ್ನು ಸಂವಿಧಾನದ ದಿನವಾಗಿ ಮತ್ತು ಡಿಸೆಂಬರ್ 26 ರಂದು ವೀರ್ ಬಾಲ್ ದಿವಸ್ (ಗುರು ಗೋವಿಂದ್ ಸಿಂಗ್ ಅವರ ನಾಲ್ವರು ಪುತ್ರರಿಗೆ ಗೌರವ) ದಿನವನ್ನು ಆಚರಿಸಲಾಗುತ್ತದೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತವಾಗಿ, ಸಂತೋಷವಾಗಿದ್ದಾರೆ: ಸಯ್ಯದ್ ಸಯೀದ್
ಕೇಂದ್ರ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ತೆರಳಿದ್ದ ಜಾಗಗಳನ್ನು ದೇಶಾದ್ಯಂತ ಪ್ರಚಾರ ಮಾಡಲು ಯೋಜನೆಗಳನ್ನು ರೂಪಿಸಿದೆ. ಅಕ್ಟೋಬರ್ 21, 1943 ರಂದು ಬೋಸ್ ಅವರು ‘ಆಜಾದ್ ಹಿಂದ್ ಫೌಜ್’ ಹೆಸರಿನ ಸೇನೆಯನ್ನು ಘೋಷಿಸಿದ್ದರು. ನೇತಾಜಿ ಸ್ಮರಣಾರ್ಥ ಕಾರ್ಯಕ್ರಮಗಳ ಭಾಗವಾಗಿ ಪ್ರವಾಸೋದ್ಯಮ ಸಚಿವಾಲಯವು ಪ್ರವಾಸಗಳನ್ನು ಆಯೋಜಿಸಲು ಮುಂದಾಗಿದೆ.