ಬೆಂಗಳೂರು: ನಾಳೆ ಗಣರಾಜ್ಯೋತ್ಸವದ ಸುದಿನ. ಈ ಸಂಭ್ರಮ, ಸಡಗರ ರಾಜ್ಯ ರಾಜಧಾನಿಯಲ್ಲಿ ಈಗಾಗಲೇ ಕಳೆಗಟ್ಟಿದೆ. ಇಡೀ ನಗರ ತಿರಂಗದ ಓಕುಳಿಯಲ್ಲಿ ಮಿಂದೆದ್ದಿದೆ.
ಸಿಲಿಕಾನ್ ಸಿಟಿ ಜನ ಡಿಫೆರೆಂಟ್ ಡಿಫೆರೆಂಟ್ ಸ್ಟೈಲ್ ಗಳನ್ನು ಮಾಡೋದ್ರಲ್ಲಿ ಎತ್ತಿದ ಕೈ. ಹಾಗೆಯೇ ಐಟಿ-ಬಿಟಿ ಬೆಡಗಿಯರು ಡಿಫರೆಂಟ್ ಆಗಿ ರಿಪಬ್ಲಿಕ್ ಡೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಗಾರ್ಡನ್ ಸಿಟಿ ಹುಡುಗಿಯರು ತಿರಂಗ ವರ್ಣದಲ್ಲಿ ಮಿಂಚುತ್ತಿದ್ದಾರೆ. ಕೇಸರಿ, ಬಿಳಿ, ಹಸಿರು ಬಣ್ಣದ ಉಡುಗೆಗಳನ್ನು ತೊಟ್ಟು ಸಂಭ್ರಮಿಸುತ್ತಿದ್ದಾರೆ.
ತಿರಂಗಾ ಫೇಸ್ ಪೇಂಟ್, ತಿರಂಗಾ ನೇಲ್ ಆರ್ಟ್, ತಿರಂಗಾ ಬಿಂದಿ, ತಿರಂಗಾ ಐ ಮೇಕಪ್, ಫೇಸ್ ಟ್ಯಾಟೂ ಹೀಗೆ ತ್ರಿವರ್ಣ ಧ್ವಜದ ಬಣ್ಣಗಳನ್ನು ಮೈ-ಮನದಲ್ಲಿ ಪ್ರರ್ದಶಿಸಿ, ಖದರ್ ತೋರಿಸುತ್ತಿದ್ದಾರೆ.
ಇನ್ನೂ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ 2 ಸಾವಿರ ಚದರ ಅಡಿಯಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ರಂಗೋಲಿಯಲ್ಲಿ ಹಾಕಲಾಗಿದೆ. ಇದ್ರ ಮೇಲೆ ರಾಷ್ಟ್ರ ಪ್ರಾಣಿ ಹುಲಿ, ರಾಷ್ಟ್ರ ಪಕ್ಷಿ ನವಿಲು, ಕಾಡನ್ನು ಚಿತ್ರೀಕರಿಸಲಾಗಿದೆ. ಈ ರಂಗೋಲಿಯನ್ನು ಎಲ್ ಐಸಿ ಕಾಲೋನಿಯ ಸುಮಾರು 150ಕ್ಕೂ ಹೆಚ್ಚು ಮಹಿಳೆಯರು 1 ಸಾವಿರ ಕೆ.ಜಿ ಬಣ್ಣದಲ್ಲಿ ರಂಗೋಲಿ ಹಾಕಿದ್ದಾರೆ. ಇದು ಕಾಡು ಬೆಳೆಸಿ, ನಾಡು ಉಳಿಸಿ ಎಂಬ ಸಂದೇಶವನ್ನು ಸಾರುತ್ತಿದೆ. ಇಡೀ ಆಟದ ಮೈದಾನ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಓಕುಳಿಯಲ್ಲಿ ಮಿಂದೆದ್ದಂತೆ ಭಾಸವಾಗುತ್ತಿದೆ. ಇಡೀ ರಾಜ್ಯದಲ್ಲಿ ಅತಿ ದೊಡ್ಡ ಪ್ರಮಾಣದ ರಂಗೋಲಿಯಾಗಿದೆ.
ಸಂವಿಧಾನದ ಮಹತ್ವ ಸಾರುವ ಜತೆಗೆ ಪರಿಸರವೇ ನಮ್ಮ ಭವಿಷ್ಯ, ಪರಿಸರ ಸಂರಕ್ಷಿಸಿ ಎಂಬುದನ್ನು ಸಾರುತ್ತಿದೆ. ಈ ಸಂಭ್ರಮದಲ್ಲಿ ಶಾಸಕಿ ಸೌಮ್ಯ ರೆಡ್ಡಿ ಸಹ ಭಾಗಿಯಾಗಿದ್ದರು. ಒಟ್ನಲ್ಲಿ ಸಿಲಿಕಾನ್ ಸಿಟಿಯಲ್ಲಿ ತಮ್ಮ ತಮ್ಮ ಕೆಲಸದಲ್ಲಿಯೇ ಬ್ಯುಸಿಯಾಗಿರೋ ಮಹಿಳೆಯರೇ ಹೆಚ್ಚು. ಅಂಥದ್ದರಲ್ಲಿ ಈ ಮಹಿಳೆಯರು ಡಿಫರೆಂಟ್ ಸ್ಟೈಲ್ ನಲ್ಲಿ ಭಾರತಾಂಬೆಗೆ ನಮನ ಸಲ್ಲಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv